ಯುಗಾದಿ 2023

 



ಹೊಸವರ್ಷ ಬಂತು ಬದುಕಿಗೆ 

ಹೊಸತು ತಂತು ನವ ಬಾಳಿಗೆ

ಮರವು ಚಿಗುರಿ ಹೂವು ಕಾಯಿ

ಚಿಗುರಬೇಕು ಬದುಕು ತಾಯಿ


ಎಣ್ಣೆ ಸ್ನಾನ ಬಿಸಿ ನೀರ ಜಳಕ ಮಾಡಿ

ಹೊಬಿಟ್ಟು ಉಂಡು ತಬ್ಬಿ ಹಾಡಿ

ರಾತ್ರಿ ಮೂಡೋ ತುಣುಕು ಚಂದ್ರನ ನೋಡಿ

ಬೇವು ಬೆಲ್ಲ ಸವಿದು ಆಶೀರ್ವಾದ ಬೇಡಿ


ದೇವರೇ ನೀಡು ಸುಖ ಭಾಗ್ಯ

ಬಾಳಿನಲಿ ಬೇಳಕೆ ಅರೋಗ್ಯ

ಕಷ್ಟಸುಖವು ಬೇವುಬೆಲ್ಲದಂತೆ

ನಿನ್ನ ನೆನೆವ ಭಾಗ್ಯ ಹಣತೆಯಂತೆ


ಮಾಮರಗಳು ಚಿಗುರಿ ನಿಂತಿದೆ

ಹಣ್ಣುಕಾಯಿ ನಮ್ಮ ಕೂಗಿ ಕರೆದಿದೆ

ಪ್ರಕೃತಿಯು ಸೊಬಗು ಕಂಡಿದೆ

ಹೊಸತು ಕಂಡ ಮನವು ಧನ್ಯ ಎಂದಿದೆ


ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು 

************ರಚನೆ********

ಡಾ.ಚಂದ್ರಶೇಖರ್. ಸಿ .ಏಚ್

Comments

Post a Comment