ನೀ ಏನು
ಎನ್ನ ಎದೆಯ ಬಗೆದು
ರಾಮನನ್ನು ತೋರಲು
ನೀ ಆಂಜನೇಯ ನೇನು
ಸತ್ಯಕ್ಕಾಗಿ ಸೇವೆ ಮಾಡಿ
ಮಸಣವ ಕಾದ ಸತ್ಯ
ಹರಿಶ್ಚಂದ್ರನು ನಿ ಏನು
ಏಕಲವ್ಯನ ಹೆಬ್ಬೆರಳು ತೆಗೆದ
ದ್ರೋಣಾಚಾರ್ಯನ ತಲೆ ತೆಗೆದ
ನೀ ಅರ್ಜುನನೆನು
ಪಗಡೆ ಆಟದಲ್ಲಿ ಕೌರವನ
ಮೋಸದಿ ಗೆಲ್ಲಿಸಿ ಮಹಾಭಾರತ
ನಡೆಸಿದ ಶಕುನಿಯೇನು
ಚಕ್ರವ್ಯೂಹ ಭೇದಿಸಲು ಆಗದೆ
ಸಿಲುಕಿ ಸಾವನ್ನಪ್ಪಿದ
ಅಭಿಮನ್ಯುವೇನು
ತೊಡೆ ತೋರಿ ತಟ್ಟಿದ
ದುರ್ಯೋಧನನಿಗೆ
ತೊಡೆಮುರುಸಿದ ಕೃಷ್ಣನೆನು
**********ರಚನೆ********
ಡಾ.ಚಂದ್ರಶೇಖರ್. ಸಿ. ಏಚ್
Comments
Post a Comment