ಬೆಳಕು ನೀನು




ಬಣ್ಣಗಳ ಬೆಳದಿಂಗಳಲ್ಲಿ ಬಂದಿಸಲೆ ನಿನ್ನಾ

ಸೂರ್ಯನ ಬೆಳಕಿನಲ್ಲಿ ಚುಂಬಿಸಲೆ ನಿನ್ನಾ

ನಕ್ಷತ್ರಗಳ ಸಾಲಿನಲ್ಲಿ ಸೆರೆ ಇಡಿಯಲೆ ನಿನ್ನಾ

ಕಣ್ಣ ನೋಟದಲ್ಲಿ ಸುಟ್ಟು ಬಿಡಲೇ ನಿನ್ನಾ


ಪ್ರೀತಿಯ ಬಲೆಯಲ್ಲಿನಾ ಹಕ್ಕೀ ನೀನು

ಮೋಡದ ಮರೆಯಲ್ಲಿನ ಚುಕ್ಕಿ ನೀನು

ಕನಸ್ಸುಗಳ ತವರಲ್ಲಿನ ನೆನಪು ನೀನು 

ಸಿಡಿದು ಮಿಂಚುವ ಮಿಂಚು ನೀನು 


ಬೆಳದಿಂಗಳು ಬಾಚಿ ತಬ್ಬಲು ನಿನ್ನಾ

ಬರಡು ಭೂಮಿಯಲ್ಲಿ ಹಸಿರು ನಕ್ಕಂತೆ ಇನ್ನಾ

ಮನಸ್ಸಿಗೆ ಏನೋ ಕುಣಿವ ಬಯಕೆ

ಕನಸ್ಸಿಗೆ ಭಾನಿಗೆ ಹಾರುವ ಬಯಕೆ


ನೂರು ಮಾತು ಮರೆತ ನೆನಪು

ಪ್ರಣಯ ಕುದಿವ ಮನದ ಹೊಳಪು

ಆಸೆಯ ಬಳ್ಳಿ ಹೂವು ಬಿಟ್ಟಿದೆ

ಚೆಲುವಿಗೆ ದುಂಬಿ ಮನ ಸೋತಿದೆ


*********ರಚನೆ**********

ಡಾ. ಚಂದ್ರಶೇಖರ್ ಸಿ. ಏಚ್

Comments

Popular posts from this blog

ಭಾವಗೀತೆ -51

ಭಾವ ಗೀತೆ-1

ಭಾವ ಗೀತೆ- 20