ಬೆಳಕಿಲ್ಲದ ಬದುಕು
ಬೆಳಕು ಮೂಡದ ಬದುಕು
ಅಸೆಗಳೆಂಬ ಸಿಹಿ ಹುಳುಕು
ಕನಸೆಂಬ ಕಹಿಯ ತುಣುಕು
ನುಂಗಬೇಕು ನಾವು ಮೆಲುಕು
ಬಿಸಿಲಿಗೆ ಬೆಂದಿತು ಜೀವ
ಬಾಳಿಗೆ ಬಡತನವೆಂಬ ರೋಗ
ಹಸಿವನ್ನು ತಾಳದೆ ಕೂಗ
ಕೇಳುವರು ಯಾರು ಬಾಗ
ಹೊಟ್ಟೆಗೆ ತಣ್ಣೀರು ಬಟ್ಟೆ
ಕಾಯಕ ಇಲ್ಲದೆ ನೀ ಕೆಟ್ಟೆ
ಮೊಸದಿ ಬದುಕನ್ನು ಸುಟ್ಟೆ
ದೇವರು ಕೊಟ್ಟ ಖಾಲೀ ತಟ್ಟೆ
ಮೇರೇವರು ದರ್ಪದಿ ಜನರು
ಬದುಕಲು ಯಾರನು ಬೀಡರು
ಮಾನವೀಯತೆಗೆ ಬೆಂಕಿ ಇಟ್ಟು
ಹಣದ ಅಹಂಕಾರದಲ್ಲಿ ಸುಟ್ಟು
ಹೊರಟಿಹರು ಯಾತ್ರೆ ಇವರದೇ ಜಾತ್ರೆ
********ರಚನೆ ,****†****
ಡಾ.ಚಂದ್ರಶೇಖರ್ ಸಿ ಏಚ್
Comments
Post a Comment