ಪ್ರಕೃತಿಯಲ್ಲಿ ಹೆಣ್ಣು
ನಲಿವಳು ಮೌನದ ತೀರದಲಿ
ಅಲೆವಳು ಬರಡು ಭೂಮಿಯಲಿ
ಕಾಡುವಳು ಕಣ್ಣ ಅಂಚಿನಲಿ
ನಗುವಳು ಕಡಲಿನ ಅಲೆಗಳಲಿ
ಮಾತು ಬಾಡಿದ ಹೂವಂತೆ
ನಯನ ನಾಚಿದ ಚೆಲುವಂತೆ
ಮುಂಗುರುಳು ಕನಸ ಕರೆದಂತೆ
ಹೃದಯ ಬಳ್ಳಿಯಲಿ ಬೆರೆತಂತೆ
ಕೈ ಇಡಿದು ಬೇರು ಮಣ್ಣಲಿ ಬೆರೆತು
ಜೀವಕೆ ನೀರು ಹನಿಯಂತೆ ಕಲೆತು
ಉಳಿದಿತು ಬದುಕು ನೋವ ಮರೆತು
ಹಸಿರು ಜೀವದಲಿ ಗಾಳಿ ತುಂಬಿತು
ಹೂವು ಬಿಟ್ಟು ಹಣ್ಣಾಗಿ ಮಾಣ್ಣಗುವೆ
ಹಸಿವಿನ ಜೀವಕೆ ಅಮೃತವಾಗುವೆ
ಬಿಸಿಲಿನ ಬೇಗೆಯಲಿ ನೆರಳಾಗುವೆ
ಕಣ್ಣ ಮುಚ್ಚಿ ನೆನೆ ನೀನ್ನಲಿ ನನಾಗುವೆ
***********ರಚನೆ********
ಡಾ.ಚಂದ್ರಶೇಖರ್ . ಸಿ. ಏಚ್
Comments
Post a Comment