ವಯಸ್ಸು ಹದಿನೆಂಟು

 



ವಯಸ್ಸು ಈಗ ಹದಿನೆಂಟು

ಕನಸ್ಸು ಬಂತು ನೂರೆಂಟು

ಮನಸು ಮನಸುಗಳ ನಂಟು

ಹದಿಹರೆಯವೆ ಇಗೆ ಕಗ್ಗಂಟು


ಕಣ್ಣು ಕಣ್ಣಲೆ ಒಳ್ಳೆ ಸಿಹಿ ಮಾತು

ಆಸೆ ಒಲವಿಗೆ ಬಿದ್ದಿದೆ ಜೋತು 

ಬಿಸಿಪ್ರಾಯ ಹುಕ್ಕುವ ವಯಸ್ಸು

ಏಕೋ ಸುಡುತಿದೆ ನನ್ನ ಮನಸ್ಸು 


ನಡೆವ ನಡಿಗೆಯೆ ತಂತು ಅಮಲು

ಪ್ರೀತಿ ಏಳಲು ಸುಮ್ನೆ ದಿಗಿಲು

ನಿನ್ನಯ ಹಿಂದೆ ನಾ ಬಂದೆ

ಸೊಗಸಿನ ಸೌಂದರ್ಯಕೆ ಬೆಂದೆ


ಹುಡುಗಿ ನೋಡಿ ನಿನ ಬಿಂಕ

ನಾನಾದೆ ಒಲವಲಿ ಮಂಕ

ನೀನು ಪ್ರೀತಿಯ ರಸಪಾಕ

ಸವಿದು ನಾನಾದೆ ಮೂಕ



**********ರಚನೆ********

ಡಾ.ಚಂದ್ರಶೇಖರ್. ಸಿ. ಏಚ್

Comments

Popular posts from this blog

ನೋವು ತುಂಬಿ

ಹಣತೆ ಆಳುತಿದೆ

Author biography of Chandrashekhar Channapura Halappa