ಮಕ್ಕಳ ಗೀತೆ -43
.jpeg)
🌹ಸೂರ್ಯನು ಹುಟ್ಟಿದನು🌹 ಹುಟ್ಟಿದನು ಸೂರ್ಯನು ಹುಟ್ಟಿದನು ನೆತ್ತರು ಚೆಲ್ಲುವ ಬಣ್ಣವ ಒತ್ತಿಹನು ಕತ್ತಲು ಕಳಚಿ ಬೆಳಕನು ಚೆಲ್ಲಿ ಭೂಮಿಯ ಬೆತ್ತಲು ಮಾಡಿಹನು ನೆಲದಿ ರಂಗೋಲಿ ಬಿತ್ತುವಂತೆ ಹೇಳಿಹನು ಮುಂಜಾನೆ ಎಂದು ಎಲ್ಲರ ಎಬ್ಬಿಸಿಹನು ಕೋಳಿಯ ಕೂಗಿಸಿ ಹಕ್ಕಿಯ ಹಾಡಿಸಿ ಭುವಿಯಲ್ಲಿ ನವ ಚೈತ್ರ ಮೂಡಿಸಿಹನು ಭೂಮಿಗೆ ಹಸಿರ ಹೊದಿಕೆ ಒದಿಸಿಹನು ಬಾನಲ್ಲಿ ನೀಲಿ ಬಣ್ಣವ ಚೆಲ್ಲಿಹನು ತಾನು ಸುಡತ ಆಕಾಶದಿ ಏರುತಾ ಪ್ರಪಂಚವ ಬೆಳಗಿ ಸುಮ್ಮನೆ ನಗುತಿಹನು ಮುಳುಗಿದನು ರವಿ ಮುಳುಗಿದನು ಬೆಂಕಿಯ ಹೋತ್ತು ಸಮುದ್ರದಿ ಮುಳುಗಿಹನು ಸುಟ್ಟವನು ತಂಪಾಗುತ್ತಾನೆ ನೀರಿನ ಅಲೆಯಲ್ಲಿ ಎನ್ನುತ ಭೂಮಿಗೆ ಕತ್ತಲು ಸುತ್ತಿಹನು *********ರಚನೆ******* ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ