ಮಕ್ಕಳ ಗೀತೆ -39
ನಾಡ ಧ್ವಜ
ಏರುತಿದೆ ಏರುತ್ತಿದೆ
ನಮ್ಮ ಪ್ರೀತಿ ಧ್ವಜ
ಹಾರುತಿದೆ ಹಾರುತಿದೆ
ನಮ್ಮ ನಾಡ ಧ್ವಜ
ಹಸಿರು ನೀಲಿ ಕೇಸರಿ ಬಣ್ಣ
ಸಾರುತಿದೆ ನಮ್ಮ ಜಗಕೆ
ಸ್ನೇಹ ಸಹಬಾಳ್ವೆಯ ನ್ಯಾಯ
ಧರ್ಮ ನೀತಿ ಯುಗಕ್ಕೆ
ಶಾಂತಿಯು ನಮ್ಮಯ
ದೇಶದ ಮೂಲ ಮಂತ್ರ
ಗಾಂಧಿ ನೆಹರು ಹೇಳಿದ
ಪ್ರೀತಿಯ ಗೆಲುವ ತಂತ್ರ
ಯಾಕೆ ಬೇಕು ಯುದ್ಧ
ಪ್ರೀತಿಸಲು ನಾವು ಸಿದ್ಧ
ಬೇಡ ನಮಗೆ ಕುತಂತ್ರ
ಬಯಸಿಹೆವು ಸ್ವತಂತ್ರ
ಏರಿಸಿ ಏರಿಸಿ ನಮ್ಮ ಬಾವುಟ
ಹಾರಿಸಿ ಹಾರಿಸಿ ಶಾಂತಿಪಟ
ಭಾರತೀಯರು ನಾವೆಲ್ಲ ಒಂದೇ
ತೋರಿಹೆವು ಪ್ರೀತಿ ನಿಮ್ಮ ಮುಂದೆ
ಏರುತಿದೆ ಏರುತ್ತಿದೆ
ನಮ್ಮ ಪ್ರೀತಿ ಧ್ವಜ
ಹಾರುತಿದೆ ಹಾರುತಿದೆ
ನಮ್ಮ ನಾಡ ಧ್ವಜ
*********ರಚನೆ**********
ಡಾ.ಚಂದ್ರಶೇಖರ್ ಚನ್ನಾಪುರ ಹಾಲಪ್ಪ
Comments
Post a Comment