ಮಕ್ಕಳ ಗೀತೆ -37
🌹ಕುಣಿಯಲಿ ಕನ್ನಡ 🌹
ಭಾವ ದೊಳಗೆ ನಲಿವ ಕನ್ನಡ
ನಮ್ಮ ಜೀವದಿ ಬೆರೆತ ಕನ್ನಡ
ನಾಡು ನುಡಿಯ ಗುಡಿ ಕನ್ನಡ
ಇದುವೇ ನಮ್ಮ ನಾಡು ಕನ್ನಡ
ಕವಿಗಳ ಸಾಲಲ್ಲಿ ಕುಣಿದ ಕನ್ನಡ
ಗಾಯಕರ ಕಂಠದಿ ಬೆರೆತ ಕನ್ನಡ
ಸುಂದರ ಸಂಗೀತದ ಚಿತ್ರ ಕನ್ನಡ
ಇದುವೇ ನಮ್ಮ ನಾಡು ಕನ್ನಡ
ವಿಜ್ಞಾನಿಗಳ ಸೆಲೆಯು ಕನ್ನಡ
ಅಣೆಕಟ್ಟುಗಳ ಬೀಡು ಕನ್ನಡ
ದೇವತೆಗಳ ಗುಡಿಯು ಕನ್ನಡ
ಇದುವೇ ನಮ್ಮ ನಾಡು ಕನ್ನಡ
ಪ್ರಕೃತಿಯ ಸೊಬಗು ಕನ್ನಡ
ನದಿವನಗಳ ಬೀಡು ಕನ್ನಡ
ಸಮುದ್ರದಲೆಯ ಸೆಳೆತ ಕನ್ನಡ
ಇದುವೇ ನಮ್ಮ ನಾಡು ಕನ್ನಡ
***********ರಚನೆ********
ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ
Comments
Post a Comment