2. ನಾವು ಸೇವಿಸುವ ಆಹಾರದಿಂದ ಸಂತೋಷ ಸಾಧ್ಯವೇ

 


2. ನಾವು ಸೇವಿಸುವ ಆಹಾರದಿಂದ ಸಂತೋಷ ಸಾಧ್ಯವೇ 

ಆಹಾರ ನಮ್ಮ ಹಸಿವನ್ನು ಹಿಂಗಿಸುತ್ತದೆ ಮತ್ತು ದೇಹಕ್ಕೆ ಬೇಕಾದ ಶಕ್ತಿಯನ್ನು ಒದಗಿಸುತ್ತದೆ ನಾವು ಜೀವಿಸಲು ಸಹಾಯ ಮಾಡುತ್ತದೆ. ಆಹಾರವು ನಮಗೆ ಸಂತೋಷವನ್ನು ಕೊಡುತ್ತದೆ. ಇದನ್ನು ಪ್ರತಿದಿನ ಮತ್ತು ಸಾಮಾಜಿಕ ಸಮಾರಂಭಗಳಲ್ಲಿ ಉಪಯೋಗಿಸುತ್ತೇವೆ ಹಾಗೂ ಆಹಾರವು ನಮ್ಮ ಬೆಳವಣಿಗೆ, ನಾವು ಕೆಲಸ ಮಾಡಲು ಶಕ್ತಿ ಮತ್ತು ಅಂಗಾಂಶಗಳ ಸರಿಪಡಿಸುವಿಕೆ ಹಾಗೂ ನಮ್ಮ ದೇಹದ ಚಲನವಲನಗಳಿಗೆ ಸರಿಯಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ

ಅಷ್ಟೇ ಅಲ್ಲ ಆಹಾರವು ನಮ್ಮ ಭಾವನೆಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಅವು ಯಾವುವು ಎಂದರೆ ಭದ್ರತೆ, ಪ್ರೀತಿ, ಗಮನ, ಸಂತೋಷ, ದುಃಖ ಮುಂತಾದ ಮಾನಸಿಕ ಕಾರ್ಯಗಳನ್ನು ನಿಭಾಯಿಸಲು ಸಹಾಯ ಮಾಡುತ್ತದೆ. ಪೌಷ್ಟಿಕಾಂಶದ ವಿಜ್ಞಾನವು ನಮ್ಮ ಆಹಾರವು ದೇಹವನ್ನು ಸೇರಿದಾಗ ಮತ್ತು ಸೇರಿದ ಮೇಲೆ ಯಾವ ಕಾರ್ಯಗಳು ಆಗುತ್ತವೆ, ಅಂದರೆ ಜೀರ್ಣಕ್ರಿಯೆ ನಡೆಯುವುದು ತಿಳಿಸುತ್ತದೆ. ಪೌಷ್ಟಿಕಾಂಶಗಳನ್ನು ರಾಸಾಯನಿಕ ವಸ್ತು ಎಂದು ತಿಳಿಯಬಹುದು, ಇದು ನಮ್ಮ ಆಹಾರದಲ್ಲಿ ಇರುತ್ತದೆ. ಅದು ಕಣ್ಣಿಗೆ ಕಾಣುವುದಿಲ್ಲ ನಮ್ಮ ದೇಹದ ಆರೋಗ್ಯಕ್ಕೆ ಪೋಸ್ಟಿಕಾಂಶವು ಒಳ್ಳೆಯದು.

ನಮ್ಮ ದೇಹಕ್ಕೆ ಬೇಕಾದ ಪೌಷ್ಟಿಕಾಂಶಗಳು ಯಾವುವೆಂದರೆ 

1. ಕಾರ್ಬೋಹೈಡ್ರೇಟ್ ಗಳು 

ಇವು ನಮ್ಮ ದೇಹಕ್ಕೆ ಇಂಧನವಿದ್ದ ಹಾಗೆ ಮತ್ತು ಶಕ್ತಿಯನ್ನು ಉತ್ಪತ್ತಿ ಮಾಡುತ್ತವೆ ನಮ್ಮ ದೈನಂದಿನ ಚಲನವಲನಗಳಿಗೆ ಸಹಾಯ ಮಾಡುತ್ತವೆ. 

ಕಾರ್ಬೋಹೈಡ್ರೇಟ್ ಗಳು ಅಧಿಕವಾಗಿರುವ ಆಹಾರಗಳು:
  • ಧಾನ್ಯಗಳು: ಅಕ್ಕಿ, ಗೋಧಿ, ಬಾರ್ಲಿ, ಜೋಳ.
  • ದ್ವಿದಳ ಧಾನ್ಯಗಳು: ಹೆಸರು, ಕಡಲೆ, ಬೇಳೆ, ಅವರೆಕಾಳು.
  • ತರಕಾರಿಗಳು: ಆಲೂಗಡ್ಡೆ, ಸಿಹಿ ಗೆಣಸು, ಬೀಟ್ಗೆಡ್ಡೆ, ಕ್ಯಾರೆಟ್.
  • ಹಣ್ಣುಗಳು: ಬಾಳೆಹಣ್ಣು, ಮಾವು, ಸೇಬು, ದ್ರಾಕ್ಷಿ, ಕಿತ್ತಳೆ.
  • ಹಾಲು ಮತ್ತು ಡೈರಿ ಉತ್ಪನ್ನಗಳು: ಹಾಲು, ಮೊಸರು, ಬೆಣ್ಣೆ , ತುಪ್ಪ, ಮಜ್ಜಿಗೆ.
  • ಸಕ್ಕರೆ ಮತ್ತು ಸಿಹಿತಿಂಡಿಗಳು: ಕ್ಯಾಂಡಿ, ಕೇಕ್, ಕುಕೀಸ್.
ಕಡಿಮೆ ಕಾರ್ಬೋಹೈಡ್ರೇಟ್ ಆಹಾರಗಳು:

  • ಮಾಂಸ, ಮೀನು, ಮೊಟ್ಟೆ, ಕೆಲವು ತರಕಾರಿಗಳು ಮತ್ತು ಬೀಜಗಳು.
  • ಆರೋಗ್ಯಕರ ಕಾರ್ಬೋಹೈಡ್ರೇಟ್ ಗಳನ್ನು ಆಯ್ಕೆ ಮಾಡಿಕೊಳ್ಳುವುದು ಮುಖ್ಯ.
  • ಸಂಸ್ಕರಿಸಿದ ಆಹಾರಗಳು ಮತ್ತು ಸಕ್ಕರೆ ಹೆಚ್ಚಿರುವ ಆಹಾರಗಳನ್ನು ಮಿತಿಗೊಳಿಸಬೇಕು. 

2. ಪ್ರೋಟೀನ್ 

 ನಮ್ಮ ದೇಹದಲ್ಲಿನ ಜೀವಕೋಶಗಳು ಅಂಗಾಂಶಗಳು ಸ್ನಾಯುಗಳ ಬೆಳವಣಿಗೆಗೆ ಸಹಾಯ ಮಾಡುತ್ತವೆ. ಒಂದು ಗ್ರಾಂ ಪ್ರೋಟೀನ್ ನಾಲ್ಕು ಕಿಲೋ ಕ್ಯಾಲೋರಿ ಶಕ್ತಿ ಕೊಡುತ್ತದೆ.

ಹೆಚ್ಚಿನ ಪ್ರೋಟೀನ್ ಆಹಾರಗಳು:
  • ಮೊಟ್ಟೆ:
    ಮೊಟ್ಟೆಗಳು ಪ್ರೋಟೀನ್‌ನ ಅತ್ಯುತ್ತಮ ಮೂಲವಾಗಿದೆ ಮತ್ತು ಬೆಳಗಿನ ಉಪಾಹಾರಕ್ಕೆ ಉತ್ತಮ ಆಯ್ಕೆಯಾಗಿದೆ.
  • ಚೀಸ್:
    ಚೀಸ್‌ನಲ್ಲಿ ಕ್ಯಾಲ್ಸಿಯಂ ಮತ್ತು ಪ್ರೋಟೀನ್ ಹೇರಳವಾಗಿದೆ, ಇದು ಡೈರಿ ಉತ್ಪನ್ನಗಳಲ್ಲಿ ಆರೋಗ್ಯಕರ ಆಯ್ಕೆಯಾಗಿದೆ.
  • ಕಾಳುಗಳು:
    ಕಾಳುಗಳು ಪ್ರೋಟೀನ್‌ನ ಸಸ್ಯ ಆಧಾರಿತ ಮೂಲವಾಗಿದೆ ಮತ್ತು ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ.
  • ಗ್ರೀಕ್ ಮೊಸರು:
    ಇದು ಪೌಷ್ಟಿಕಾಂಶ ಮತ್ತು ಪ್ರೋಟೀನ್ ಭರಿತ ಆಹಾರವಾಗಿದೆ.
  • ಸೋಯಾ ಮಿಲ್ಕ್:
    ಸೋಯಾ ಮಿಲ್ಕ್ ಕುಡಿಯುವುದರಿಂದ ದೇಹಕ್ಕೆ ಶಕ್ತಿ ಸಿಗುತ್ತದೆ ಮತ್ತು ಪ್ರೋಟೀನ್‌ನ ಉತ್ತಮ ಮೂಲವಾಗಿದೆ.
  • ಸೋಯಾ ಬೀನ್ಸ್:
    ಸೋಯಾ ಬೀನ್ಸ್‌ನಲ್ಲಿ ಪ್ರೋಟೀನ್, ಫೈಬರ್ ಮತ್ತು ಆಂಟಿಆಕ್ಸಿಡೆಂಟ್‌ಗಳು ಸಮೃದ್ಧವಾಗಿವೆ. 

ಇದಲ್ಲದೆ, ಮೀನು, ಕೋಳಿ, ನೇರ ಮಾಂಸ, ಬಟಾಣಿ, ಬಾದಾಮಿ, ಕಡಲೆ ಮತ್ತು ಮಸೂರ ಬೇಳೆ ಮುಂತಾದ ಆಹಾರಗಳಲ್ಲಿಯೂ ಹೆಚ್ಚಿನ ಪ್ರಮಾಣದ ಪ್ರೋಟೀನ್ ಕಂಡುಬರುತ್ತದೆ. 

3. ಕೊಬ್ಬು 

ಇದು ನಮ್ಮ ದೇಹಕ್ಕೆ ಬೇಕಾದ ಕೊಬ್ಬಿನಂಶ ಹಾಗೂ ಒಂದು ಗ್ರಾಂ ಕೊಬ್ಬು 9 ಕಿಲೋ ಕ್ಯಾಲೋರಿ ಶಕ್ತಿ ಕೊಡುತ್ತದೆ. ಕೊಬ್ಬಿನ ಅಂಶದಲ್ಲಿರುವ A,D,E,K ವಿಟಮಿನ್ಗಳು ಉಪಯೋಗಿಸಿಕೊಳ್ಳಲು ಸಹಾಯ ಮಾಡುತ್ತದೆ. 

ಹೆಚ್ಚಿನ ಕೊಬ್ಬಿನ ಆಹಾರಗಳು ಯಾವುವು?
ಕೆಲವು ಉದಾಹರಣೆಗಳು ಇಲ್ಲಿವೆ:

  • ಸ್ಯಾಚುರೇಟೆಡ್ ಕೊಬ್ಬು:
    ಬೆಣ್ಣೆ, ತುಪ್ಪ, ಕೆಂಪು ಮಾಂಸ, ಚೀಸ್, ತೆಂಗಿನ ಎಣ್ಣೆ ಮುಂತಾದವುಗಳಲ್ಲಿ ಕಂಡುಬರುತ್ತದೆ.
  • ಮೊನೊಅನ್ಸಾಚುರೇಟೆಡ್ ಕೊಬ್ಬು:
    ಆಲಿವ್ ಎಣ್ಣೆ, ಕಡಲೆಕಾಯಿ ಎಣ್ಣೆ, ಬಾದಾಮಿ, ಆವಕಾಡೊ ಮುಂತಾದವುಗಳಲ್ಲಿ ಕಂಡುಬರುತ್ತದೆ.
  • ಪಾಲಿಅನ್ಸಾಚುರೇಟೆಡ್ ಕೊಬ್ಬು:
    ಮೀನು, ಸೂರ್ಯಕಾಂತಿ ಎಣ್ಣೆ, ಸೋಯಾಬೀನ್ ಎಣ್ಣೆ, ಬೀಜಗಳು ಮತ್ತು ಬೀಜಕೋಶಗಳಲ್ಲಿಕಂಡುಬರುತ್ತದೆ. 

4. ಮಿನರಲ್ ಗಳು 

ನಮ್ಮ ದೇಹದ ಅಂಗಾಂಶಗಳು ಹಾಗೂ ದ್ರವಗಳಲ್ಲಿ ಇರುತ್ತದೆ. ಕ್ಯಾಲ್ಸಿಯಂ, ಪಾಸ್ಪೆಟ್ ನಮ್ಮ ಮೂಳೆಗಳಲ್ಲಿ ಕಬ್ಬಿಣ ರಕ್ತದಲ್ಲಿ ಹಿಮೋಗ್ಲೋಬಿನ್. ಮಿನರಲ್ಗಳ ಉಪಯೋಗ ನಮ್ಮ ದೇಹದಲ್ಲಿರುತ್ತದೆ. ಕಬ್ಬಿಣ ಅಯೋಡಿನ್ ನಮ್ಮ ದೇಹದಲ್ಲಿ ಸಣ್ಣ ಪ್ರಮಾಣದಲ್ಲಿ ದೊರಕುವ ಮೈಕ್ರೋ ಮಿನರಲ್ ಗಳು. ಕ್ಯಾಲ್ಸಿಯಂ ಪಾಸ್ಪೇಟ್ ನಮ್ಮ ದೇಹದಲ್ಲಿ ಜಾಸ್ತಿ ಪ್ರಮಾಣದಲ್ಲಿ ದೊರಕುತ್ತದೆ ಮಿನರಲ್ ಗಳು ದೇಹದ ಬೆಳವಣಿಗೆಗೆ ಮೂಳೆಗಳ ಶಕ್ತಿ, ನಮ್ಮ ದೇಹದ ನೀರಿನ ಅಂಶದ ಸಮತೋಲನ ನಿರ್ವಹಣೆ ಸ್ನಾಯುಗಳ ಹಿಗ್ಗುವಿಕೆ ಮತ್ತು ಕುಗ್ಗುವಿಕೆ ನರಕೋಶಗಳ ನಿರ್ವಹಣೆಗೆ ಸಹಾಯ ಮಾಡುತ್ತದೆ. 

  • ಕ್ಯಾಲ್ಸಿಯಂ:
    ಹಾಲು ಮತ್ತು ಹಾಲಿನ ಉತ್ಪನ್ನಗಳು, ಮೊಸರು, ಚೀಸ್, ಹಸಿರು ಎಲೆ ತರಕಾರಿಗಳು, ಬಾದಾಮಿ.
  • ರಂಜಕ:
    ಮಾಂಸ, ಮೀನು, ಕೋಳಿ, ಮೊಟ್ಟೆ, ಡೈರಿ ಉತ್ಪನ್ನಗಳು, ಧಾನ್ಯಗಳು.
  • ಮೆಗ್ನೀಸಿಯಮ್:
    ಬೀಜಗಳು, ಧಾನ್ಯಗಳು, ಹಸಿರು ಎಲೆ ತರಕಾರಿಗಳು, ಡಾರ್ಕ್ ಚಾಕೊಲೇಟ್, ಬಾಳೆಹಣ್ಣು, ಮೀನು.
  • ಕಬ್ಬಿಣ:
    ಕೆಂಪು ಮಾಂಸ, ಸೊಪ್ಪು ತರಕಾರಿಗಳು, ಬೇಳೆಕಾಳುಗಳು, ಒಣಗಿದ ಹಣ್ಣುಗಳು.
  • ಸತು:
    ಮಾಂಸ, ಡೈರಿ ಉತ್ಪನ್ನಗಳು, ಬೀಜಗಳು, ಧಾನ್ಯಗಳು, ಸಿಂಪಿ.
  • ಅಯೋಡಿನ್:
    ಅಯೋಡೀಕರಿಸಿದ ಉಪ್ಪು, ಸಮುದ್ರಾಹಾರ, ಡೈರಿ ಉತ್ಪನ್ನಗಳು.
ಖನಿಜಯುಕ್ತ ಆಹಾರಗಳು ಶಿಫಾರಸ್ಸು ಮಾಡಿದ ಆಹಾರ ಭತ್ಯೆ 

ಮಿನರಲ್ ಗಳು 

ಶಿಫಾರಸ್ಸು ಮಾಡಿದ ಆಹಾರ ಭತ್ಯೆ 

 

ಕ್ಯಾಲ್ಸಿಯಂ

800 ಮಿಲಿ ಗ್ರಾಂ 

ರಂಜಕ

 

800 ಮಿಲಿ ಗ್ರಾಂ 

ಮೆಗ್ನೀಸಿಯಮ್

 

300 ಮಿಲಿ ಗ್ರಾಂ 

ಕಬ್ಬಿಣ

 

14  ಮಿಲಿ ಗ್ರಾಂ 

ಸತು

 

15 ಮಿಲಿ ಗ್ರಾಂ 

ಅಯೋಡಿನ್:

 

150 ಮೈಕ್ರೋ ಗ್ರಾಂ 












5. ವಿಟಮಿನ್ ಗಳು 

ನಮ್ಮ ದೇಹದಲ್ಲಿ ಸಣ್ಣ ಪ್ರಮಾಣದಲ್ಲಿ ಇರುವ ವಸ್ತುಗಳು ಅವು ನಮ್ಮ ದೇಹದಲ್ಲಿ ಇರುವುದಿಲ್ಲ ಅವುಗಳನ್ನು ಆಹಾರದ ಮುಖಾಂತರ ಪಡೆಯಬೇಕು. 

1. ಕೊಬ್ಬಿನಲ್ಲಿ ಕರಗುವ ವಿಟಮಿನ್ ಗಳು A, D, E,K

2. ನೀರಿನಲ್ಲಿ ಕರಗುವ ವಿಟಮಿನ್ ಗಳು B, C

ವಿಟಮಿನ್ ಗಳು ನಮ್ಮ ಕಣ್ಣಿನ ಆರೋಗ್ಯ, ಚರ್ಮದ ಬೆಳವಣಿಗೆ ಸೋಂಕುಗಳ ನಿವಾರಣೆ, ಹಲ್ಲು ಮತ್ತು ಮೂಳೆಗಳ ಆರೋಗ್ಯ, ಜೀರ್ಣಕ್ರಿಯೆ ಮತ್ತು ಜೀವಕೋಶಗಳಿಗೆ ಸಹಾಯ ಮಾಡುತ್ತದೆ. 

ವಿಟಮಿನ್‌ಗಳ ಕೆಲವು ಆಹಾರ ಮೂಲಗಳು:

  • ಹಣ್ಣುಗಳು:
    ಸಿಟ್ರಸ್ ಹಣ್ಣುಗಳು, ಹಣ್ಣುಗಳು, ಕಲ್ಲಂಗಡಿ ಹಣ್ಣುಗಳು ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿವೆ.
  • ತರಕಾರಿಗಳು:
    ಎಲೆಗಳ ತರಕಾರಿಗಳು, ಬೆಲ್ ಪೆಪರ್, ಸಿಹಿ ಆಲೂಗಡ್ಡೆ ವಿಟಮಿನ್‌ಗಳ ವಿವಿಧ ಮೂಲಗಳಾಗಿವೆ. 
  • ಡೈರಿ ಉತ್ಪನ್ನಗಳು:
  • ಹಾಲು, ಮೊಸರು, ಮತ್ತು ಚೀಸ್ ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂನ ಮೂಲಗಳಾಗಿವೆ. 
  • ಬೀಜಗಳು ಮತ್ತು ಕಾಳುಗಳು 
    ಬಾದಾಮಿ, ಸೂರ್ಯಕಾಂತಿ ಬೀಜಗಳು,  ವಿಟಮಿನ್ E  ಉತ್ತಮ ಮೂಲಗಳಾಗಿವೆ.
  • ಮಾಂಸ ಮತ್ತು ಮೀನು:
    ಇವುಗಳು ವಿಟಮಿನ್ B ಗುಂಪಿನ ವಿಟಮಿನ್‌ಗಳ ಉತ್ತಮ ಮೂಲಗಳಾಗಿವೆ.

ವಿಟಮಿನ್‌ಗಳು 

ಶಿಫಾರಸ್ಸು ಮಾಡಿದ ಆಹಾರ ಭತ್ಯೆ 

 

ವಿಟಮಿನ್A

800 ಮೈಕ್ರೋ ಗ್ರಾಂ 

ವಿಟಮಿನ್D

ಮೈಕ್ರೋ ಗ್ರಾಂ 

ವಿಟಮಿನ್E

10 ಮಿಲಿ ಗ್ರಾಂ 

ವಿಟಮಿನ್B1

1.4 ಮಿಲಿ ಗ್ರಾಂ 

ವಿಟಮಿನ್B2

1.6 ಮಿಲಿ ಗ್ರಾಂ 

ವಿಟಮಿನ್B6

ಮಿಲಿ ಗ್ರಾಂ 

ವಿಟಮಿನ್B12

ಮೈಕ್ರೋ ಗ್ರಾಂ 

ಫೋಲಿಕ್ ಆಮ್ಲ,

200 ಮೈಕ್ರೋ ಗ್ರಾಂ 

ಪ್ಯಾಂಟಿತೆನಿಕ್, ಆಮ್ಲ,

ಮಿಲಿ ಗ್ರಾಂ 

ಬಯೋಟಿನ್

0.15  ಮಿಲಿ ಗ್ರಾಂ 

 ವಿಟಮಿನ್PP

18 ಮಿಲಿ ಗ್ರಾಂ 

 ವಿಟಮಿನ್ C

60 ಮಿಲಿ ಗ್ರಾಂ 



6. ಆಹಾರದ ಪೈಬರ್ 

ಅಜೀರ್ಣವಾಗು ಕಾರ್ಬೋಹೈಡ್ರೇಟ್ ಆಹಾರ ಸಸ್ಯಗಳಲ್ಲಿ ದೊರಕುತ್ತವೆ. ನಾವು ಸರಿಯಾಗಿ ಜಗಿಯಬೇಕು, ಅದರಿಂದ ಇವುಗಳನ್ನು ತಿನ್ನುವ ಸಮಾಧಾನ ಹಾಗೂ ಜೀರ್ಣಕ್ರಿಯೆ ಕ್ಯಾನ್ಸರ್, ಡಯಾಬಿಟಿಸ್, ದೇಹದ ತೂಕ ತಡೆಯಲು ಸಹಾಯ ಮಾಡುತ್ತದೆ

ಫೈಬರ್ ಭರಿತ ಆಹಾರಗಳ ಕೆಲವು ಉದಾಹರಣೆಗಳು: 
  • ಹಣ್ಣುಗಳು:
    ಬಾಳೆಹಣ್ಣು, ಸೇಬು, ಪೇರಳೆ, ಕಿತ್ತಳೆ, ಸ್ಟ್ರಾಬೆರಿ, ರಾಸ್ಪ್ಬೆರಿ, ಇತ್ಯಾದಿ.
  • ತರಕಾರಿಗಳು:
    ಬ್ರೊಕೋಲಿ, ಕ್ಯಾರೆಟ್, ಸಿಹಿ ಆಲೂಗಡ್ಡೆ, ಪಾಲಕ್, ಹೂಕೋಸು, ಇತ್ಯಾದಿ.
  • ದ್ವಿದಳ ಧಾನ್ಯಗಳು:
    ಎಲ್ಲಾ ರೀತಿಯ ಬೀನ್ಸ್, ಮಸೂರ, ಕಡಲೆ, ಇತ್ಯಾದಿ.
  • ಧಾನ್ಯಗಳು:
    ಓಟ್ಸ್, ಕ್ವಿನೋವಾ, ಇತ್ಯಾದಿ.
  • ಬೀಜಗಳು:
    ಅಗಸೆಬೀಜ, ಸೂರ್ಯಕಾಂತಿ ಬೀಜಗಳು, ಇತ್ಯಾದಿ.
ಇದಲ್ಲದೆ, ಪಾಪ್‌ಕಾರ್ನ್, ಡಾರ್ಕ್ ಚಾಕೊಲೇಟ್ ಮುಂತಾದವುಗಳು ಸಹ ಫೈಬರ್‌ನ ಉತ್ತಮ ಮೂಲಗಳಾಗಿವೆ.

7. ನೀರು 

ಇದು ನಮ್ಮ ದೇಹದಲ್ಲಿ ದ್ರವಗಳ ರೂಪದಲ್ಲಿ ಇರುತ್ತದೆ. ಆಹಾರದ ಜೀರ್ಣಕ್ರಿಯೆ ಪೌಷ್ಟಿಕಾಂಶಗಳನ್ನು ಆಹಾರದಿಂದ ಜೀವಕೋಶಗಳಿಗೆ ತಲುಪಿಸುತ್ತದೆ. ನಮ್ಮ ದೇಹದ ಶಕ್ತಿ ಸಮತೋಲನ ದೇಹದ ಮಲಮೂತ್ರಗಳ ಹೊರಗೆ ಹಾಕುವಿಕೆಗಳಲ್ಲಿ ಉಪಯೋಗವಾಗುವುದು. 

ದೇಹದಲ್ಲಿ ನೀರಿನ ಪಾತ್ರಗಳು:
  • ಜೀವಕೋಶಗಳಿಗೆ ಪೋಷಣೆ ಮತ್ತು ಆಮ್ಲಜನಕವನ್ನು ತರುತ್ತದೆ:
    ದೇಹದ ಉಷ್ಣತೆಯನ್ನು ನಿಯಂತ್ರಿಸುತ್ತದೆ:
  • ಸಂಧಿಗಳನ್ನು ನಯಗೊಳಿಸುತ್ತದೆ:
    ತ್ಯಾಜ್ಯ ಉತ್ಪನ್ನಗಳನ್ನು ಹೊರಹಾಕುತ್ತದೆ:
  • ಜೀರ್ಣಕ್ರಿಯೆಯಲ್ಲಿ ಸಹಾಯ ಮಾಡುತ್ತದೆ:
  • ಮೆದುಳಿನ ಕಾರ್ಯನಿರ್ವಹಣೆಗೆ ಅವಶ್ಯಕ:
  • ಚರ್ಮವನ್ನು ಆರೋಗ್ಯಕರವಾಗಿಡುತ್ತದೆ:
  • ಜೀವಕೋಶಗಳ ಆರೋಗ್ಯಕರ ಬೆಳವಣಿಗೆ ಮತ್ತು ಸಂತಾನೋತ್ಪತ್ತಿಯನ್ನು ಉತ್ತೇಜಿಸುತ್ತದೆ:

ನೀರು ಕುಡಿಯುವುದರಿಂದಾಗುವ ಪ್ರಯೋಜನಗಳು:

  • ನಿರ್ಜಲೀಕರಣವನ್ನು ತಡೆಯುತ್ತದೆ:
  • ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ:
    ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ:
  • ಚರ್ಮವನ್ನು ಆರೋಗ್ಯಕರವಾಗಿಡುತ್ತದೆ:
  • ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ:
  • ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ:
ದಿನಕ್ಕೆ ಎಷ್ಟು ನೀರು ಕುಡಿಯಬೇಕು ಎಂಬುದು ವ್ಯಕ್ತಿಯ ವಯಸ್ಸು, ಚಟುವಟಿಕೆಯ ಮಟ್ಟ ಮತ್ತು ಹವಾಮಾನದಂತಹ ಅಂಶಗಳನ್ನು ಅವಲಂಬಿಸಿರುತ್ತದೆ. ಆದಾಗ್ಯೂ, ಸಾಮಾನ್ಯವಾಗಿ ದಿನಕ್ಕೆ ಕನಿಷ್ಠ 8 ಲೋಟ (ಸುಮಾರು 2 ಲೀಟರ್) ನೀರು ಕುಡಿಯಲು ಶಿಫಾರಸು ಮಾಡಲಾಗುತ್ತದೆ. ಮೂತ್ರದ ಬಣ್ಣವನ್ನು ಗಮನಿಸಿ. ಸ್ಪಷ್ಟ ಅಥವಾ ತಿಳಿ ಹಳದಿ ಬಣ್ಣವು ನೀವು ಸಾಕಷ್ಟು ಹೈಡ್ರೀಕರಿಸಲ್ಪಟ್ಟಿದ್ದೀರಿ ಎಂದು ಸೂಚಿಸುತ್ತದೆ.

 *ಸಮತೋಲನ ಆಹಾರ

ಆಹಾರವು ನಮ್ಮ ದೇಹಕ್ಕೆ ಅಗತ್ಯವಾದ ಪೌಷ್ಟಿಕಾಂಶಗಳನ್ನು ಬೇರೆ ಬೇರೆ ಗಾತ್ರ ಮತ್ತು ಸರಿಯಾದ ಪ್ರಮಾಣದಲ್ಲಿ ತೆಗೆದುಕೊಂಡರೆ ಅದನ್ನು ನಾವು ಸಮತೋಲನ ಆಹಾರ ಎನ್ನುತ್ತೇವೆ. ಸಮತೋಲನ ಹಾರವು 50 ರಿಂದ 60% ಶಕ್ತಿಯ ಕಾರ್ಬೋಹೈಡ್ರೇಟ್ ಗಳಿಂದ ಕೂಡಿರುತ್ತದೆ ಹಾಗೂ 10 ರಿಂದ 15% ಪ್ರೋಟೀನ್ ನಿಂದ ಮತ್ತು 20ರಿಂದ 30% ಕೊಬ್ಬಿನಂಶದಿಂದ ಕೂಡಿರುತ್ತದೆ *

  • ಕಾರ್ಬೋಹೈಡ್ರೇಟ್‌ಗಳು:
    ಅಕ್ಕಿ, ಗೋಧಿ, ಬೇಳೆಕಾಳುಗಳು, ಇತ್ಯಾದಿ.
  • ಪ್ರೋಟೀನ್‌ಗಳು:
    ಮೊಟ್ಟೆ, ಮಾಂಸ, ಮೀನು, ದ್ವಿದಳ ಧಾನ್ಯಗಳು, ಇತ್ಯಾದಿ.
  • ಕೊಬ್ಬುಗಳು:
    ಎಣ್ಣೆ, ಬೆಣ್ಣೆ, ತುಪ್ಪ, ಇತ್ಯಾದಿ.
  • ಜೀವಸತ್ವಗಳು ಮತ್ತು ಖನಿಜಗಳು:
    ಹಣ್ಣುಗಳು, ತರಕಾರಿಗಳು, ಹಾಲು, ಇತ್ಯಾದಿ.
  • ನೀರು:
    ಸಾಕಷ್ಟು ನೀರು ಕುಡಿಯುವುದು ಮುಖ್ಯ. 

ಆಹಾರ ಧಾನ್ಯಗಳು* 

ಧಾನ್ಯಗಳು, ಸಿರಿಧಾನ್ಯಗಳು, ಕಿರುಧಾನ್ಯಗಳು, ಹಣ್ಣು ತರಕಾರಿಗಳು,ಹಾಲಿನ ವಸ್ತುಗಳು ಮಾಂಸ,ಮೊಟ್ಟೆ, ಫೈಬರ್, ಎಣ್ಣೆ ಮತ್ತು ಕೊಬ್ಬು ಹಾಗೂ ಎಣ್ಣೆಯ ಬೀಜಗಳು. 

ನಮ್ಮ ದೇಹದ ಆಹಾರಗಳ ಪಟ್ಟಿ

 

 


ಶಕ್ತಿಯುತ ಆಹಾರಗಳು

ಕಾರ್ಬೋಹೈಡ್ರೇಟ್, ಹಸಿರು ಧಾನ್ಯಗಳು, 

 ಪ್ರೋಟೀನ್ ಫೈಬರ್ ಮಿನರಲ್ಸ್ ಬಿ ,-ಕಾಂಪ್ಲೆಕ್ಸ್  ವಿಟಮಿನ್ಗಳು 

ತರಕಾರಿಗಳ ಎಣ್ಣೆ, ತುಪ್ಪ , ಬೆಣ್ಣೆ ಮತ್ತು ಹಾಲು,

 ಕೋಬ್ಬಿನಲ್ಲಿ ಕರಗುವ ಬೇಕಾದ ಕೊಬ್ಬಿನ ಆಮ್ಲಗಳು 

ಬೀಜ ಮತ್ತು ಎಣ್ಣೆ ಕಾಳುಗಳು, ಸಕ್ಕರೆ 

ವಿಟಮಿನ್ಗಳು ಮತ್ತು ಮಿನೆರಲ್ಗಳು 

 



ದೇಹವನ್ನು ನಿರ್ಮಿಸುವ ಆಹಾರಗಳು

 ಕಾಳುಗಳು ಮತ್ತು ಬೀಜ ಯುಕ್ತ ಎಣ್ಣೆ  ಕಾಳುಗಳು 

ವಿಟಮಿನ್ B- ಕಾಂಪ್ಲೇಸ್, ಕೊಬ್ಬು, ಫೈಬರ್ 

 

ಹಾಲಿನ ಉತ್ಪನ್ನಗಳು 

 ಕ್ಯಾಲ್ಸಿಯಂ, ಕಬ್ಬಿಣ, ವಿಟಮಿನ್ B-12, ರಿಬೋಫ್ಲಾವಿನ್ 

 ಮಾಂಸ, ಮೀನು, ಕಾಳುಗಳು.

ವಿಟಮಿನ್B ಕಾಂಪ್ಲೆಕಸ್ , ಕಬ್ಬಿಣ, ಅಯೋಡಿನ್, ಕೊಬ್ಬು 

 



ರಕ್ಷಣಾತ್ಮಕ ಆಹಾರಗಳು

ವಿಟಮಿನಗಳು, ಮಿನೆರಲ್ಸ್ 

 

ಆಂಟಿಆಕ್ಸಿಡೆಂಟ್ಸ್, ಫೈಬ್ರಗಳು, ಕೆರೊಟೆನೋಯ್ಡ್ಸ್ 

ಹಸಿರು ತರಕಾರಿಗಳು, ಹಣ್ಣುಗಳು 

ಆಂಟಿಆಕ್ಸಿಡೆಂಟ್ಸ್, ಫೈಬ್ರಗಳು,

 ಮೊಟ್ಟೆ, ಹಾಲಿನ ಉತ್ಪನ್ನಗಳು, ತಾಜಾ ಆಹಾರಗಳು.

ಪ್ರೋಟೀನ್ ಮತ್ತು ಕೊಬ್ಬು 

 

 *ಎಷ್ಟು ಆಹಾರವನ್ನು ತೆಗೆದುಕೊಳ್ಳಬೇಕು* 

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಹೇಳಿರುವಂತೆ ನಾವು ಕಡಿಮೆ ಎಂದರೆ 300 ಗ್ರಾಂ ತರಕಾರಿ ( ಬೇರು 200 ಗ್ರಾಂ ಟ್ಯೂಬರ್ 50 ಗ್ರಾಂ  )ಹಣ್ಣುಗಳು-100 ಗ್ರಾಂ ಪ್ರತಿದಿನ ತೆಗೆದುಕೊಳ್ಳಬೇಕು.ಕೊಬ್ಬು- ಹೆಚ್ಚು ಕೆಲಸ ಮಾಡುವ ವ್ಯಕ್ತಿಯು ದಿನಕ್ಕೆ 50 ಗ್ರಾಂ ಕೊಬ್ಬಿನ ಪದಾರ್ಥವನ್ನು ತೆಗೆದುಕೊಳ್ಳಬೇಕು.

ಬಾಡಿ ಮಾಸ್ ಇಂಡೆಕ್ಸ್ ಅಂದರೆ ತೂಕ ಕೆಜಿ ಯಲ್ಲಿ/ಎತ್ತರದ ಅಳತೆ ತಕ್ಕಂತೆ ಸರಿಯಾಗಿ ಆಹಾರವನ್ನು ಸೇವಿಸಬೇಕು.

ದೈಹಿಕ ವ್ಯಾಯಾಮಗಳು* 

ನಾವು ಆರೋಗ್ಯವಾಗಿರಲು ಪ್ರತಿದಿನವೂ 45 ನಿಮಿಷ ದೈಹಿಕ ವ್ಯಾಯಾಮಗಳನ್ನು ಅಥವಾ ದಿನಕ್ಕೆ ಐದರಿಂದ ಆರು ಕಿಲೋಮೀಟರ್ ನಡುಗೆ ಅವಶ್ಯಕತೆ ಇರುತ್ತದೆ

ಇದು ನಾವು ದಿನನಿತ್ಯವೂ ತೆಗೆದುಕೊಳ್ಳಬಹುದಾದ ಆಹಾರದ ಪ್ರಮಾಣ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಹಿಂದ ನಾವು ತಿಳಿಯಬಹುದಾಗಿದೆ .

 


 

ಬೆಳಗಿನ ತಿಂಡಿ 

 ಆಹಾರ 

ಕಚ್ಚಾ 

ಬೇಯಿಸಿದ 

ಸೇವೆಗಳು 

ಹಾಲು 

100ಮಿಲಿ 

ಹಾಲು 

½ ಬಟ್ಟಲು

 

 

ಸಕ್ಕರೆ 

15 ಗ್ರಾಂ

ಟೀ ಅಥವಾ ಕಾಫಿ 

2 ಬಟ್ಟಲು 

1 ಬಟ್ಟಲು 

 ದಾನ್ಯಗಳು 

70 ಗ್ರಾಂ 

ಬೆಳಗಿನ ಉಪಹಾರದ ತಿನಿಸು 

ಧಾನ್ಯಗಳು

20ಗ್ರಾಂ 


 

 



ಮಧ್ಯಾಹ್ನದ ಊಟ 

 

 

 ಆಹಾರ 

ಕಚ್ಚಾ 

ಬೇಯಿಸಿದ 

ಸೇವೆಗಳು ತೂಕ 

 ಧಾನ್ಯಗಳು 

120ಗ್ರಾಂ 

ಅಕ್ಕಿ (ಅನ್ನ)

2-ಬಟ್ಟಲು

 

ಪುಲ್ಕಾ 

2 -ಸಂಖ್ಯೆ

ಧಾನ್ಯಗಳು 

20 ಗ್ರಾಂ 

Dhal

1/2 ಬಟ್ಟಲು

ತರಕಾರಿಗಳು 

150 ಗ್ರಾಂ 

ತರಾಕಾರಿ ಸಾಂಬಾರ 

3/4 ಬಟ್ಟಲು

ತರಕಾರಿಗಳು

50 ಗ್ರಾಂ 

ತಾರಕಾರಿ ಕೋಸಂಬರಿ 

7-8 Slices

ಹಾಲು 

100 ಮಿಲಿ

ಮೊಸರು 

1/2 ಬಟ್ಟಲು

 

 

ಟೀ

 ಆಹಾರ 

ಕಚ್ಚಾ 

ಬೇಯಿಸಿದ 

ಸೇವೆಗಳು ತೂಕ 

ಹಾಲು 

50 ಮಿಲಿ 

ಟೀ 

1ಬಟ್ಟಲು

 




 ರಾತ್ರಿ ಊಟ

ಧಾನ್ಯಗಳು ಮತ್ತು ಕಾಳುಗಳು 

120 ಗ್ರಾಂ 

 ಅನ್ನ 

2 ಬಟ್ಟಲು

 

ಗೋದಿ ಪುಲ್ಕಸ್ 

2 ಸಂಖ್ಯೆ 

ಧಾನ್ಯಗಳು 

20 ಗ್ರಾಂ 

ಬೇಳೆ 

1/2 ಬಟ್ಟಲು

ತರಕಾರಿಗಳು 

150 ಗ್ರಾಂ 

ತರಕಾರಿ ಸಾಂಬಾರು 

3/4  ಬಟ್ಟಲು

ಹಾಲು ಅಥವಾ ಮೊಸರು 

50 ಮಿಲಿ 

ತರಕಾರಿ 

50 ಗ್ರಾಂ 

ಹಣ್ಣುಗಳು 

100 ಗ್ರಾಂ 

ಹವಾಮಾನಕ್ಕೆ 

1 ಮಧ್ಯಮ 


ಆರೋಗ್ಯಯುತ ಆಹಾರಗಳು ನಮ್ಮಲ್ಲಿ ಸಂತೋಷವನ್ನು ಉಂಟು ಮಾಡುತ್ತವೆ. ನಮ್ಮ ಮಾನಸಿಕ ಏರುಪೇರುಗಳನ್ನು ಹಾಗೂ ಶಕ್ತಿಯುತವಾಗಿ ಇರಲು ಸಹಾಯ ಮಾಡುತ್ತವೆ. ದುಃಖದ ಆಹಾರಗಳು ನಮ್ಮ ಮಾನಸಿಕ ಭಾವನಾತ್ಮಕ ಹಾಗೂ ದೈಹಿಕವಾಗಿ ಶಕ್ತಿಯುತವಾಗಿರಲು ಸಹಾಯ ಮಾಡುವುದಿಲ್ಲ ನಾವು ತೆಗೆದುಕೊಳ್ಳುವ ಆಹಾರದ ಕ್ಯಾಲೋರಿ ಬಗ್ಗೆ ನಮಗೆ ಗಮನವಿರಬೇಕು. ನಮ್ಮ ಕ್ಯಾಲೋರಿ ಜಾಸ್ತಿ ಇದ್ದಲ್ಲಿ ಅಥವಾ ಕಡಿಮೆ ಇದ್ದಲ್ಲಿ ನಮ್ಮ ಮೆದುಳಿಗೆ ಚಲಿಸುವ ರಕ್ತದ ಚಲನೆ ಹಾಗೂ ದಪ್ಪವಾಗುವುದು ಖಿನ್ನತೆ ಹಾಗೂ ಬೇರೆ ರೀತಿಯ ಮಾನಸಿಕ ಆರೋಗ್ಯಕ್ಕೆ ಕಾರಣವಾಗುತ್ತದೆ. ಜಾಸ್ತಿ ಕ್ಯಾಲೋರಿ ಆಹಾರಗಳು ಸಂತೋಷ ನೀಡುತ್ತವೆ. ಕಡಿಮೆ ಕ್ಯಾಲೋರಿಯುತ ಆಹಾರಗಳು ಖಿನ್ನತೆ, ಆಂಜೈಟಿ ಹಾಗೂ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ನಮ್ಮ ಮೆದುಳು 80 % ನೀರಿನಿಂದ ಕೂಡಿದೆ, ನೀರಿನ ಪ್ರಮಾಣ ಕಡಿಮೆಯಾದಲ್ಲಿ ಖಿನ್ನತೆ, ಆಂಜೈಟಿ, ಟೆನ್ಶನ್, ಸಿಟ್ಟು ಹಾಗೂ ದೇಹದ ಶಕ್ತಿ ಕ್ಷೀಣಿಸುತ್ತದೆ ಮತ್ತು ನೋವು ಏಕಾಗ್ರತೆಯ ಕೊರತೆ ಉಂಟುಮಾಡುತ್ತದೆ ನಾವು ಪ್ರತಿದಿನವೂ ಎಂಟರಿಂದ ಹತ್ತು ಗ್ಲಾಸ್ ನೀರನ್ನು ಕುಡಿಯಬೇಕು ಹಾಗೂ ನೀರು ಯುಕ್ತ ಆಹಾರ ಹಣ್ಣು ಮತ್ತು ತರಕಾರಿಗಳನ್ನು ನಾವು ಯಥೇಚ್ಛವಾಗಿ ತಿನ್ನಬೇಕು.

ಪ್ರೋಟಿನ್ ಗಳು ನಮ್ಮ ದೇಹದ ಜೀವಕೋಶದ ಅಂಗಾಂಶ ಮತ್ತು ಆರ್ಗನ್ಸ್ ಆರೋಗ್ಯದ ಬೆಳವಣಿಗೆಗೆ ಸಹಾಯ ಮಾಡುತ್ತವೆ. ಪ್ರೋಟೀನ್ ಗಳು ದೇಹದಲ್ಲಿ ಅಮೈನೋ ಆಸಿಡ್ ಉತ್ಪಾದನೆ ಹಾಗೂ ನರ ಪ್ರೇಕ್ಷಕಗಳಾದ ಡೋಪಮೈನ್ ಸೆರಾಟೋನಿನ್ ನಾರ್ ಎಪೈನ್ ಪ್ರೈನ, ಗಾಮಾ ಅಮೈನೋ ಬ್ಯೂಟಿರಿಕ್ ಆಮ್ಲಗಳು, ಗ್ಲೂಟಮೇಟ್ ಮುಂತಾದವುಗಳು ನಮ್ಮ ಮಾನಸಿಕ ಹಾಗೂ ಭಾವನಾತ್ಮಕವಾಗಿ ಪ್ರಭಾವ ಬೀರುತ್ತವೆ.

ನಮ್ಮ ಮೆದುಳಿನಲ್ಲಿ 60% ಕೊಬ್ಬು ಇದ್ದು ಅದಕ್ಕಾಗಿ ಆಹಾರಯುಕ್ತ ಕೊಬ್ಬು ನಮ್ಮ ದೇಹದ ಚಲನೆಗೆ ಹಾಗೂ ಧನಾತ್ಮಕ ಮಾನಸಿಕ ಆರೋಗ್ಯಕ್ಕೆ ಅನುಕೂಲ.

ಒಮೇಗಾ-3-ಕೊಬ್ಬಿನ ಆಮ್ಲ ನಮ್ಮಲ್ಲಿನ ಖಿನ್ನತೆ, ಮಾನಸಿಕ ಏರುಪೇರು ಹಾಗೂ ಭಾವನಾತ್ಮಕ ಸಮತೋಲನ ಇವುಗಳು ನಮ್ಮನ್ನು ಸಂತೋಷವಾಗಿರಲು ಸಹಾಯ ಮಾಡುತ್ತವೆ. ನೀವು ಮಾನಸಿಕ ಆರೋಗ್ಯದಿಂದ ನರಳುತ್ತಿದ್ದರೆ. 

ಒಮೆಗಾ-6-ಕೊಬ್ಬಿನ ಆಮ್ಲ ಕಡಿಮೆ ಮಾಡಿ ಇದು ಖಿನ್ನತೆಗೆ ಕಾರಣವಾಗುತ್ತದೆ

ದಿನದಲ್ಲಿ 8 ಬಾರಿ ತರಕಾರಿ ಮತ್ತು ಹಣ್ಣು 2:1 ತರಕಾರಿ ಹಣ್ಣು ಪ್ರಮಾಣದಲ್ಲಿ ತೆಗೆದುಕೊಂಡರೆ ಖಂಡಿತ ನಮ್ಮ ಸಂತೋಷ ವೃದ್ಧಿಸುತ್ತದೆ. ಸಸ್ಯಗಳು ಮತ್ತು ಸಾಂಬಾರು ಪದಾರ್ಥಗಳು ನಮ್ಮ ಮಾನಸಿಕ ಆರೋಗ್ಯ ಮತ್ತು ಸಂತೋಷ ಉಂಟು ಮಾಡಲು ಸಹಾಯ ಮಾಡುತ್ತವೆ. ಖಿನ್ನತೆಯಿಂದ ದೂರವಿರಲು ಸಕ್ಕರೆ ಕೃತಕ ಸಿಹಿ ತಿನಿಸುಗಳು, ಗ್ಲುಟೆನ್ ಸೋಯಾ ಕಾರ್ನ್ಒಮೇಗಾ-6-ಕೊಬ್ಬಿನ ಆಮ್ಲಗಳು ಡೈರಿ ಉತ್ಪನ್ನಗಳು, ಫುಡ್ ಆಡಿಟಿವ್ಸ್ ಮತ್ತು ರೈಸ್  ಇವುಗಳು ನಮ್ಮ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ನಾವು ಆಹಾರಗಳನ್ನು ನಮ್ಮ ಮೆದುಳಿಗೆ ತಕ್ಕಂತೆ ತೆಗೆದುಕೊಳ್ಳುವುದು ಒಳ್ಳೆಯದೆಂದು ಸಂಶೋಧನೆಯಿಂದ ಧೃಡಪಟ್ಟಿದೆ. ನಾವು ಬೇರೆಬೇರೆ ರೀತಿಯ ಮೆದುಳನ್ನು ಹೊಂದಿರುತ್ತವೆ 

1. ಮೆದುಳಿನ ಮಾದರಿ -1 ಸಮತೋಲನ 

ಮೆದುಳಿರುವ ಜನರು ಹೊಂದಿಕೊಳ್ಳುವುದು ಭಾವನಾತ್ಮಕ ಸಮತೋಲನ ಆಶಾವಾದಿ ಕೇಂದ್ರೀಕೃತ ನಂಬಿಕೆಗೆ ಅರ್ಹವಾದವರು.

 *ಹಣ್ಣು ತರಕಾರಿಗಳು

ದಿನಕ್ಕೆ ಎಂಟು ಬಾರಿ ತಿಂದರೆ ಸಂತೋಷ ಲಭಿಸುತ್ತದೆ, ಟೊಮೇಟೊ, ಬೀಟ್ರೂಟ್, ಸೊಪ್ಪುಗಳು ನಮ್ಮ ಮಾನಸಿಕ ಆರೋಗ್ಯವನ್ನು ಸದೃಢ ಮಾಡುತ್ತವೆ. 

 *ಪ್ರೋಟೀನ್

ಮೀನು, ಸಮುದ್ರದ ಆಹಾರ, ಟರ್ಕಿ ಕೋಳಿ, ಕುರಿ, ಆಡು

 *ಫ್ಲವನಾಯ್ಡ್ ಆಹಾರಗಳು

ಬ್ಲೂ ಬೆರ್ರೀಸ್ , ಸ್ಟ್ರಾಬೆರಿಸ್,  ಕೋಕೋ ಹಣ್ಣುಗಳು 

ಒಮೇಗಾ-3ಕೊಬ್ಬಿನ ಆಮ್ಲಗಳು ಜಾಸ್ತಿ ಇರುವ ಆಹಾರ 

 ಆಗಸೆ ಬೀಜಗಳು ಆಕ್ರೋಟು (walnut) ಕಾಮಕಸ್ತೂರಿ ಬೀಜ ಆವಕಾಡೊ ಹಣ್ಣು.ಅವಕ್ಯಾಡೋ ಆಯಿಲ್.

Probiotic rich foods )ಜೀವಂತ ಸೂಕ್ಷ್ಮಾಣುಗಳು ಇರುವ ಆಹಾರ

ಬೇಯಿಸಿದ ಆಹಾರ ತರಕಾರಿಗಳು, ಮಿಸೊ ಸೋಪ್, ಉಪ್ಪಿನಕಾಯಿ, ಕಂಬುಜಾ ಚಹಾ , ನೀಲಿ- ಹಸಿರುಪಾಚಿ.

ದುಃಖದ ಆಹಾರ 

ಸಕ್ಕರೆ, ಕೃತಕ ಸಿಹಿಕಾರಕಗಳು, ರಕ್ತದ ಸಕ್ಕರೆ ಪ್ರಮಾಣ ಹೆಚ್ಚಿಸುವಕಾರ್ಬೋಹೈಡ್ರೇಟ್,ಆಲ್ಕೋಹಾಲ್, ಜಾಸ್ತಿ ಪ್ರಮಾಣದ ಕೆಫಿನ್.

2. ಮೆದುಳಿನ ಮಾದರಿ-2 ಸರಳ ಸ್ವಭಾವದವರು

ಇವರು ಶಕ್ತಿಯುತವಾಗಿ ರಚನಾತ್ಮಕವಾಗಿ, ಗುರಿಯನ್ನು ಸಾಧಿಸಲು ಅಪಾಯವನ್ನು ತೆಗೆದುಕೊಳ್ಳುವುದು, ಸಾಹಸ ಚಟುವಟಿಕೆಯಲ್ಲಿ ಉತ್ಸಾಹ, ಆತುರದ ನಿರ್ಧಾರ, ವಿರಾಮವಿಲ್ಲದ ಜೀವನ.

ಮೆದುಳಿನ ಮುಂಭಾಗದ ಭಾಗವು ಸಾಮಾನ್ಯಕ್ಕಿಂತ ಕಡಿಮೆ ಚಟುವಟಿಕೆಯನ್ನು ಹೊಂದಿರುತ್ತದೆ. ಜೀವನ ಸಮತೋಲನ ಹೆಚ್ಚು ಪ್ರೋಟೀನ್ಯುಕ್ತ ಆಹಾರ ಲೋ ಕಾರ್ಬೋಹೈಡ್ರೇಟ್ ಆಹಾರ.

ಪ್ಯಾಲಿಯೋ ಆಹಾರವು ಪ್ರಾಚೀನ ಮಾನವರಿಗೆ ಲಭ್ಯವಿರುವ ಆಹಾರಗಳನ್ನು ಸೇವಿಸುವುದು ಮತ್ತು ವ್ಯಾಯಾಮ ಮಾಡುವುದರ ಮೇಲೆ ಒತ್ತು ನೀಡುತ್ತದೆ. ಕಿಟೋ ಆಹಾರವು ಕಾರ್ಬೊಹೈಡ್ರೇಟ್ ಕಡಿಮೆ ಮಾಡುವುದರ ಮೇಲೆ ಕೇಂದ್ರೀಕರಿಸುತ್ತದೆ

ಸಂತೋಷ ತರುವ ಆಹಾರಗಳು 

ಡೋಪಮೈನ್ ಯುಕ್ತ ಆಹಾರ ಗಮನ ಹಾಗೂ ಪ್ರೇರಣೆ ನೀಡುವಲ್ಲಿ ಸಹಕರಿಸುತ್ತವೆ ಅವುಗಳು ಹಸಿರು ಚಹಾ, ಬೇಳೆ ಕಾಳುಗಳು ಮೀನು ಕುರಿ ಆಡು ಮರಿ ಕೋಳಿ ಮೊಟ್ಟೆ ಬೀಜಗಳು ಮತ್ತು ಕಾಳು ಕೋಸುಗಡ್ಡೆ ಪಾಲಕ್ ಸೊಪ್ಪು  ಪ್ರೋಟಿನ್ ಪುಡಿಗಳು 

ಟೈರೋಸಿನ ಜಾಸ್ತಿ ಇರುವ ಅಮೈನೋ ಆಮ್ಲಗಳು  ಬಾದಾಮಿ, ಬಾಳೆ ಹಣ್ಣು , ಆವಕಾಡೊ ಬೆಣ್ಣೆ ಹಣ್ಣು ಮೊಟ್ಟೆ , ಬೀನ್ಸ್ ಗಳು ಮೀನು ಕೋಳಿ ಡಾರ್ಕ್ ಚಾಕಲೇಟ್ ಗಳು.

 ಫ್ಲೇವನಾಯ್ಡ್ ಜಾಸ್ತಿ ಇರುವ ಆಹಾರಗಳು

ಬೆರ್ರೀಹಣ್ಣುಗಳು, ಸ್ಟ್ರಾಬೆರಿ, ರಾಸ್ಪ್ಬೆರಿ, ಕೋಕೋ ಬೀಜಗಳು.

ಒಮೇಗಾ -3-ಕೊಬ್ಬಿನ ಆಮ್ಲಗಳು ಜಾಸ್ತಿ ಇರುವ ಆಹಾರ 

ಆಗಸೆ ಬೀಜಗಳು, ಆಕ್ರೋಟು, (walnut) ಕಾಮಕಸ್ತೂರಿ ಬೀಜ, ಆವಕಾಡೊ ಹಣ್ಣು.

(Probiotic rich foods )ಜೀವಂತ ಸೂಕ್ಷ್ಮಾಣುಗಳು ಇರುವ ಆಹಾರ

ಬೇಯಿಸಿದ ತರಕಾರಿಗಳು ಮಿಸೋ ಸೋಪ್, ಉಪ್ಪಿನಕಾಯಿ spirulina(ನೀಲಿ ಹಸಿರು ಪಾಚಿ) , ಹಸಿರು ಎಲೆ ಇರುವ ತರಕಾರಿಗಳು 

ದುಃಖದ ಆಹಾರ 

ಸಕ್ಕರೆ, ಕೃತಕ ಸಿಹಿಕಾರಕ , ಹೆಚ್ಚಿನ ಗ್ಲೈಸಿಮಿಕ್ ಕಾರ್ಬೋಹೈಡ್ರೇಟ್ಗಳು 

2. ಮೆದುಳಿನ ಮಾದರಿ- 3 -ನಿರಂತರ 

ಮೆದುಳಿನವರು ಗಮನ ಕೇಂದಿಕರಿಸುವ ಮತ್ತು ಮಾಡಬೇಕಾದ ಕೆಲಸಗಳ ಮೇಲೆ ಇಷ್ಟಪಡುವ ಇವರು ಬಗ್ಗದ ಹಠಮಾರಿ ಮತ್ತು ವಿಮರ್ಶಾತ್ಮಕ ಸ್ವಭಾವದವರು ಹೋರಾಟಗಳನ್ನು ಹಿಡಿದಿಟ್ಟುಕೊಳ್ಳುವ ಪ್ರವೃತ್ತಿ  ಹೊಂದಿರುತ್ತಾರೆ.

ಮೆದುಳಿನ ಮುಂಭಾಗದಲ್ಲಿ ಕಡಿಮೆ ಮಟ್ಟದ ನರಪ್ರೇಕ್ಷಕ ಸಿರೊಟೋನಿನ್ ಇರುತ್ತದೆ.

ಸಂತೋಷ ತರುವ ಆಹಾರಗಳು 

ಹಣ್ಣು ತರಕಾರಿಗಳನ್ನು ದಿನಕ್ಕೆ 8 ಬಾರಿ ಬಿಸೇವನೆ ಮಾಡುವುದರಿಂದ ಸಂತೋಷ ಹೆಚ್ಚಾಗುತ್ತದೆ. ಟೊಮೇಟೊ. 

ಸಿರೊಟೋನಿನ್ ಜಾಸ್ತಿ ಆಹಾರಗಳು 

ಮೊಟ್ಟೆ, ಟರ್ಕಿ ಕೋಳಿ, ಬೀಜ ಮತ್ತು ಕಾಳುಗಳು, ಸಿಹಿ ಆಲೂಗೆಡ್ಡೆ 

ಒಮೇಗಾ -3- ಕೊಬ್ಬಿನ ಆಮ್ಲಗಳು 

ಆಗಸೆ ಬೀಜಗಳು, ಆಕ್ರೋಟು (walnut) ಕಾಮಕಸ್ತೂರಿ ಬೀಜ ಆವಕಾಡೊ ಹಣ್ಣು.

Probiotic rich foods )ಜೀವಂತ ಸೂಕ್ಷ್ಮಾಣುಗಳು ಇರುವ ಆಹಾರ

ಬೇಯಿಸಿದ ತರಕಾರಿಗಳು, ಮಿಸೋ ಸೋಪ್, ಉಪ್ಪಿನಕಾಯಿ spirulina(ನೀಲಿ ಹಸಿರು ಪಾಚಿ) , ಹಸಿರು ಎಲೆ ಇರುವ ತರಕಾರಿಗಳು.

ಸೂಕ್ಷ್ಮಜೀವಿಗಳ ಬೆಳವಣಿಗೆ ಅಥವಾ ಚಟುವಟಿಕೆಯನ್ನು ಪ್ರೇರೇಪಿಸುವ ಆಹಾರ

ಬೀನ್ಸ್, ಎಲೆಕೋಸು, ಬೆಳ್ಳುಳ್ಳಿ, ಈರುಳ್ಳಿ ಬೇರು, ತರಕಾರಿಗಳು ಕ್ಯಾರೆಟ್, ಬೀಟ್ರೂಟ್ 

ದುಃಖದ ಆಹಾರ 

ಸಕ್ಕರೆ, ಕೃತಕ ಸಿಹಿಕಾರಕ , ಹೆಚ್ಚಿನ ಗ್ಲೈಸಿಮಿಕ್ ಕಾರ್ಬೋಹೈಡ್ರೇಟ್ಗಳು . ಹೆಚ್ಚು ಪ್ರೋಟಿನ್ಯುಕ್ತ ಆಹಾರಗಳು

4. ಮೆದುಳಿನ ಮಾದರಿ- 4 ಸೂಕ್ಷ್ಮ ಸಂವೇದನೆಯ ಜೀವಿ

ಜನರುಗಳು ಬೇರೆಯವರ ಭಾವನೆಗಳಿಗೆ ಸಹಾನುಭೂತಿ ಯಿಂದ ಸ್ಪಂದಿಸುತ್ತಾರೆ ಇವರಲ್ಲಿ ಭಾವನೆಗಳು ಆಳವಾಗಿ ಬೇರು ಇರುತ್ತವೆ. ಇವರು ದುಃಖದಿಂದ ತುಂಬಾ ಸೂಕ್ಷ್ಮವಾಗಿ ವರ್ತಿಸುತ್ತಾರೆ. ಇದಕ್ಕೆ ಕಾರಣ ಲಿಂಬಿಕ್ನಲ್ಲಿ ಅತಿಯಾದ ಚಟುವಟಿಕೆ.

ಭಾವನೆಗಳು ಮೆದುಳಿನಲ್ಲಿ ನರ ಪ್ರೇಕ್ಷಕಗಳಾದ ಡೋಪೋಮೈನ್ ನಮ್ಮ ಸಂತೋಷಕ್ಕೆ ಕಾರಣ ಇವುರುಗಳು ಸಮತೋಲನ ಆಹಾರದ ಸೇವನೆ ಮಾಡಬೇಕು.

ಸಂತೋಷ ತರುವ ಆಹಾರಗಳು 

ಎಂಡಾರ್ಫಿನ್ಗಳು ದೇಹದ ನೈಸರ್ಗಿಕ ನೋವು ನಿವಾರಕಗಳಾಗಿವೆ. ನೋವು ಅಥವಾ ಒತ್ತಡಕ್ಕೆ ಪ್ರತಿಕ್ರಿಯೆಯಾಗಿ ಹೈಪೋಥಾಲಮಸ್ ಮತ್ತು ಪಿಟ್ಯುಟರಿ ಗ್ರಂಥಿಯಿಂದ ಬಿಡುಗಡೆಯಾಗುತ್ತದೆ

ಮೆಣಸಿನಕಾಯಿ, ಕಾಳು ಮೆಣಸು ಡಾರ್ಕ್ ಚಾಕಲೇಟ್ 

ಹಣ್ಣು ತರಕಾರಿಗಳು ದಿನಕ್ಕೆ ಎಂಟು ಬಾರಿ ಸೇವಿಸಬೇಕು ಟೊಮೇಟೊ ಸಂತೋಷ ಮತ್ತು ಮನಸ್ಸಿಗೆ ಖುಷಿ ನೋಡುತ್ತದೆ 

ಸಿರೊಟೋನಿನ್ ಜಾಸ್ತಿ ಆಹಾರಗಳು 

ಟ್ರಿಪ್ಟಾಪ್ಯಾನ್ ಜಾಸ್ತಿ ಇರುವ ಆಹಾರಗಳು. ಮೊಟ್ಟೆ, ಟರ್ಕಿ, ಕೋಳಿ, ಬೀಜ ಮತ್ತು ಕಾಳುಗಳು, ಸಿಹಿ ಆಲೂಗೆಡ್ಡೆ 

ಒಮೇಗಾ -3- ಕೊಬ್ಬಿನ ಆಮ್ಲಗಳು 

ಆಗಸೆ ಬೀಜಗಳು, ಆಕ್ರೋಟು (walnut) ಕಾಮಕಸ್ತೂರಿ ಬೀಜ ಆವಕಾಡೊ ಹಣ್ಣು.

Probiotic rich foods )ಜೀವಂತ ಸೂಕ್ಷ್ಮಾಣುಗಳು ಇರುವ ಆಹಾರ

ಬೇಯಿಸಿದ ತರಕಾರಿಗಳು ಮಿಸೋ ಸೋಪ್, ಉಪ್ಪಿನಕಾಯಿ spirulina(ನೀಲಿ ಹಸಿರು ಪಾಚಿ) , ಹಸಿರು ಎಲೆ ಇರುವ ತರಕಾರಿಗಳು.

(Prebiotic rich foods) ಸೂಕ್ಷ್ಮಜೀವಿಗಳ ಬೆಳವಣಿಗೆ ಅಥವಾ ಚಟುವಟಿಕೆಯನ್ನು ಪ್ರೇರೇಪಿಸುವ ಆಹಾರ

ಬೀನ್ಸ್, ಎಲೆಕೋಸು, ಬೆಳ್ಳುಳ್ಳಿ, ಈರುಳ್ಳಿ ಬೇರು ತರಕಾರಿಗಳು ಕ್ಯಾರೆಟ್, ಬೀಟ್ರೂಟ್.

ದುಃಖದ ಆಹಾರ 

ಬ್ರೆಡ್, ಆಕ್ಕಿ, ಪಾಸ್ತಾ, ಬಿಳಿ ಆಲೂಗಡ್ಡೆ ಉರಿಯೂತ ಮತ್ತು ಖಿನ್ನತೆಯ ಅಪಾಯವನ್ನು ಹೆಚ್ಚಿಸುತ್ತದೆ ಮತ್ತು ನಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ.

5. ಮೆದುಳಿನ ಮಾದರಿ-5- ಎಚ್ಚರಿಕೆಯಿಂದ

ಈ ವ್ಯಕ್ತಿ ವಿಶ್ವಾಸಾರ್ಹ ಊಹಿಸಬಹುದಾದ ಮತ್ತು ಆತ್ಮಸಾಕ್ಷಿಯವರು ಮತ್ತು ತಮಗಾಗಿ ಉನ್ನತ ಗುಣಮಟ್ಟವನ್ನು ಹೊಂದಿದ್ದಾರೆ. ಇತರರು ಈ ವ್ಯಕ್ತಿಗಳು ಅಪಾಯ ತೆಗೆದುಕೊಳ್ಳುವ ಬಗ್ಗೆ ಅನಿಶ್ಚತೆಯಿಂದ ತುಂಬಾ ಚಿಂತೆ ಮಾಡುತ್ತಾರೆ.

ಅವರ ಮೆದುಳು ತುಂಬಾ ಕೆಲಸ ಮಾಡುತ್ತದೆ  (amigadla basal ganglia)ಬೇಸಲ್ ಗ್ಯಾಂಗ್ಲಿಯಾಗಳು ಮೆದುಳಿನ ರಚನೆಗಳ ಗುಂಪಾಗಿದ್ದು, ಅವು ನಿಮ್ಮ ಇಡೀ ದೇಹದ ಮೇಲೆ ಪರಿಣಾಮ ಬೀರುವ ಸಂಕೀರ್ಣ ಪ್ರಕ್ರಿಯೆಗಳನ್ನು ನಿರ್ವಹಿಸುತ್ತವೆ. ನಿಮ್ಮ ದೇಹದ ಚಲನೆಯ ಸಾಮರ್ಥ್ಯವನ್ನು ನಿಯಂತ್ರಿಸುವಲ್ಲಿ ಅವುಗಳ ಪಾತ್ರಕ್ಕೆ ಹೆಸರುವಾಸಿಯಾಗಿದ್ದರೂ, ಕಲಿಕೆ, ಭಾವನಾತ್ಮಕ ಸಂಸ್ಕರಣೆ ಮತ್ತು ಇನ್ನೂ ಹೆಚ್ಚಿನವುಗಳಂತಹ ಹಲವಾರು ಇತರ ಕಾರ್ಯಗಳಲ್ಲಿ ಅವು ಪಾತ್ರವಹಿಸುತ್ತವೆ ಎಂದು ತಜ್ಞರು ಈಗ ತಿಳಿದಿದ್ದಾರೆ.ಇದು ಅಂಕ್ಶಿಯಸ್ ಆಗಲು ಕಾರಣ, ಇವರು ಸಮತೋಲನ ಆಹಾರ ಸೇವಿಸಬೇಕು. 

ಸಂತೋಷ ತರುವ ಆಹಾರಗಳು 

ಗಾಮಾ ಅಮೈನೋ ಬುಟಿರಿಕ್ ಆಮ್ಲಗಳು ಜಾಸ್ತಿ ಇರುವ ಆಹಾರಗಳು ಬ್ಲ್ಯಾಕ್ ಟೀ, ಬೆರ್ರಿ ಹಣ್ಣುಗಳು, ಮೀನು,  ನೋನಿ ಹಣ್ಣು, ಆಲೂಗೆಡ್ಡೆ, ಟೊಮೇಟೊ.

ವಿಟಮಿನ್-B6 ಜಾಸ್ತಿ ಇರುವ ಆಹಾರಗಳು ಪಾಲಕ್ ಸೊಪ್ಪು ಶುಂಠಿ, ಬ್ರಾಕೊಲಿ, ಮೊಳಕೆ ಕಾಳುಗಳು, ಬಾಳೆಹಣ್ಣು.

ಮೆಗ್ನೀಷಿಯಂ ಇರುವ ಆಹಾರಗಳು 

ಕುಂಬಳಕಾಯಿ ಸೂರ್ಯಕಾಂತಿ ಬೀಜಗಳು, ಬದಾಮಿ, ಪಾಲಕ ಸೊಪ್ಪು ಕಪ್ಪು ಬೀನ್ಸ್ , ಗೋಡಂಬಿ, ಎಳ್ಳು .

 ಒಮೇಗಾ -3-ಕೊಬ್ಬಿನ ಆಮ್ಲಗಳು 

ಆಗಸೆ ಬೀಜಗಳುಆಕ್ರೋಟು, ಕಾಮಕಸ್ತೂರಿ ಬೀಜ ಆವಕಾಡೊ ಹಣ್ಣು.

(Probioticrichfoods)ಜೀವಂತ ಸೂಕ್ಷ್ಮಾಣುಗಳು ಇರುವ ಆಹಾರ

ಬೇಯಿಸಿದ ತರಕಾರಿಗಳು ಮಿಸೋ ಸೋಪ್ಉಪ್ಪಿನಕಾಯಿ spirulina(ನೀಲಿ ಹಸಿರು ಪಾಚಿ) , ಹಸಿರು ಎಲೆ ಇರುವ ತರಕಾರಿಗಳು.

L- ಥಿಯಾನೈನ್ ಇರುವ ಆಹಾರ ಹಸಿರು ಚಹಾ 

ದುಃಖದ ಆಹಾರ 

ಸಕ್ಕರೆ, ಕೆಫೀನ್, ಆಲ್ಕೋಹಾಲ್ 

ನಮ್ಮ ದುಃಖ ಮತ್ತು ಸಂತೋಷಗಳನ್ನು ನಿಭಾಯಿಸುತ್ತಿರುವ ರಾಸಾಯನಿಕಗಳು ಮತ್ತು ಅವುಗಳನ್ನು ಉತ್ಪತ್ತಿ ಮಾಡುವ ಆಹಾರಗಳು

1. ಡೋಪಮೈನ್ ಜಾಸ್ತಿ ಇರುವ ಆಹಾರಗಳು

ಉತ್ತಮ ಗುಣಮಟ್ಟದ ನೇರ ಆಹಾರಗಳು ಮೀನು ಮೊಟ್ಟೆ, ಬೀನ್ಸ್, ಸೋಯಾ ಪದಾರ್ಥಗಳು, ಡೈರಿ ಪದಾರ್ಥಗಳಲ್ಲಿ ಹೆಚ್ಚಾಗಿ ಟೈರೋಸಿನ್ ಅಮೈನೋ ಆಮ್ಲಗಳು.

ಹಣ್ಣು ಮತ್ತು ತರಕಾರಿಗಳು 

ಕೆಲವೊಂದು ತರಕಾರಿಗಳು ಹೆಚ್ಚಾಗಿ ನ್ಯೂಟ್ರಿಯೆಂಟ್ಸ್ ಇರುವುದರಿಂದ ಉತ್ಪತ್ತಿಯಾಗಲು ಸಹಾಯ ಮಾಡುತ್ತವೆ . ಬಾಳೆಹಣ್ಣಿನಲ್ಲಿ ಟೈರಾಸಿನ್ ಆಮ್ಲ ವಿಟಮಿನ್ ಮತ್ತು ಫೊಲೇಟ್ ಹಾಗೂ ಸತು ಮತ್ತು ಮೆಗ್ನೀಷಿಯಂ ಇರುತ್ತದೆ. ಹಸಿರು ತರಕಾರಿಗಳು, ಪಾಲಕ್ ಸೊಪ್ಪು, ಡೋಪಮೈನ್ ಉತ್ಪತ್ತಿ ಮಾಡುವ ನ್ಯೂಟ್ರೈಂಟ್ಸ್, ಕಂದು ಅಕ್ಕಿ, ಓಟ್ಸ್, ಧಾನ್ಯಗಳು 

 ಒಮೇಗಾ -3-ಕೊಬ್ಬಿನ ಆಮ್ಲಗಳು 

ಆಗಸೆ ಬೀಜಗಳುಆಕ್ರೋಟು, ಕಾಮಕಸ್ತೂರಿ ಬೀಜ ಆವಕಾಡೊ ಹಣ್ಣು

2. ಸಿರೊಟೋನಿನ್ ಯುಕ್ತ ಆಹಾರಗಳು

ಮೊಟ್ಟೆ, ಬೆಣ್ಣೆ, ಟೋಫು, ಎಡ್ ಬೀಜಗಳು, ಅನಾನಸ್, ಪಾಲಕ್ ಸೊಪ್ಪು, ಬಾಳೆ ಹಣ್ಣು,ಒಣಗಿದ ದ್ರಾಕ್ಷಿ, ಧಾನ್ಯಗಳು, ಹಾಲಿನ ಉತ್ಪನ್ನಗಳು 

3. ನಾರ್ ಎಪಿನ್ ಫ್ರೈನ್ ಯುಕ್ತ ಆಹಾರಗಳು 

ಮಾಂಸ, ಮೀನು ಕೋಳಿ, ಮೊಟ್ಟೆ, ಬೆಣ್ಣೆ, ಬೀಜ ಮತ್ತು ಕಾಳುಗಳು ಸೇಬು ಬಾಳೆಹಣ್ಣು ಪಾಲಕ ಸೊಪ್ಪು ಬ್ರೋಕೋಲಿ ಹಸಿರು ಚಹಾ, ಮೊಳಕೇಕಾಳುಗಳು, ಹೂಕೋಸು , ಬೆರ್ರಿಹಣ್ಣುಗಳು, ಡಾರ್ಕ್ ಚಾಕಲೇಟ್ , ಸೋಯಾ ಚೀಸ್ ಅಥವಾ ಸೋಯಾ ಪನ್ನೀರ್, ಓಟ್ಸ್ ಗಂಜಿ. 

4. ಗಾಬಾ ಅಮೈನೋ ಬ್ಯುಟಿರಿಕ್ ಆಮ್ಲಗಳು ಜಾಸ್ತಿ ಇರುವ ಆಹಾರಗಳು

ಹಸಿರು ಮತ್ತು ಕಪ್ಪು ಚಹಾ, ಕಂದು ಅಕ್ಕಿ, ಮೊಳಕೆ ಕಾಳುಗಳು, ಸೋಯಾ , ದ್ವಿದಳ ಧಾನ್ಯಗಳು, ಕುದರಿ . ಮರದಿ ಬೀಜ , ಆಕ್ರೊಟು , ಬದಾಮಿ, ಮಶ್ರೂಮ್, ಟೊಮೇಟೊ, ಪಾಲಕ್ ಸೊಪ್ಪು, ಹೂಕೋಸು, ಮೊಳಕೆ ಕಾಳುಗಳು, ಸಿಹಿ ಗೆಣಸು, ಬಾಳೆಹಣ್ಣು, ಬೆರ್ರಿ ಹಣ್ಣು, ಕಿತ್ತಳೆ ಹಣ್ಣು, ಕೋಕೋ ದ್ವಿದಳ ಧಾನ್ಯಗಳು.

5. ಗ್ಲುಟಮೇಟ್ ಯುಕ್ತ ಆಹಾರಗಳು

ಮಾಂಸ, ಕೋಳಿ, ಮೀನು, ಬೆಣ್ಣೆ, ಟೊಮೇಟೊ, ಅಣಬೆ, ಸೋಯಾ, ಬ್ರಾಕೋಲಿ, ಅಕ್ರೋಟು, ಜೋಳ. 

ನಮ್ಮ ದೇಹಕ್ಕೆ ದಿನವೂ ಸಾಧಾರಣವಾಗಿ ಕೆಲಸ ಮಾಡುವ ಪುರುಷರುಗಳು ದಿನಕ್ಕೆ 2738 ಕಿಲೋ ಕ್ಯಾಲರಿ ಪ್ರತಿದಿನ, ತೂಕದ ಅರವತ್ತು ಕೆಜಿ ಇದ್ದವರಿಗೆ ಹಾಗೂ ಮಹಿಳೆಯರಿಗೆ 2230 ಕಿಲೋ ಕ್ಯಾಲೋರಿ ದಿನಕ್ಕೆ, ತೂಕ ಐವತ್ತು ಕೆಜಿ ಇದ್ದವರಿಗೆ ಶಕ್ತಿಯು ಬೇಕಾಗುತ್ತದೆ.

 ಇಂದು ನಾವೆಲ್ಲರೂ ನೋಡುತ್ತಿದ್ದೇವೆ, ರೈತರುಗಳು  ಹೆಚ್ಚಿನ ರಾಸಾಯನಿಕ ಯುಕ್ತ ಗೊಬ್ಬರಗಳು ಮತ್ತು ಔಷಧಿಗಳು ಮುಂತಾದವುಗಳನ್ನು ಹಣ್ಣು ತರಕಾರಿಗಳು ಬೆಳೆಯುವ ಸಂದರ್ಭದಲ್ಲಿ ಉಪಯೋಗಿಸುತ್ತಿದ್ದಾರೆ. ಇದರಿಂದ ನಮ್ಮ ದೇಹದ ಲ್ಲಿನ ನರಗಳಿಗೆ ತೊಂದರೆಯಾಗಿ ಖಿನ್ನತೆ, ನಿದ್ರಾಹೀನತೆ, ಮುಂತಾದ ನರದೌರ್ಬಲ್ಯಗಳಿಗೆ ತುತ್ತಾಗುವ ಸಂದರ್ಭವಿದೆ, ಹಾಗಾಗಿ ನಾವು ಆರ್ಗ್ಯಾನಿಕ್ ಅಂದರೆ ರಾಸಾಯನಿಕ ಮುಕ್ತವಾಗಿ ಬೆಳೆದ ಆಹಾರಗಳನ್ನು ಮತ್ತು ದವಸ ಧಾನ್ಯಗಳನ್ನು ಹಾಗೂ ತರಕಾರಿಗಳನ್ನು ಸೇವನೆ ಮಾಡಬೇಕಾಗುತ್ತದೆ.

********************ಲೇಖಕರು******"*****"*

         ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

Comments

Popular posts from this blog

ಶಿಶು ಗೀತೆ -9

ಹೆತ್ತು ಹೊತ್ತ ತಾಯಿ

ಸಂತೋಷವಾಗಿರಲು ಪ್ರಯತ್ನಿಸೋಣ