ಮಕ್ಕಳ ಗೀತೆ -41
🌹ಹಕ್ಕಿಯು ಬಂದಿತು🌹
ಹಕ್ಕಿಯು ಬಂದಿತು
ಬಾನಲಿ ಚುಕ್ಕಿ ತೋರಿತು
ಸಂಜೆ ಸೂರ್ಯನ
ನಗುತಾ ಮುಳುಗಿಸಿತು
ಮರದ ಕೊಂಬೆಯಲಿ
ಗೂಡನ್ನು ಕಟ್ಟಿತು
ಪುಟ್ಟ ಮರಿಗಳ
ಗೂಡಿನ ಒಳಗೆ ಬಿಟ್ಟಿತು
ರೈತ ಹೊಲ ಉಳಲು
ಕೀಟಗಳ ಎಕ್ಕಿ ತಂದಿತು
ಅಳುವ ಮಕ್ಕಳಿಗೆ
ತುತ್ತನು ಇಟ್ಟಿತು
ಲೈಟ್ ಕಂಬದಿ ಕೂತು
ಚಿಲಿಪಿಲಿ ಎಂದಿತು
ತೊಟ್ಟಿಯ ನೀರನು
ಗುಟುಕು ಕುಡಿಯಿತು
ಹಾರುತ ಬಾನಲ್ಲಿ ಹೊರಟಿತು
ತೋಟದಿ ಮರದಿ ಕೂತಿತು
ಚಿಲಿಪಿಲಿ ಎಂದು ಕೂಗಿತು
ಸಮಯವ ನೂಕುತ ಹಾರಿತು
*********ರಚನೆ**********
ಡಾ. ಚಂದ್ರಶೇಖರ ಚನ್ನಾಪುರ ಹಾಲಪ್ಪ
Comments
Post a Comment