ಮಕ್ಕಳ ಗೀತೆ -42
🌹ಕೃಷ್ಣನೆ ಬಾರೋ 🌹
ಬೆಣ್ಣೆಯ ಕದ್ದ
ಕೃಷ್ಣನೆ ಬಾರೋ
ಕೊಳಲನ್ನು ಊದುತ
ಹಾಡುತ ಬಾರೋ
ಮಹಾಭಾರತಕೆ ದೈವ
ಸಾರಥಿ ನೀನಂತೆ
ರಾಧೆಯ ಮನವ
ಗೆದ್ದ ಚಿತ್ತ ಚೋರನಂತೆ
ಕೌರವರ ನೀನು ಮುಳುಗಿಸಿದೆ
ಪಾಂಡವರ ಗೆದ್ದು ಬೀಗಿಸಿದೆ
ಚಕ್ರವ ಹಿಡಿದ ಶೂರ ನೀನು
ಕೊಳಲನ್ನು ನುಡಿಸೋ ಪೋರ ನೀನು
ನಮ್ಮ ಮುದ್ದುಕೃಷ್ಣ
ಹೊಳೆಯುವೆ ನೀನು ತಕ್ಷಣ
ನೀನು ಧರ್ಮದ ದಾರಿ
ಅಧರ್ಮಕ್ಕೆ ನೀನೇ ಸಂಹಾರಿ
*********ರಚನೆ*********
ಡಾ.ಚಂದ್ರಶೇಖರ್ ಚನ್ನಾಪುರ ಹಾಲಪ್ಪ
Comments
Post a Comment