ಮಕ್ಕಳ ಗೀತೆ -36
🌹ನಮ್ಮ ದೇಶ ಭಾರತ 🌹
ಭಾಷೆಗಳು ನೂರಾರು
ವೇಷಗಳು ನೂರಾರು
ಸಂಸ್ಕೃತಿಯ ಸವಿಯ ರಥ
ಅದುವೇ ನಮ್ಮ ಭಾರತ
ಎಲ್ಲಿ ನೋಡು ನಾಡ ಹಬ್ಬ
ಊರುಗಳಲ್ಲಿ ದೈವದಬ್ಬ
ಜಾತಿ ಜಾತಿಗಳ ನಡುವೆ ಪ್ರೀತಿ
ಹೆಸರು ಒಂದೇ ನಮ್ಮ ಭಾರತ
ಧರ್ಮಗಳಿಗೆ ಭೇದವಿಲ್ಲ
ಪ್ರೀತಿ ನೀತಿ ಮರೆತ್ತಿಲ್ಲ
ನಾವೆಲ್ಲರೂ ಮನುಜರು
ನಮ್ಮ ದೇಶ ಭಾರತ
ಕೂಡಿ ಬಾಳುವ ನೆಲೆಯಿದು
ಭೇದಭಾವ ಎಂದು ತೋರದು
ಉಸಿರುಗಟ್ಟಿ ಹೇಳುವೆ
ನಮ್ಮ ದೇಶ ಭಾರತ
***********ರಚನೆ*********
ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ
Comments
Post a Comment