ವೀಳ್ಯದೆಲೆ
ಬಳ್ಳಿಯಾಗಿ ಹಬ್ಬಿದೆ ನಾನು ಮರಕೆ
ಬುಡದಿಂದ ತುದಿಗೆ ಸುತ್ತಿದೆ ಕುಣಿಕೆ
ಉಸಿರು ಕೊಟ್ಟೆ ನಾನು ಮನುಕುಲಕ್ಕೆ
ತಂಪ ನೆರೆಯಿರಿ ನೀವು ನನ್ನ ಬುಡಕ್ಕೆ
ಹಚ್ಚ ಹಸರಿನಾ ಕೊನೆ ಎಲೆಯಾಗಿ
ಮರದ ಸುತ್ತ ನಾನು ಬಲೆಯಾಗಿ
ಮನುಜನಿಗೆ ತಿನ್ನಲು ವೀಳ್ಯದೆಲೆಯಾಗಿ
ನನ್ನ ಜಗಿದು ಉಗಿಯಿರಿ ನೀವು ಖುಷಿಯಾಗಿ
ಹಲ್ಲು ತುಂಬ ಕೆಂಪು ಈ ವೀಳ್ಯದೆಲೆ
ಮನಸ್ಸು ಏಕೋ ತಂಪು ನೀ ತಿನ್ನುತ್ತಲೆ
ಬಳ್ಳಿಯಾದೆ ನಾ ಸುಂದರ ಬಳ್ಳಿಯಾದೆ
ಎದುರು ತೊಡರಿಗೆ ಜಗ್ಗದ ಮಿಂಚುಳ್ಳಿಯಾದೆ
*********ರಚನೆ*********
ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ
Comments
Post a Comment