ಮಕ್ಕಳ ಗೀತೆ -38
🌹ಕಾಲದ ಕುಣಿತ 🌹
ಚಳಿಗಾಲ ಬಂದೈತೆ ಏಕೋ ಚಳಿ ಚಳಿ
ಬಿಸಿಲ ದಗೆ ಸುಡುತೈತಿ, ಏಕೋ ಬಿಸಿ ಬಿಸಿ
ಮಳೆಯು ಇಳೆಗೆ ಬೆರೆತೈತಿ ಹಸಿ ಹಸಿ
ಋತುಗಳು ಕಥೆ ಹೇಳೈತಿ ಸಿಹಿ ಸಿಹಿ
ಚಿಗುರು ವಸಂತ ಮಾಸ ಬಂತು ನೋಡು
ಹೂವು ಅರಳಿ ಕಂಪು ವಾಸನೆ ನೋಡು
ಹಣ್ಣು ತಿಂದು ಸಿಹಿಯ ಸವಿ ನೋಡು
ಕಾಲಗಳು ವ್ಯಥೆಯ ಹೇಳೈತಿ ನೋಡು
ನಿಂತವರನ್ನು ಯಾರು ಕೇಳರು
ಮಲಗಿದರೆ ಮುಟ್ಟಿ ನೋಡರು
ಓದಿದರೆ ಹಿಂದೆ ಯಾರೂ ಬಾರರು
ದೇಹದ ನುಡಿಯ ಯಾರು ಅರಿವರು
ಓದಿದವರಿಗೇ ಜಗವು ಇದು ಅಲ್ಲ
ಬರೆದಿಡಲು ಯಾರು ಬೆದರುವುದಿಲ್ಲ
ಬಯಕೆಗಳಿಗೆ ಬಣ್ಣ ಬಳಿದಿಹರಲ್ಲ
ಹುಚ್ಚು ಗಿಚ್ಚು ಜಗಕೆ ಯಾರುಬಲ್ಲ
**********ರಚನೆ********
ಡಾ.ಚಂದ್ರಶೇಖರ್, ಚನ್ನಾಪುರ ಹಾಲಪ್ಪ
Comments
Post a Comment