ಮಕ್ಕಳ ಗೀತೆ -35
🌹ನಗುತಿರು ಕಂದ 🌹
ನನ್ನ ಬಾಳ ಜಗವು ನೀನೆ
ನನ್ನ ಖುಷಿಯ ಮಗುವು ನೀನೆ
ನನ್ನ ನೋಡಿ ನೀ ಅಳಲು
ಜಗವು ಏಕೆ ನಗುವುದು
ನನ್ನೆದೆಯ ಊರಿನಲ್ಲಿ
ನಗುವ ಚಿಲುಮೆ ಉಕ್ಕಿರಲು
ಭಾನು ಬಂದು ಕರೆವುದೆ
ಕುಣಿಯುತ ಓಲವ ಹಾಡದೆ
ಮೋಡದಲ್ಲಿ ನಿನ್ನ ಕಂಡೆ
ಮಿಂಚಂತೆ ಬಾಳಲಿ ಬಂದೆ
ಕೈ ಹಿಡಿದು ನಡೆ ಕಂದ
ಆಕಾಶವೇ ದಾರಿ ನಿನಗೆ
ವಿಶ್ವದಲ್ಲಿ ನೀನೇ ಬೆರಗು
ನಿನ್ನ ನೋಟ ಬಲು ಸೊಬಗು
ನೀನು ತಾನೆ ನನ್ನ ಖುಷಿ
ನೀನು ತಾನೆ ಬಾಳ ಸಿಹಿ
***********ರಚನೆ*********
ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ
Comments
Post a Comment