Posts

Showing posts from October, 2022

ಗೋವಾ ಬಾ ಮಾವ

Image
ಮೋಜು ಮಂದಿರದಿ ಜೂಜಾಟ ಕುಡಿದು ತೇಲುವ ಮನ ಮಾಟ ಹುಡುಗಿಯರ ನರ್ತನದ ನೋಟ ಪಡ್ಡೆ ಹುಡುಗರ ಸವಿ ರಸದುಟ ಆಡೋಣ ಬನ್ನಿ ಅಂದರ್ ಬಾಹರ್ ಇಲ್ಲಿ ದುಡ್ಡೇ ದೋಡ್ಡಣ್ಣ ಓ ಪ್ಯಾರ್ ಕಟ್ಟಿ ಕಂತೆ ಕಂತೆ ನೋಟು ಮರೆತು ಚಿಂತೆ ಗಿಂತೆ ಬಿಟ್ಟು ದುಡ್ಡು ಬಂದ್ರೆ ಹೊಡೆದಂಗೆ ಲಾಟರಿ ದುಡ್ಡು ಹೋದ್ರೆ ವೀಕ್ ಆದಂಗೆ ಬ್ಯಾಟರಿ ಆಟ ಆಡಲು ಸಾಲು ಸಾಲು ಜನ ಆಡಿ ಖುಷಿ ಪಟ್ಟಿದೆ ತನು ಮನ ಕುಡಿದು ಆಡು ಭ್ಲೆಂಡರ್ ಸ್ಪ್ರೇಡ್ ಕುಣಿದು ನೋಡು ತಂಡೆರ್ ಸೈಡ್ ಮಿಕ್ಸ್ ಮಾಡಿ ಕುಡಿ ಸ್ಪ್ರೇಟ್ ಸೇದು ಒಮ್ಮೆ ಸಿಗೆರೆಟ್ಟೇ ಲೈಟ್  ದುಡ್ಡಿದ್ದೋರು ದುನಿಯಾ ಇದು ದಿಲ್ ಇದ್ದೋರು ಗುಂಡಿಗೆ ಇದು ದಮ್ಮ್ ಇದ್ದೋರಿಗೆ ಸ್ವರ್ಗ ಇದು ಮೀಟರ್ ಇದ್ದೋರು ಮೋಟಾರ್ ಇದು ಹುಡಿಗಿರು ತುಂಬಾನೇ ಕ್ಯೂಟ್ ಬಣ್ಣ ನೋಡದ್ರೆ ಹಾಗೇ ವೈಟ್ ಎಲ್ಲರಿಗೂ ಕೊಡತಾರೆ ಸೈಟ್ ಲುಕ್ ಹೊಡದಂಗೆ ಕಿಂಗ್ ಲೈಟ್ ದಮ್ಮ್ ಇದ್ರೆ ಮಾಡಬಹುದು ಫಿಕ್ಸ್ ಸಿಗುತ್ತೆ ಕಂಡಿತಾ ಸೂಪರ್ ಕಿಕ್ಸ್ ತಗಳೋಪ್ಪಾ ಸ್ವಲ್ಪ ನೀನು ರಿಸ್ಕ್ ಸೂಟ್ ಆದ್ರೆ ಹೊಡದಂಗೆ ಸಿಕ್ಸ್  ********ರಚನೆ ********* ಡಾ. ಚಂದ್ರಶೇಖರ. ಸಿ. ಹೆಚ್

ದೀಪಾವಳಿ

Image
  ಹಣತೆಯೊಂದು ಬಾಳ ಬೆಳಗಿ ಕಷ್ಟದ ಕತ್ತಲೆಯೊಂದು ಬದುಕಲಿ ಕರಗಿ ಜೀವನದಿ ದುಃಖದ ಎಣ್ಣೆ  ಸುಖವೆಂಬ ಬತ್ತಿ  ದೀಪದಂತೆ ಉರಿದು  ಮನದಿ ಬೆಳಕು ಬೆಳಗಲಿ  ಬದುಕ ಯಾತ್ರೆಯಲ್ಲಿ ಆಸೆ ನೂರು ಕನಸ್ಸುಗಳ ಮಾತ್ರೆಗಳ ಕಾರು ಬಾರು ಆಸೆ ಕನಸ್ಸುಗಳು ಬಾಳಲಿ ನನಸ್ಸು ಉಕ್ಕಲಿ ಉತ್ಸಾಹ ಮೂಡಲಿ ಉಲ್ಲಾಸ ನೋವುಗಳ ಚಿಂತೆ ದೂರವಾಗಲಿ ಕಷ್ಟಗಳು ದೀಪದಂತೆ ಉರಿದು ಹೋಗಲಿ ಖುಷಿ ಎಂಬ ಬೆಳುಕು ಚೆಲ್ಲಲಿ ಮನದ ಮೌಢ್ಯತೆ ಮರೆತು ಹೋಗಲಿ ಬಾಳ ದಾರಿ ಎಡರು ತೊಡರು ಸಾಗಬೇಕು ನಾವು ಸವೆಸಿ ಪೊಗರು ಮನದಿಂದ ಮನಕೆ ದೀಪ ಹಚ್ಚಿ ಎಲ್ಲಾ ಕನಸ್ಸು ನನಸ್ಸಾಗಿ ಬೆಳಗಲಿ ಬಾಳಲಿ ದೀಪಾವಳಿ ಹಬ್ಬದ ಶುಭಾಶಯಗಳು  *********ರಚನೆ ********* ಡಾ. ಚಂದ್ರಶೇಖರ. ಸಿ. ಹೆಚ್

ಕೂಸುಮರಿ

Image
  ಎದೆಗೊತ್ತಿ ಕೊಂಡು ಮುದ್ದಾಡಿದ ಅಮ್ಮ ತಲೆಮೇಲೆ ಎತ್ತಿಕೊಂಡು ತಿರುಗಾಡಿದ ಅಪ್ಪ ಕೂಸುಮರಿ ಮಾಡಿ ಕುಣಿದಾಡಿದ ಅಣ್ಣ ನೆನಪುಗಳು ಇಲ್ಲಿ ಬದುಕು ಚೆಲ್ಲಾಪಿಲ್ಲಿ ಬೆಳೆದು ನಿಂತಿರುವೆ ನಾನು ಕನ್ನಡಿಯು ಏಳುತಿದೆ ಕಣ್ಣೆದುರು ಕವನ ನಾಚುತ್ತಿದೆ ಏಕೊ ನೋಡಿ ಪ್ರತಿಬಿಂಬವ ನಯನ ಬದುಕು ಬಿಡಿಸದ ಒಗಟು ಮನವು ಮಾತಲಿ ಒರಟು ಕಾಲವು ಕಣ್ಮರೆಯಾಗುತ್ತಿದೆ ಆಡಲು ಬಿಟ್ಟು ನನ್ನ ದೇಹವು ಬಾಗುತಿದೆ ಕನಸ್ಸುಗಳ ರೆಕ್ಕೆ ಮುರಿದಂತೆ ಇನ್ನ ಆಸೆಗಳ ಸುಳಿ ನುಂಗುತಿದೆ ನನ್ನ ಜೀವವನ್ನ ಜೀವನದ ಪಯಣದಿ ಹೊರಟ ದಾರಿ ಹೋಕ ನಾನು ಕಷ್ಟಗಳ ಸರಮಾಲೆಯಲಿ  ಕುತ ಮೂಖ ನಾನು ಭಾವನೆಗೆ ಬೆಲೆ ಕಟ್ಟಿದೆ ಸಂಬಂಧಗಳ ನೆಲೆ ಎಲ್ಲಿದೆ ದಿನವೂ ಸಾಗುತಿದೆ ದೂರ ಕ್ಷಣದ ಮೌನ ಬಲು ಬಾರ ನೆನಪುಗಳು ಇಲ್ಲಿ ಖಾರ ಹೃದಯ ಬಡಿಯುತಿದೆ ಜೋರ ಬದುಕು ಬೇಕು ಬೇಡಗಳ ಸಾರ ಬದುಕುಬೇಕು ನಾವು ಮರೆತು ನೋವಿನ ತೀರ  *********ರಚನೆ ******** ಡಾ. ಚಂದ್ರಶೇಖರ. ಸಿ. ಹೆಚ್

7. ಶಿಕ್ಷಣದಿ ನಮ್ಮಯ ಬೆಳವಣಿಗೆ

Image
ವಿದ್ಯಾಭ್ಯಾಸವು ಯುವ ವಿದ್ಯಾರ್ಥಿಗಳನ್ನು ನಮ್ಮ ಮುಂದಿನ ಭವಿಷ್ಯದೆಡೆಗೆ ತರಬೇತಿಗೊಳಿಸುವ ವೇದಿಕೆಯಾಗಿದೆ. ಇದು ನಮಗೆ ಜ್ಞಾನ ಮತ್ತು ಕೌಶಲ್ಯಗಳನ್ನು ನೀಡಿ ನಾವು ಉದ್ಯೋಗವಂತರಾಗಿ ನಮ್ಮ ಜೀವನ ಸಾಗಿಸಲು ಸಹಾಯ ಮಾಡುತ್ತದೆ. ವಿಜ್ಞಾನ ಮತ್ತು ತಂತ್ರಜ್ಞಾನವು ನಮ್ಮ ದೇಶದ ಆರ್ಥಿಕ ಬೆಳವಣಿಗೆಗೆ ಸಹಾಯಕಾರಿಯಾಗಿದೆ. ಭಾರತದ ವಿದ್ಯಾಭ್ಯಾಸವು ಪ್ರಪಂಚದ ವಿದ್ಯಾಭ್ಯಾಸದ ವ್ಯವಸ್ಥೆಗಳಲ್ಲಿಯೇ ಒಂದು ಉತ್ತಮ ಶಿಕ್ಷಣ ವ್ಯವಸ್ಥೆ. ನಾವು ಈಗ ಪ್ರಾಚೀನ ಶಿಕ್ಷಣವನ್ನು ತಿಳಿಯೋಣ, ಪ್ರಾಚೀನ ಶಿಕ್ಷಣವು ಎರಡು ಶಿಕ್ಷಣ ವ್ಯವಸ್ಥೆಯಾಗಿ ಅಭಿವೃದ್ಧಿ ಹೊಂದಿತ್ತು ಒಂದು ವೇದಿಕ ಮತ್ತೊಂದು ಬುದ್ಧಿಸ್ಟ್,  ವೇದಿಕ ಸಂಸ್ಕೃತ ಭಾಷೆಯಲ್ಲಿದೆ ಮತ್ತು ಬುದ್ಧಿಸ್ಟ್ ಪಾಳಿ ಭಾಷೆಯಲ್ಲಿದೆ. ಪ್ರಾಚೀನ ಶಿಕ್ಷಣವು ನಮಗೆ ನಮ್ರತೆ, ಸತ್ಯನಿಷ್ಠೆ, ಶಿಸ್ತು,  ಸ್ವಾವಲಂಬನೆ ಕಲಿಸುವುದು. ಶಿಕ್ಷಣವು ಆಶ್ರಮ ಗುರುಕುಲ ದೇವಸ್ಥಾನ ಮನೆ ಹಾಗೂ ಪೂಜಾರಿಗಳು ದೇವಸ್ಥಾನದಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ಕಲಿಸುತ್ತಿದ್ದರು. ಶಿಕ್ಷಣದ ಮೂಲ ಉದ್ದೇಶ ಸಾಂಸ್ಕೃತಿಕ ಬೆಳವಣಿಗೆ ವ್ಯಕ್ತಿತ್ವ ವಿಕಾಸನ ಮುಂತಾದ ಆದರ್ಶಗಳನ್ನು ಕಲಿಸುತ್ತಿದ್ದವು.  ಮಧ್ಯಕಾಲೀನ ಶಿಕ್ಷಣ, ಈ ಕಾಲಘಟ್ಟದಲ್ಲಿ ಅಂದರೆ 18ನೇ ಶತಮಾನದಲ್ಲಿ ಮುಸ್ಲಿಮರು ನಮ್ಮ ದೇಶವನ್ನು ಆಳಿ, ನಮ್ಮ ದೇಶದಲ್ಲಿರುವ ಪ್ರಾಚೀನ ಶಿಕ್ಷಣವನ್ನು ತೆಗೆದು ನೂತನ ಶಿಕ್ಷಣವನ್ನು ಜಾರಿಗೆ ತಂದರು. ಈ ಶಿಕ್ಷಣದ ಉದ್ದೇಶ ಜ್ಞಾನ ಮತ್ತ...

6. ಕಾಲೇಜು ಜೀವನದಿ ನಾನು ಏನು ಕಲಿತೆ

Image
ಇಂದಿನ ಯುಗದಲ್ಲಿ ಶಿಕ್ಷಣವುi ಯುವಕರಿಗೆ ಭವಿಷ್ಯ ನಿರ್ಮಾಣ ಮಾಡಿಕೊಳ್ಳಲು ವೇದಿಕೇಯಾಗಿ ಕೆಲಸ ಮಾಡುತ್ತಿದೆ. ಶಿಕ್ಷಣವು ಜ್ಞಾನ ಮತ್ತು ಕೌಶಲ್ಯಗಳನ್ನು ಕಲಿಸಿ ನಾವು ಉದ್ಯೋಗವಂತರಾಗಲೂ ಸಹಾಯ ಮಾಡುತ್ತಿದೆ. ಶಿಕ್ಷಣದಲ್ಲಿ ತಂತ್ರಜ್ಞಾನದ ಕಲಿಕೆ ಮತ್ತು ತಂತ್ರಜ್ಞಾನದ ಅಭಿವೃದ್ಧಿಯು ಭಾರತದ ಆರ್ಥಿಕ ಪ್ರಗತಿಗೆ ತುಂಬಾ ಸಹಾಯಕವಾಗುತ್ತಿದೆ. ಈ ಆಧುನಿಕ ಜಗತ್ತಿನಲ್ಲಿ ಶಾಲೆ ಮತ್ತು ಕಾಲೇಜುಗಳ ಶಿಕ್ಷಣ ನಿರ್ವಹಣೆ ನಮ್ಮ ವೈಯಕ್ತಿಕ ಮತ್ತು ವೃತ್ತಿ ಜೀವನದ ಗೆಲುವು ಎಂದು ಭಾವಿಸಲಾಗಿದೆ. ಇಂದು ಬಹುಮುಖ್ಯ ಅವಶ್ಯಕತೆ ಇರುವುದು ಪುಸ್ತಕಗಳ ಬಾಯಿಪಾಠ ಅಥವಾ ಜ್ಞಾಪಕ ಮಾಡಿಕೊಂಡು ಹೇಳುವ ಡಾಕ್ಟರ್, ಇಂಜಿನಿಯರ, ಶಿಕ್ಷಕ ಮತ್ತು ಮ್ಯಾನೇಜರ್ ಗಳಲ್ಲ ಪುಸ್ತಕವನ್ನು ಓದಿ ನಾವು ಪಡೆದ ಜ್ಞಾನವು ನಮ್ಮ ಜೀವನ ನಿರ್ವಹಣೆ ಮಾಡಲು ಹಾಗೂ ಬರುವ ಕಷ್ಟಗಳನ್ನು ಜೀವನದಲ್ಲಿ ಎದುರಿಸಲು ಸಹಾಯ ಮಾಡುವುದಿಲ್ಲ ಅದಕ್ಕೆ ಅವಶ್ಯಕತೆ ಇರುವುದು ಜೀವನ ಕೌಶಲ್ಯ ಮತ್ತು ಶೈಕ್ಷಣಿಕ ಕೌಶಲ್ಯ. ಇವುಗಳು ನಮಗೆ ಜ್ಞಾನ ಮತ್ತು ನಮ್ಮ ವರ್ತನೆಗಳನ್ನು ರೂಪಿಸಲು ಹಾಗೂ ವ್ಯಕ್ತಿಗಳ ನಡುವಿನ ಸಂಬಂಧಗಳನ್ನು ಸರಿದೂಗಿಸುತ್ತದೆ.  ಜೀವನ ಕೌಶಲ್ಯಗಳು ಯಾವವೆಂದರೆ  1.ವ್ಯಕ್ತಿ ಕೌಶಲ್ಯ 2. ಭಾವನಾತ್ಮಕ ಕೌಶಲ್ಯ 3. ಸಾಮಾಜಿಕ ಕೌಶಲ್ಯ 4. ಶೈಕ್ಷಣಿಕ ಕೌಶಲ್ಯ 5.ಬೌದ್ಧಿಕ ಕೌಶಲ್ಯ 6.ಸಂವಹನ ಕೌಶಲ್ಯ 7.ಮೋಟಾರ್ ಕೌಶಲ್ಯ 8.ಸೌಂದರ್ಯದ ಕೌಶಲ್ಯ 9.ತಾಂತ್ರಿಕ ಕೌಶಲ್ಯ 10.ನಿರ್ವಹಣಾ ಕೌಶಲ್ಯ 11...

ಮಳೆ ಬಂದಿತ್ತು

Image
  ಅಗಸದಲ್ಲಿ ಕರಿಯ ಮೋಡ ಸಿಡಿಲು ಹಾಗೆ ಸಿಡಿಯಿತು ನೋಡ ಮಿಂಚು ಬಂದು ಮನೆಯಲ್ಲಿ ಕರೆಂಟ್ ಹೋಗಿತ್ತು  ಕುಲ್ಡನ ಮಳೆಯೂ  ರಭಸದಿ ಸುರಿದು ಬಿಟ್ಟಿತ್ತು  ನಮ್ಮ ಊರಲ್ಲಿ  ಮಳೆಯೂ  ಜೋರು ಬಂದಿತ್ತು ಅಮ್ಮ ಉರಿದ ಕಡಲೆಕಾಯಿ ಏಕೊ ನೆನಪಿಗೆ ಬಂದಿತ್ತು ತಿನ್ನಲು ಮನವು ಬಯಸಿತ್ತು  ಅಮ್ಮ ಮಾಡಿದ ಮುದ್ದೆ ಉಂಡು ರಾತ್ರಿ ಮಲಗಿ ಬೆಳಗ್ಗೆ ಏಳಲು ಕಾಫಿ ಮಾಡಿದ ಅಮ್ಮ ನಮ್ಮ ಕರೆದಿತ್ತು ಕಾಫಿ ಲೋಟಕೆ ಮಂಡಕ್ಕಿ ಹಾಕಿ ತಿಂದು ಮನವು ತೇಗಿತ್ತು ನೋಡಲು ನೀರಿನ ಶಬ್ದ ಕೇಳಿತ್ತು  ನಮ್ಮ ಊರಿನ ಕಟ್ಟೆ ತುಂಬಿತ್ತು ಹರಿವ ನೀರಲ್ಲಿ ನಾನು ಮಾಡಿದ  ಹಾಳೆ ದೋಣಿ ಮುಳಿಗಿತ್ತು ನೀರಲ್ಲಿ ಆಡಿ ಗೊಚ್ಚೆಲಿ ಕುಣಿದು ನನ್ನ ಅಂಗಿ ನೆನೆದಿತ್ತು ಮನೆಯಲ್ಲಿ ಹೋಗಿ ಒಲೆಯಲಿ  ಕೆಂಡ ಕಾದಿತ್ತು ಅಮ್ಮ ಸುಟ್ಟ ಅಲಸಿನ ಬೀಜ ಬಾಯಲಿ ನೀರು ತಂದಿತ್ತು ಅಮ್ಮ ಮಾಡಿದ ತಿಂಡಿ ತಿಂದು ನಮ್ಮ ಪಯಣ ಶಾಲೆಗೆ ಹೊರಟ್ಟಿತ್ತು ನಮ್ಮ ಮೇಷ್ಟ್ರೇಗೆ ಗಿಡವನು  ನಡಿಸುವ ಆಸೆ ಬಂದಿತ್ತು ಗಿಡವನ್ನು ನೆಟ್ಟು ಶಾಲೆಯಲ್ಲಿ ಶಾರದಾ ಪೂಜೆ ನಡೆದಿತ್ತು ಮಂಡಕ್ಕಿ ಖಾರ ತೆಂಗಿನಕಾಯಿ  ಚೂರು ತಿಂದು ಮನವು ಕುಣಿದಿತ್ತು ಸಂಜೆ ಮನೆಗೆ ಬಂದು ಹೋಮ್ ವರ್ಕ್  ಮಾಡದೆ ಉಳಿದಿತ್ತು ಅಮ್ಮ ಕೂಟ್ಟ ಬೆತ್ತದ ಏಟಿಗೆ ಬಾಸುಂಡೆ ಬಂದಿತ್ತು ಅಪ್ಪ ತಂದ ಅಂಗಡಿ ಜಾಮೂನು  ತಿಂದ ನಮಗೆ  ನೋವು ಮಾಯವಾಗಿತ್ತು ಹೊಲಕ್ಕೆ ಹೊರಟ ನಮಗೆ  ಸೀಬೆಯ ಮ...

5. ಬಾಲ್ಯದಿ ದಡ್ಡ ಬುದ್ದಿವಂತನಾದರೆ

Image
ಈ ಆಧುನಿಕ ಜಗದಲ್ಲಿ ನಾವು ತಂತ್ರಜ್ಞಾನವನ್ನು ಅವಲಂಭಿಸಿ ಓಡುತ್ತಿದ್ದೇವೆ ನಮಗೆ ಕೆಲಸ ಕೊಡುವ ಸಂಸ್ಥೆಗಳು ಹಾಗೂ ಕಂಪನಿಗಳು ಕೂಡ  ನಮ್ಮನ್ನು ಅಳೇದು ತೂಗುವುದು ನಾವು ಶಾಲೆಯಲ್ಲಿ ಪಡೆದ ಅಂಕಗಳಿಂದ. ಹೀಗೆ ನಮ್ಮ ಭವಿಷ್ಯವನ್ನು ಅಂಕಗಳಿಂದ ನಿರ್ಧರಿಸುವ ಕುತಂತ್ರಗಳು ನಡೆಯುತ್ತವೆ. ಇಂತಹ ಎಷ್ಟೋ ವಿಚಾರಗಳು ನಾವು ಕೇಳಿ ತಿಳಿದಿರುತ್ತೇವೆ ಹಾಗೆಯೇ ನಮ್ಮ ಅನುಭವಕ್ಕೆ ಕೂಡ ಬಂದಿರುತ್ತದೆ.  ಶಾಲೆಯಲ್ಲಿ ನಾವು ಪಡೆದ ಅಂಕಗಳಿಂದ ಮಾತ್ರವೆ ನಮ್ಮ ಜೀವನ ಕಂಡಿತಾ ರೂಪುಗೊಳ್ಳುವುದಿಲ್ಲ. ಯಾವುದೆ ವಿದ್ಯಾರ್ಥಿಯಾಗಲಿ ತಾವು ಪಡೆದ ಅಂಕಗಳು ಕಡಿಮೆ ಇದೆ ಅಂದರೆ ನಾನು ಜಸ್ಟ್ ಪಾಸ್  ಅಥವಾ ಫೇಲ್ ಆ ಗಿದ್ದೇನಹಾಗಾಗಿ ಮುಂದೆ ನಮಗೆ ಒಳ್ಳೆಯ ಭವಿಷ್ಯವಿಲ್ಲ ಎಂದು ತಪ್ಪು ತಿಳಿದು ಆತ್ಮಹತ್ಯೆಯಂತಹ  ದುಡುಕು ನಿರ್ಧಾರವನ್ನು ತೆಗೆದುಕೊಂಡು ತಮ್ಮ ತಂದೆ ತಾಯಿಗಳಿಗೆ ನೋವನ್ನು ಉಂಟು ಮಾಡುವುದು ತಪ್ಪು. ಬಾಲ್ಯದಲ್ಲಿ ಎಷ್ಟೋ ಜನ ವಿದ್ಯಾಭ್ಯಾಸ ಮಾಡಲು ಸಾಧ್ಯವಾಗದೆ ಇರುವವರು ನಮ್ಮ ದೇಶ ಗೌರವಿಸುವಂತಹ ಸಾಧನೆ ಮಾಡಿದ್ದಾರೆ ಹಾಗೆ ಉದಾಹರಣೆ ಹೇಳುವುದದಾದರೆ ನಮ್ಮ ಕನ್ನಡ ಸಿನೆಮಾ ಜಗತ್ತಿನ ದಂತ ಕಥೇ ವರನಟ ಡಾ. ರಾಜಕುಮಾರ ಇವರ ವಿದ್ಯಾಭ್ಯಾಸ ನಾಲ್ಕನೇ ತರಗತಿಗೆ ಮೋಟಕುಗೊಂಡಿತು ಇವರ ತಂದೆ ಪ್ರಸಿದ್ಧ ಗುಬ್ಬಿ ನಾಟಕ ಕಂಪನಿ ಕಲಾವಿದರಾಗಿದ್ದರು ತಮ್ಮ ವಿದ್ಯಾಭ್ಯಾಸ ನಿಂತ ನಂತರ ತಂದೆಯನ್ನು ಹಿಂಬಾಲಿಸಿ ನಾಟಕಗಳಲ್ಲಿ ಸಣ್ಣ ಪಾತ್ರವಹಿಸುತ್ತ ಬೆಳೆದ ಇವ...

ಜಾತಿಯ ನೀತಿ

Image
ಜಾತಿಗಳ ಮದ್ಯೆ ನೀತಿಗಳು ಜೋರು ಭರಗಾಲದಾಗೆ ಭೂಮಿಗೆ ಬೋರು  ಹುಟ್ಟಿದ ಮಗುವಿಗೆ ಜನಿವಾರವೆಲ್ಲಿ ಬೆಳೆದ ಮಕ್ಕಳು ಲಿಂಗವ ಕಿತ್ತೆಸದಿರಿಲ್ಲಿ ಹರಿಯಂತೆ ಹರನಂತೆ ಬ್ರಹ್ಮನು ದೇವರು ಸೂರಿಲ್ಲದ ತೇರಿನಲ್ಲಿ ಬದುಕುತಿರುವ ಬಡವರು ಹೊಲೆಯ ಮಾದಿಗ ಮನುಷ್ಯರಲ್ಲವೇ? ಮೈಯಲ್ಲಿ ಹರಿವುದು ರಕ್ತವಲ್ಲವೇ? ಎಲ್ಲರೂ ತಿನ್ನುವುದು ಹೊಟ್ಟೆಗೆ ಅನ್ನ ಮರೆತಿಹರು  ಜನರು ಮಾನವೀಯತೆಯನ್ನ ಜಾತಿಗಳು ನೂರು ಬಿಟ್ಟಿವೆ ಬೇರು ಆಲದ ಮರದಂತೆ ಭೀಳಿಲ ಸೂರು ಜಾತಿಗಳ ಸೌದೆಯಲ್ಲಿ ಹೊತ್ತಿದೆ ಬೆಂಕಿ ಬೇಯುತಿದೆ ಮಾನವರ ಬಾಳಲಿ  ಬೇಧದ ಕೊಂಕಿ  ಹುಡುಕುತ ಹೊರಟರೆ ನಾವು ಎಲ್ಲರೂ ಒಂದೇ ಬಾಲವಿರುವ ಮಂಗನೆ ನಮ್ಮಯ  ತಾಯಿ ತಂದೆ *******ರಚನೆ ******* ಡಾ. ಚಂದ್ರಶೇಖರ. ಸಿ. ಹೆಚ್

ಸಾವು

Image
ಸಾವಿನ ಮನೆಯಲಿ ಮೌನದ ಸೂತಕ ಹುಡುಕುತ ಹೊರಟರೆ ನೋವಿನ ಜಾತಕ ಹೆಣದ ಮೈತುಂಬಾ ಹೂವಿನ ರಾಶಿ ರಾಶಿ ದೇವರು ಕರೆದಂತೆ ಸ್ವರ್ಗಕೆ ಕೈ ಬೀಸಿ ಬೀಸಿ ಮನೆಯ ತುಂಬೆಲ್ಲಾ ಗೋಳಿನ ಛಾಯೆ ಮನದ ತುಂಬಾ ಮಸಣದ ಮಾಯೆ ಕಣ್ಣ ಹನಿಯೊಂದು ಹೇಳಿದೆ ಕಥೆ ನೋವುಂಡ ಭಾವನೆಗಳ ವ್ಯಥೆ ಹೃದಯ ಕೂಗಿದೆ ಒಮ್ಮೆ ಹಾಗೆ ತಾಳಲಾಗದೆ ನೋವಿನ ಬೇಗೆ ಯಾರು ಕಾಣದ ಲೋಕಕೆ ನಡಿಗೆ ಬಿಚ್ಚಿಟ್ಟು ತೊಟ್ಟ ಊಡುಗೆ ನಾನು ನನ್ನವರ ಬಿಟ್ಟು ದೇಹವಾಯಿತು ಕರಕಲು ಸುಟ್ಟು ಹಚ್ಚಿಟ್ಟ ಹಣತೆ ತೊಳೆದಿತೆ ಕತ್ತಲೆ ಸುಟ್ಟಿತೆ ನೋವ ಮೂಡಿದ ಬೆಳಕಲೇ ದೀಪದ ಎಣ್ಣೆ ಅದ್ದಿದಾ ಬತ್ತಿ  ಉರಿಯಿತು ಬೆಳಕನ್ನು ಬಿತ್ತಿ ಮುಗಿಯಿತು ಜೀವನದ ಜಾತ್ರೆ ಹೊರಟಿತು ಜೀವ ಯಾತ್ರೆ ಕಣ್ಣೀರ ಹನಿಗೆ ಸಿಕ್ಕಿತೆ ಮುಕ್ತಿ ಕೊಡಲಿ ಬಾಳಲ್ಲಿ ಬದುಕುವ ಶಕ್ತಿ *********ರಚನೆ ******** ಡಾ. ಚಂದ್ರಶೇಖರ. ಸಿ. ಹೆಚ್

ದೇಶ ನಮ್ಮದು

Image
ದೇಶ ನಮ್ಮದು ದೇಶ ನಮ್ಮದು  ಆಡುವ ಭಾಷೆಗಳು ನೂರು ನಮ್ಮದು  ಹರಿವ ನದಿಗಳು ತವರು ನೆಲ ನಮ್ಮದು ಜಾತಿಗಳ ಜೊತೆಯಲಿ ಬಾಳುವ ದೇಶ ನಮ್ಮದು ಧರ್ಮಗಳು ಯಾವುದೇ ಇರಲಿ  ಸಹಬಾಳ್ವೆಯ ದೇಶ ನಮ್ಮದು  ಮೇಲು ಕೀಳು ಮರೆತು ನಡೆವ ದೇಶ ನಮ್ಮದು ಹಸಿರು ಪರ್ವತಗಳ ಗೂಡು ನಮ್ಮದು ವನ್ಯ ಪ್ರಾಣಿಗಳ ಬಿಡು ನಮ್ಮದು ವಿವಿಧತೆಯಲಿ ಏಕತೆ ಸಾರುವ ನಾಡು ನಮ್ಮದು ಬ್ರಿಟಿಷರು ನಮ್ಮನ್ನು ಆಳಿದರು ದೃತಿ ಗೆಡದೆ ಸ್ವತಂತ್ರ ಪಡೆದ ನಾಡು ನಮ್ಮದು ಇತಿಹಾಸದಿ ಮರುಗಿದರು ಬೇರುಗ ನೀಡೋ ಶಿಲ್ಪಾ ಕಲೆಯ ತವರು ನಮ್ಮದು ತಪವ ಮಾಡಿ ವರವ ಪಡೆದ ಋಷಿಗಳ ಬಿಡು ನಮ್ಮದು ಧ್ಯಾನದಿಂದ ಜಗದ ಮನಸ್ಸು ಗೆದ್ದ ವಿವೇಕಾನಂದ ಹುಟ್ಟಿದ ದೇಶ ನಮ್ಮದು ಶಾಂತಿ ಮಂತ್ರ ಜಪಿಸಿದ. ಮಹಾತ್ಮ ಗಾಂಧಿ  ಹುಟ್ಟಿದ ನೆಲ ನಮ್ಮದು  ಹುಡುಗೇ ತೋಡುಗೆ ಸೊಬಗು ವೈವಿದ್ಯಮಯ ನೆಲ ನಮ್ಮದು ದೇಶ ದೇಶಗಳು ಬಡಿದಾಡು ತಿರಲು  ಶಾಂತಸಾರುವ ದೇಶ ನಮ್ಮದು ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ಕೂಡಿದ ಪ್ರಜಾಪ್ರಭುತ್ವ ಬಿಡು ನಮ್ಮದು ದೈವ ನೂರು ಬೇಡುವ ಭಕ್ತರು ನೂರು ದೈವ ಸಂಬೂತ ದೇಶ ನಮ್ಮದು ಜನಸಂಖ್ಯೆಯಲಿ ನೂರು ಕೋಟಿ ಇದ್ದರು  ಬೆಳೆಯುತ್ತಿರುವ ದೇಶ ನಮ್ಮದು ನಮ್ಮದು ನಮ್ಮದು ಈ ದೇಶ ನಮ್ಮದು. **********ರಚನೆ ********** ಡಾ. ಚಂದ್ರಶೇಖರ. ಸಿ. ಹೆಚ್

ಹುಚ್ಚು ಪ್ರೇಮಿ

Image
  ಓಡುತಿರುವ ಮನಸ್ಸನು ನಾ ಹೇಗೆ ಹಿಡಿಯಲಿ ಕಾಡುತ್ತಿರುವ ಕನಸ್ಸನ್ನು ನಾ ಹೇಗೆ ಪಡೆಯಲಿ ಆಸೆಗಳಿಗೆ ರೆಕ್ಕೆ ಬಂದಿದೆ ಹಾರಲಾರದೇ ಪುಕ್ಕ ಮುರಿದಿದೆ ಕುಣಿದು ನಲಿವ ವಯಸಲಿ  ಮಂಕು ಕವಿದಿದೆ ಮಾತು ಏಕೊ ಸುಮ್ಮನೆ ಮೂಕವಾಗಿದೆ ಕಣ್ಣ ಅಂಚಿನಲ್ಲಿ ಕಣ್ಣೀರು ಅವಿತಿದೆ ದುಃಖ ದುಮ್ಮಿಕಿದೆ ನೋವು ತಾಳಲಾರದೆ ದೇಹದಲ್ಲಿ ನಡುಕ ಕಾಡಿದೆ  ನಡೆವ ನಡಿಗೆ ಏಕೊ ದಾರಿ ತಪ್ಪಿದೆ ಏಕೆ ಹೀಗೆ ಜೀವ ಬೆದರಿದೆ ಒಂದೂ ಕೂಡ ನನಗೆ ತಿಳಿಯದಾಗಿದೆ ನನ್ನ ಬಿಟ್ಟು ನೀನು ದೂರ ಏಕೆ ಓಡಿದೆ ಪ್ರೀತಿ ನೀಡು ನೀನು ನೀನೇ ನನ್ನ ಭೂಮಿ ಭಾನು ಎಂದು  ಹೃದಯ ನನ್ನವಳ ಕೇಳಿದೆ ಬದುಕಲ್ಲಿ ನೀನು ಬಂದೆ ನೂರೆಂಟು ಭರವಸೆಗಳ ತಂದೆ ಬಾಳ ಬಂಡಿ ಸಾಗುತಿರಲು ನೀನು ಇರದೇ ಗಾಡಿ ಉರುಳಿದೆ ಪಯಣದಲಿ ನಾನು ಒಂಟಿ ನೆನಪುಗಳ ನೋವೇ ಜಂಟಿ ಸಾಗುತಿದೆ ಜೀವನ ಕುಂಟಿ ಬಾರೆ ನನ್ನ ಚೆಲುವೆ ಕನಸ್ಸುಗಳ ಒಲವೇ ಮನಸ್ಸು ಮಿಡಿಯುತ್ತಿರುವ ಪ್ರೀತಿ ಮಾಂತ್ರಿಕೆ ನೀನು ನನ್ನ ಗೆದ್ದ ಶೀಲಾ ಬಾಲಿಕೆ ನೀನೇ ನನ್ನ ಅಚ್ಚು ಮೆಚ್ಚು ನೀನು ಕಾಣದೆ ಬಿಡದಿ ಹುಚ್ಚು ಕಾಲಿ ಹಾಳೆಯು ನಾನು ಬರೆಯು ಬಾರೆ ನೀನೆ ನನ್ನವನು ನಾನು ನಿನ್ನಲಿ ಸೆರೆಯಾದೆ ನಿನ್ನಗುಂಗಲಿ ನಶೆಯಾದೆ ನನ್ನ ಗುಂಡಿಗೆ ನೀ ಬಲಿಯಾದೆ ಉಸಿರೇ ಇಲ್ಲದ ಹೆಸರಾದೆ ಘೋರಿಯೆ ಇಲ್ಲದ ಶವವಾದೆ *******ರಚನೆ ******* ಡಾ. ಚಂದ್ರಶೇಖರ. ಸಿ. ಹೆಚ್