7. ಶಿಕ್ಷಣದಿ ನಮ್ಮಯ ಬೆಳವಣಿಗೆ




ವಿದ್ಯಾಭ್ಯಾಸವು ಯುವ ವಿದ್ಯಾರ್ಥಿಗಳನ್ನು ನಮ್ಮ ಮುಂದಿನ ಭವಿಷ್ಯದೆಡೆಗೆ ತರಬೇತಿಗೊಳಿಸುವ ವೇದಿಕೆಯಾಗಿದೆ. ಇದು ನಮಗೆ ಜ್ಞಾನ ಮತ್ತು ಕೌಶಲ್ಯಗಳನ್ನು ನೀಡಿ ನಾವು ಉದ್ಯೋಗವಂತರಾಗಿ ನಮ್ಮ ಜೀವನ ಸಾಗಿಸಲು ಸಹಾಯ ಮಾಡುತ್ತದೆ. ವಿಜ್ಞಾನ ಮತ್ತು ತಂತ್ರಜ್ಞಾನವು ನಮ್ಮ ದೇಶದ ಆರ್ಥಿಕ ಬೆಳವಣಿಗೆಗೆ ಸಹಾಯಕಾರಿಯಾಗಿದೆ. ಭಾರತದ ವಿದ್ಯಾಭ್ಯಾಸವು ಪ್ರಪಂಚದ ವಿದ್ಯಾಭ್ಯಾಸದ ವ್ಯವಸ್ಥೆಗಳಲ್ಲಿಯೇ ಒಂದು ಉತ್ತಮ ಶಿಕ್ಷಣ ವ್ಯವಸ್ಥೆ. ನಾವು ಈಗ ಪ್ರಾಚೀನ ಶಿಕ್ಷಣವನ್ನು ತಿಳಿಯೋಣ, ಪ್ರಾಚೀನ ಶಿಕ್ಷಣವು ಎರಡು ಶಿಕ್ಷಣ ವ್ಯವಸ್ಥೆಯಾಗಿ ಅಭಿವೃದ್ಧಿ ಹೊಂದಿತ್ತು ಒಂದು ವೇದಿಕ ಮತ್ತೊಂದು ಬುದ್ಧಿಸ್ಟ್,  ವೇದಿಕ ಸಂಸ್ಕೃತ ಭಾಷೆಯಲ್ಲಿದೆ ಮತ್ತು ಬುದ್ಧಿಸ್ಟ್ ಪಾಳಿ ಭಾಷೆಯಲ್ಲಿದೆ. ಪ್ರಾಚೀನ ಶಿಕ್ಷಣವು ನಮಗೆ ನಮ್ರತೆ, ಸತ್ಯನಿಷ್ಠೆ, ಶಿಸ್ತು,  ಸ್ವಾವಲಂಬನೆ ಕಲಿಸುವುದು. ಶಿಕ್ಷಣವು ಆಶ್ರಮ ಗುರುಕುಲ ದೇವಸ್ಥಾನ ಮನೆ ಹಾಗೂ ಪೂಜಾರಿಗಳು ದೇವಸ್ಥಾನದಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ಕಲಿಸುತ್ತಿದ್ದರು. ಶಿಕ್ಷಣದ ಮೂಲ ಉದ್ದೇಶ ಸಾಂಸ್ಕೃತಿಕ ಬೆಳವಣಿಗೆ ವ್ಯಕ್ತಿತ್ವ ವಿಕಾಸನ ಮುಂತಾದ ಆದರ್ಶಗಳನ್ನು ಕಲಿಸುತ್ತಿದ್ದವು.

 ಮಧ್ಯಕಾಲೀನ ಶಿಕ್ಷಣ, ಈ ಕಾಲಘಟ್ಟದಲ್ಲಿ ಅಂದರೆ 18ನೇ ಶತಮಾನದಲ್ಲಿ ಮುಸ್ಲಿಮರು ನಮ್ಮ ದೇಶವನ್ನು ಆಳಿ, ನಮ್ಮ ದೇಶದಲ್ಲಿರುವ ಪ್ರಾಚೀನ ಶಿಕ್ಷಣವನ್ನು ತೆಗೆದು ನೂತನ ಶಿಕ್ಷಣವನ್ನು ಜಾರಿಗೆ ತಂದರು. ಈ ಶಿಕ್ಷಣದ ಉದ್ದೇಶ ಜ್ಞಾನ ಮತ್ತು ಇಸ್ಲಾಂ ಧರ್ಮವನ್ನು ಸಾರುವುದು. ಶಿಕ್ಷಣಕ್ಕೆ ರಾಜರುಗಳು ಭೂಮಿ ಒಡೆಯರು ಮಾಡಿದ ದಾನ ಧರ್ಮದಿಂದ ಶೈಕ್ಷಣಿಕ ಸಂಸ್ಥೆಗಳು ನಡೆಯುತ್ತಿದ್ದು. ಈ ಶಿಕ್ಷಣದಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಮಧ್ಯೆ ಉತ್ತಮ ಬಾಂಧವ್ಯಕ್ಕೆ ಕಾರಣವಾಯಿತು.

ಆಧುನಿಕ ವಿದ್ಯಾಭ್ಯಾಸ. ನಮ್ಮ ದೇಶವನ್ನು ಬ್ರಿಟಿಷರ ಅಕ್ರಮಿಸಿ, 1830 ರಲ್ಲಿ ಮೆಕಾಲೆ ಇಂಗ್ಲಿಷ್ ಶಿಕ್ಷಣವನ್ನು ಜಾರಿಗೊಳಿಸಿದನು. ಇದು ಕೂಡ ಕ್ರೈಸ್ತ ಧರ್ಮವನ್ನು ಸಾರುವುದು ಉದ್ದೇಶವಾಗಿತ್ತು. ಆಧುನಿಕ ಯುಗ 20ನೇ ಶತಮಾನದಲ್ಲಿ ವಿಜ್ಞಾನ ತಂತ್ರಜ್ಞಾನ, ಸಂಶೋಧನೆ ಸಹಾಯದಿಂದ ದಿನದಿಂದ ದಿನಕ್ಕೆ ಕೈಗಾರಿಕಾ ವಲಯ ಸ್ಥಾಪನೆಯಾಗಿ ಶಿಕ್ಷಣದ ಗುಣಮಟ್ಟ ಹಾಗೂ ನಮ್ಮ ಸಾಮಾಜಿಕ ಬದಲಾವಣೆಗೆ ನಾಂದಿ ಹಾಡಿತು. ಶಿಕ್ಷಕ ಹಾಗೂ ವಿದ್ಯಾರ್ಥಿಗಳ ಸಂಬಂಧ ಉತ್ತಮ ರೀತಿಯಲ್ಲೆ ಸಾಗಿತ್ತು ತಂತ್ರಜ್ಞಾನ ಅಭಿವೃದ್ಧಿಯಿಂದ ಪ್ರೈಮರಿ ವಿದ್ಯಾಭ್ಯಾಸ ಒಂದರಿಂದ ಹತ್ತನೇ ತರಗತಿ, ಕಾಲೇಜು ವಿದ್ಯಾಭ್ಯಾಸ 11 ರಿಂದ 12ನೇ ತರಗತಿ ಹಾಗೂ ಪದವಿ ಶಿಕ್ಷಣದಲ್ಲಿ ಕಂಪ್ಯೂಟರ್ ಸಿವಿಲ್ ಎಲೆಕ್ಟ್ರಿಕಲ್ ಮತ್ತು ಸಮಾಜ ಭೂಗೋಳಶಾಸ್ತ್ರ ವಿಜ್ಞಾನ ಗಣಿತ ಅರ್ಥಶಾಸ್ತ್ರ ಹಿಂದಿ ಹೀಗೆ ಸಾಕಷ್ಟು ಶೈಕ್ಷಣಿಕ ಕ್ಷೇತ್ರದಲ್ಲಿ ಬದಲಾವಣೆ ಆಯ್ತು.

ಶಿಕ್ಷಕರು ವಿದ್ಯಾರ್ಥಿಗಳಿಗೆ ಆನ್ಲೈನ್ ತರಗತಿ ಬೋಧಿಸುತ್ತಾ ಅವರ ವಿದ್ಯಾಭ್ಯಾಸದ ಪ್ರಶ್ನೆಗಳನ್ನು ಚರ್ಚೆ ಮಾಡುತ್ತಾ ಪರಿಹಾರ ನೀಡುವುದು ಮತ್ತು ನೋಟ್ಸ್ ಗಳನ್ನು ನೀಡುತ್ತಿದ್ದರು. ಪರೀಕ್ಷೆಗಳು ಮತ್ತು ಪ್ರಾಯೋಗಿಕ ಜ್ಞಾನಕ್ಕಾಗಿ ಪ್ರಾಯೋಗಿಕ ಪರೀಕ್ಷೆಗಳು ನಡೆಯುತ್ತಿದ್ದವು. ಶಿಕ್ಷಣವು ಶಾಲೆ, ಕಾಲೇಜು ವಿಶ್ವವಿದ್ಯಾಲಯಗಳಲ್ಲಿ ಹಾಗೂ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ . ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಇವುಗಳಲ್ಲಿ ಬೋಧಿಸಲು ಶುರುವಾಯಿತು. ಹೀಗೆ ತಂತ್ರಜ್ಞಾನ ಅಭಿವೃದಿಯಿಂದ ಭಾರತದ ಶಿಕ್ಷಣ ವ್ಯವಸ್ಥೆ ಹಾಗೂ ಆರ್ಥಿಕ ವ್ಯವಸ್ಥೆ ಸುಧಾರಣೆ ಕಂಡಿತು. ಶಿಕ್ಷಣದಲ್ಲಿ ಇಂಗ್ಲೀಷ ಅಳವಡಿಕೆ ಸ್ವಾತಂತ್ರ್ಯದ ನಂತರ  ನಮ್ಮನ್ನು ಹಲವು ವಿದೇಶಗಳಿಗೆ ಪರಿಚಯಿಸಿತು, ಹೀಗೆ ನಮ್ಮ ಶಿಕ್ಷಣವು ಅಭಿವೃದ್ಧಿ ಪಥದಲ್ಲಿ  ನಮ್ಮನ್ನು ಕೊಂಡಯುತ್ತಿದೆ. 2020ನೇ ಇಸವಿಯಲ್ಲಿ ಭಾರತದಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಭಾರತ ಸರ್ಕಾರ ಜಾರಿಗೆ ತಂದಿದೆ. ಈ ಶಿಕ್ಷಣ ವ್ಯವಸ್ಥೆಯಿಂದ ಭಾರತವು ಜಾಗತಿಕ ಮಟ್ಟದಲ್ಲಿ ಶಿಕ್ಷಣದ ಗುರುವಾಗುವ ನಿಟ್ಟಿನಲ್ಲಿ ನಡೆಯುತ್ತಿದೆ. ಹಳೆಯ ಶಿಕ್ಷಣ ಪದ್ದತಿಗೆ ಹೋಲಿಸಿದರೆ, ಆಧುನಿಕ ಶಿಕ್ಷಣವು ದೇಶದ ಎಲ್ಲರನ್ನು ಸಾಕ್ಷರಸ್ಥರನ್ನಾಗಿ ಮಾಡಲು ಸಹಾಯಕಾರಿಯಾಗಿದೆ ಹಾಗೂ ಮಹಿಳೆಯರು ಸ್ವಾವಲಂಬಿಯಾಗಿ ಬದುಕಲು ಸಹಾಯ ಮಾಡಿದೆ ಮತ್ತು ನಮ್ಮನ್ನು ಎಲ್ಲಾ ಕ್ಷೇತ್ರಗಳಲ್ಲೂ ಆರ್ಥಿಕವಾಗಿ ಮುಂದುವರೆಯಲು ಸಹಾಯವಾಗಿದೆ.

 ಆಧುನಿಕ ಶಿಕ್ಷಣದಲ್ಲಿ ಬೇರೆ ಬೇರೆ ವಿಷಯಗಳಲ್ಲಿ ಶಿಕ್ಷಣ ಪಡೆಯಲು ನಮಗೆ ಸಹಾಯ ಮಾಡಿದೆ ಹಾಗೂ ತಂತ್ರಜ್ಞಾನ ಶಿಕ್ಷಣಗಳ ಮತ್ತು ಆಡಳಿತ ವ್ಯವಸ್ಥೆಯ ಅಭಿವೃದ್ಧಿಗೆ ನಾಂದಿಯಾಗಿದೆ. ಆಧುನಿಕ ಶಿಕ್ಷಣದಲ್ಲಿ ಶಿಕ್ಷಕ ಮತ್ತು ವಿದ್ಯಾರ್ಥಿಗಳ ಮಧ್ಯೆ ಉತ್ತಮ ಸಂಬಂಧದ ಕೊರತೆ, ಶಿಕ್ಷಕ ತನ್ನ ವೈಯಕ್ತಿಕ ಜೀವನ ಮತ್ತು ಶೈಕ್ಷಣಿಕ ಜೀವನವನ್ನು ವೃದ್ಧಿ ಮಾಡಿಕೊಳ್ಳಲು ವಿಫಲನಾಗುತ್ತಿದ್ದಾನೆ.  ತಂತ್ರಜ್ಞಾನದ ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿಯ ಶಿಕ್ಷಣದ ಗುಣಮಟ್ಟ ಕುಸಿಯುತ್ತಿರುವುದು ಕಂಡು ಬರುತ್ತದೆ. ನಾವು ಇದನ್ನು ಕರೋನ ಸಮಯದಲ್ಲಿ ನೋಡಿರುತ್ತೇವೆ. ಹೀಗೆ ನಮ್ಮ ಭಾರತದ ಶಿಕ್ಷಣ ವ್ಯವಸ್ಥೆ ಪ್ರಗತಿಯನ್ನು ಸಾಧಿಸುವುದರ ಜೊತೆ ತನ್ನದೇ ಆದ ನ್ಯೂನ್ಯತೆಗಳನ್ನು ಒಳಗೊಂಡು ಸಾಗುತ್ತಿದೆ.


 ನಮ್ಮ ಶಿಕ್ಷಣವು ಶುರು ಗುರುಕುಲದಲ್ಲಿ

ನಾವು ಹುಟ್ಟಿ ಮಾನವರಾದೆವು ಮನುಕುಲದಲ್ಲಿ

 ಶಿಕ್ಷಣ ವ್ಯವಸ್ಥೆ ಬದಲಾದವು ಶತಮಾನದಲ್ಲಿ

ಮುಸ್ಲಿಮರು ಹೊಸ ಶಿಕ್ಷಣ ತಂದು 

 ಬ್ರಿಟಿಷರ ಇಂಗ್ಲಿಷ್ ಶಿಕ್ಷಣ ಬಂದು

 ಭಾರತದ ಶಿಕ್ಷಣ ವ್ಯವಸ್ಥೆಯನ್ನು ಕೊಂದು

 ನಮ್ಮನ್ನು ಆಳಿ ದೋಚಿ ಹೊರಟರು ಅಂದು

ನಾವು  ಸಾರ ಹೊರಟ್ಟಿದ್ದೇವೆ ಭಾರತೀಯರು ತಂತ್ರಜ್ಞಾನದಲ್ಲಿ ಮುಂದು. 


ಭಾರತದ ಶಿಕ್ಷಣವು ಕಡಿಮೆ ಅಂಕಗಳ ಶ್ರೇಣಿಕರಣದಿಂದ ಕೂಡಿರುತ್ತದೆ. ಅದು ವಿದ್ಯಾರ್ಥಿಯ ಸರ್ವತೋಮುಖ ಅಭಿವೃದ್ಧಿಯನ್ನು ಗುರುತಿಸಲು ಅಸಮರ್ಥವಾಗಿದೆ. ನಾವು ಇಲ್ಲಿ  ಸಿದ್ಧಾಂತಕವಾಗಿ ಕಲಿಯುತ್ತೇವೆ, ಪ್ರಾಯೋಗಿಕವಾಗಿ ಕಡಿಮೆ ತಿಳಿಯುತ್ತೇವೆ, ವಿದ್ಯಾರ್ಥಿಗಳು ವಿಷಯವನ್ನು ಅರ್ಥ ಮಾಡಿಕೊಂಡು ಓದುವುದಕ್ಕಿಂತ ಬಾಯಿಪಾಠ ಮಾಡುತ್ತಾರೆ ಯಾಕೆಂದರೆ ತಮ್ಮ ಮಾತನಾಡುವ ಭಾಷೆ ಮತ್ತು ವಿದ್ಯಾಭ್ಯಾಸದ ಭಾಷೆ ಬೇರೆ ಇರುವುದರಿಂದ ಶಿಕ್ಷಕರ ಗುಣಮಟ್ಟ ಕಡಿಮೆ ಇರುವುದು ಮತ್ತು ಅವರು ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಚಿಂತೆ ಮಾಡದೆ ಇರುವುದು, ತಮ್ಮ ತಿಂಗಳ ಸಂಬಳದ ಶಿಕ್ಷಕರಾಗಿದ್ದಾರೆ. ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಏರಿಕೆ ಇರುವುದರಿಂದ ಎಲ್ಲಾ ವಿದ್ಯಾರ್ಥಿಗಳ ಬೆಳವಣಿಗೆಗೆ ಗಮನಹರಿಸುವುದು ಶಿಕ್ಷಕರಿಗೆ ಕಷ್ಟ ಹಾಗೂ ಖಾಸಗಿ ಶಾಲೆಗಳು ವಿದ್ಯಾರ್ಥಿಗಳ ತಂದೆ ತಾಯಿಯಿಂದ ಮಕ್ಕಳ ಸರ್ವತೋಮುಖ ಅಭಿವೃದ್ಧಿ ಹೆಸರಿನಲ್ಲಿ ಹಣದ ಸುಲಿಗೆ ಮಾಡುತ್ತಿವೆ. 

ಈಗ ನೀವೇ ಹೇಳಿ ಆಧುನಿಕ  ಶಿಕ್ಷಣ ವ್ಯವಸ್ಥೆ ನಮ್ಮ ಏಳಿಗೆಗೆ ಪೂರಕವೆ??????

ಆಧುನಿಕ ಶಿಕ್ಷಣದಲ್ಲಿ ಎಷ್ಟೊಂದು ನ್ಯೂನತೆಗಳಿದ್ದರೂ ತಂತ್ರಜ್ಞಾನದ ವ್ಯವಸ್ಥೆಯಿಂದ ಭಾರತದ ಶಿಕ್ಷಣವ್ಯವಸ್ಥೆ ಅಭಿವೃದ್ಧಿಪಥದಲ್ಲಿ ಸಾಗುತ್ತಿದ್ದೇ.

Comments

Popular posts from this blog

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ

ಚುಟುಕು ಕವನ-35