5. ಬಾಲ್ಯದಿ ದಡ್ಡ ಬುದ್ದಿವಂತನಾದರೆ



ಈ ಆಧುನಿಕ ಜಗದಲ್ಲಿ ನಾವು ತಂತ್ರಜ್ಞಾನವನ್ನು ಅವಲಂಭಿಸಿ ಓಡುತ್ತಿದ್ದೇವೆ ನಮಗೆ ಕೆಲಸ ಕೊಡುವ ಸಂಸ್ಥೆಗಳು ಹಾಗೂ ಕಂಪನಿಗಳು ಕೂಡ  ನಮ್ಮನ್ನು ಅಳೇದು ತೂಗುವುದು ನಾವು ಶಾಲೆಯಲ್ಲಿ ಪಡೆದ ಅಂಕಗಳಿಂದ. ಹೀಗೆ ನಮ್ಮ ಭವಿಷ್ಯವನ್ನು ಅಂಕಗಳಿಂದ ನಿರ್ಧರಿಸುವ ಕುತಂತ್ರಗಳು ನಡೆಯುತ್ತವೆ. ಇಂತಹ ಎಷ್ಟೋ ವಿಚಾರಗಳು ನಾವು ಕೇಳಿ ತಿಳಿದಿರುತ್ತೇವೆ ಹಾಗೆಯೇ ನಮ್ಮ ಅನುಭವಕ್ಕೆ ಕೂಡ ಬಂದಿರುತ್ತದೆ. ಶಾಲೆಯಲ್ಲಿ ನಾವು ಪಡೆದ ಅಂಕಗಳಿಂದ ಮಾತ್ರವೆ ನಮ್ಮ ಜೀವನ ಕಂಡಿತಾ ರೂಪುಗೊಳ್ಳುವುದಿಲ್ಲ. ಯಾವುದೆ ವಿದ್ಯಾರ್ಥಿಯಾಗಲಿ ತಾವು ಪಡೆದ ಅಂಕಗಳು ಕಡಿಮೆ ಇದೆ ಅಂದರೆ ನಾನು ಜಸ್ಟ್ ಪಾಸ್  ಅಥವಾ ಫೇಲ್ ಆಗಿದ್ದೇನಹಾಗಾಗಿ ಮುಂದೆ ನಮಗೆ ಒಳ್ಳೆಯ ಭವಿಷ್ಯವಿಲ್ಲ ಎಂದು ತಪ್ಪು ತಿಳಿದು ಆತ್ಮಹತ್ಯೆಯಂತಹ  ದುಡುಕು ನಿರ್ಧಾರವನ್ನು ತೆಗೆದುಕೊಂಡು ತಮ್ಮ ತಂದೆ ತಾಯಿಗಳಿಗೆ ನೋವನ್ನು ಉಂಟು ಮಾಡುವುದು ತಪ್ಪು. ಬಾಲ್ಯದಲ್ಲಿ ಎಷ್ಟೋ ಜನ ವಿದ್ಯಾಭ್ಯಾಸ ಮಾಡಲು ಸಾಧ್ಯವಾಗದೆ ಇರುವವರು ನಮ್ಮ ದೇಶ ಗೌರವಿಸುವಂತಹ ಸಾಧನೆ ಮಾಡಿದ್ದಾರೆ ಹಾಗೆ ಉದಾಹರಣೆ ಹೇಳುವುದದಾದರೆ ನಮ್ಮ ಕನ್ನಡ ಸಿನೆಮಾ ಜಗತ್ತಿನ ದಂತ ಕಥೇ ವರನಟ ಡಾ. ರಾಜಕುಮಾರ ಇವರ ವಿದ್ಯಾಭ್ಯಾಸ ನಾಲ್ಕನೇ ತರಗತಿಗೆ ಮೋಟಕುಗೊಂಡಿತು ಇವರ ತಂದೆ ಪ್ರಸಿದ್ಧ ಗುಬ್ಬಿ ನಾಟಕ ಕಂಪನಿ ಕಲಾವಿದರಾಗಿದ್ದರು ತಮ್ಮ ವಿದ್ಯಾಭ್ಯಾಸ ನಿಂತ ನಂತರ ತಂದೆಯನ್ನು ಹಿಂಬಾಲಿಸಿ ನಾಟಕಗಳಲ್ಲಿ ಸಣ್ಣ ಪಾತ್ರವಹಿಸುತ್ತ ಬೆಳೆದ ಇವರು ಭಾರತ ದೇಶದ ಹೆಸರಾಂತ ನಟರುಗಳಲ್ಲಿ ಒಬ್ಬರು. ಇವರಿಗೆ ಸಿನಿಮಾ ಜಗತ್ತಿನ ಅತ್ಯುನ್ನತ ಪ್ರಶಸ್ತಿ ಧಾಧಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಹಾಗೂ ಕರ್ನಾಟಕ ರಾಜ್ಯ ಸರ್ಕಾರದಿಂದ ಕರ್ನಾಟಕ ರತ್ನ ಪ್ರಶಸ್ತಿ ಮತ್ತು ರಾಷ್ಟ್ರೀಯ ಪ್ರಶಸ್ತಿಗಳು ಇವರಿಗೆ ಲಭಿಸಿವೆ ಹಾಗೂ ಮೈಸೂರು ವಿಶ್ವವಿದ್ಯಾನಿಲಯವು ಗೌರವ ಡಾಕ್ಟರೇಟ್ಸ  ಕೊಟ್ಟು ಸನ್ಮಾನಿಸಿದೆ.

ಹಾಗೆಯೇ ಕರ್ನಾಟಕದವರೇ ಆದ ಐಪಿಎಸ್ ಅಧಿಕಾರಿ ರವಿ ಚೆನ್ನಣ್ಣನವರು ತಮ್ಮ ವಿದ್ಯಾಭ್ಯಾಸದಲ್ಲಿ ಅಷ್ಟೆನು ಉತ್ತಮ ಅಂಕಗಳನ್ನು ಪಡೆಯದೇ ಇದ್ದರು ತದ ನಂತರದ ದಿನಗಳಲ್ಲಿ ತಮ್ಮ ಬದುಕಿನ ಕಷ್ಟಗಳಲ್ಲಿ ಬಳಲಿ ತಮ್ಮ ಶ್ರಮ, ಗುರಿ ಸಾದಿಸುವ ಹಠದಿಂದ ಓದಿ ಇವರು 2008 ನೇ ಬ್ಯಾಚನ ಐಪಿಎಸ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಹಾಗೆಯೇ ಚೀನಾ ದೇಶದ ಅಲಿಭಾಬ ಕಂಪನಿಯ ಸ್ಥಾಪಕ ಜಾಕ್ ಮಾ ಇವರು ಸಾಮಾನ್ಯ ನಾಗಿ  ಬೆಳೆದು ಇಂಗ್ಲಿಷ್ ಭಾಷೆ ಮಾತನಾಡಲು ಕಲಿಯುವ ಇಚ್ಛೆಯಿಂದ ಯಾತ್ರಿಗಳಿಗೆ ಯಾತ್ರ ಮಾರ್ಗದರ್ಶನ ಮಾಡುತ್ತ ಹಾಗೂ ಗಣಿತ ವಿಷಯದಲ್ಲಿ ಅಲವಾರು ಬಾರಿ ಅನುತ್ತಿರ್ಣನಾದರೂ ತನ್ನ ಶ್ರದ್ದೆ  ಅಚಲ ವಿಶ್ವಾಸ  ಗುರಿಯೆಡೆಗಿನ ಶ್ರಮದಿಂದ ಜಗತ್ತಿನ ದೈತ್ಯ ಕಂಪನಿ ಅಲಿಬಾಬವನ್ನು ಹುಟ್ಟು ಹಾಕಿ ಸಾವಿರಾರು ಕೋಟಿಯ ಒಡೆಯರಾಗಿದ್ದಾರೆ. ಈಗೆ ಹುಡುಕುತ್ತ ಹೊರಟರೆ ಸಾವಿರಾರು ಮಂದಿ ಸಾಧಕರು ಹಲವಾರು ಕ್ಷೇತ್ರಗಳಲ್ಲಿ ತಮ್ಮ ಶ್ರಮದ ದುಡಿಮೆಯಿಂದ ಬದುಕಿನೆಡೆಗೆ ಇರುವ ಆತ್ಮವಿಶ್ವಾಸದಿಂದ ಧೈರ್ಯಗೇಡದೆ ಕಷ್ಟಗಳು ಹಾಗೂ ಸೋಲನ್ನು ಎದುರಿಸಿ ಜೀವನವನ್ನು ರೂಪಿಸಿಕೊಂಡಿರುತ್ತಾರೆ.
ಅಂಕಗಳಿಂದ ನಮ್ಮ ಜೀವನವನ್ನು ಅಳೇದು ತೂಗುವ ಈ ಜಾಗತಿಕ ಪ್ರಪಂಚದಲ್ಲಿ ತಮ್ಮ ಕಲೆ ಹಾಗೂ ಮಾಡುವ ಕೆಲಸದ ಶ್ರಮದಿಂದ ಹಲವಾರು ಸಾಧಕರು ದೇಶವನ್ನು ತಮ್ಮತ್ತ ತಿರುಗಿ ನೋಡುವಂತೆ ಮಾಡಿದ್ದಾರೆ.
ಪ್ರತಿಯೊಬ್ಬ ವಿದ್ಯಾರ್ಥಿಗೂ ಉತ್ತಮ ಅಂಕ ಪಡೆಯುವ ಹಂಬಲ ಇರುತ್ತದೆ ಆದರೇ ಅವನ ದೈಹಿಕವಾಗಿ ಆಗುವ ಬದಲಾವಣೆ ಮತ್ತು ಪರಿಸರ  ಮುಂತಾದ ತೊಂದರೆಗಳ ಕಷ್ಟದಿಂದ ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಯಶಸ್ಸು ಸಿಕ್ಕಿರುವುದಿಲ್ಲ ಇಂತಹ ವಿದ್ಯಾರ್ಥಿಗಳು ನನಗೆ ಶಾಲೆಯ ಅಧ್ಯಯನ ವಿಷಯಗಳಲ್ಲಿ ಕಡಿಮೆ ಅಂಕ ಬಂದಿದೆ ಎಂದು  ಚಿಂತಿಸುತ್ತ ಬದುಕನ್ನು ದುಸ್ತರವಾಗಿಸಿಕೊಳ್ಳುವ ಪ್ರವೃತ್ತಿಯನ್ನು ಯುವ ವಿದ್ಯಾರ್ಥಿಗಳು ಬಿಟ್ಟು. ತಮ್ಮ ಜೀವನದಲ್ಲಿ ಒಂದೂ ಗುರಿಯನ್ನು ಹೊಂದಿ ಸಾಧನೆ ಕಡೆಗೆ ಗಮನ ಕೊಟ್ಟರೆ  ಶಾಲೆಯ ಅಂಕಪಟ್ಟಿಯಲ್ಲಿ ಕಡಿಮೆ ಅಂಕಪಡೆದ ದಡ್ಡನಾದರೂ ತನ್ನ ಬದುಕಿನಲ್ಲಿ ಉತ್ತಮ ಜೀವನವನ್ನು ಸಾಗಿಸಬಹುದು ಅದಕ್ಕೆ ಬೇಕಾಗಿರುವುದು ಸರಿಯಾದ ಗುರಿ ಮತ್ತು ಗುರಿ ಸಾಧನೆಗೆ ಶ್ರಮ, ಶ್ರದ್ದೆ ಏಕಾಗ್ರತೆ, ಆತ್ಮವಿಶ್ವಾಸ ಇವುಗಳನ್ನು ಬೆಳೆಸಿಕೊಂಡರೆ, ಬಾಲ್ಯದಿ ಶೈಕ್ಷಣಿಕವಾಗಿ ಕಡಿಮೆ  ಅಂಕ ಪಡೆದ ದಡ್ಡ ವಿದ್ಯಾರ್ಥಿಯು ಕೂಡ ಬುದ್ದಿವಂತ ಆಗುವುದರಲ್ಲಿ ಸಂಶಯವಿಲ್ಲ.
ನೀವೇ ಹೇಳಿ ಬಾಲ್ಯದಿ ಕಡಿಮೆ ಅಂಕ ಪಡೆದ ದಡ್ಡ ಬುದ್ದಿವಂತ ಹಾಗಬಹುದೇ???????


ಶಾಲೆಯಲ್ಲಿ ಮಾಡಲಿಲ್ಲ ನಾನು ಅಭ್ಯಾಸ
ಓದುವುದು ಹಾಗಲ್ಲಿಲ್ಲ ನನಗೆ ಹವ್ಯಾಸ
ಜೀವನದಿ ಕಳೆದುಕೊಂಡೆ ಆತ್ಮವಿಶ್ವಾಸ
ಬದುಕಲ್ಲಿ ಉಸಿರುಗಟ್ಟಿತು ಓದಿನ ಶ್ವಾಸ


ಎಲ್ಲರೂ ಕರೆದರೂ ನನ್ನ ದಡ್ಡ
ನಾನು ಬೆಳೆದೆ ಜೀವನದಿ ಮಡ್ಡ
ಕಷ್ಟಗಳು ತೋಡಿತು ನನಗೆ ಕೆಡ್ಡ
ಜೀವನದ ಸಾಧನೆ ಒಂದೂ ಗುಡ್ಡ
ಸಾಧಿಸಿ ನೀನು ಏನು ಎಂದು ತೋರು ಬಡ್ಡ

***********ಲೇಖಕರು *********
ಡಾ. ಚಂದ್ರಶೇಖರ. ಸಿ. ಹೆಚ್ 


Comments

Post a Comment

Popular posts from this blog

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ

ಚುಟುಕು ಕವನ-35