ಹುಚ್ಚು ಪ್ರೇಮಿ
ಓಡುತಿರುವ ಮನಸ್ಸನು
ನಾ ಹೇಗೆ ಹಿಡಿಯಲಿ
ಕಾಡುತ್ತಿರುವ ಕನಸ್ಸನ್ನು
ನಾ ಹೇಗೆ ಪಡೆಯಲಿ
ಆಸೆಗಳಿಗೆ ರೆಕ್ಕೆ ಬಂದಿದೆ
ಹಾರಲಾರದೇ ಪುಕ್ಕ ಮುರಿದಿದೆ
ಕುಣಿದು ನಲಿವ ವಯಸಲಿ
ಮಂಕು ಕವಿದಿದೆ
ಮಾತು ಏಕೊ ಸುಮ್ಮನೆ
ಮೂಕವಾಗಿದೆ
ಕಣ್ಣ ಅಂಚಿನಲ್ಲಿ ಕಣ್ಣೀರು ಅವಿತಿದೆ
ದುಃಖ ದುಮ್ಮಿಕಿದೆ ನೋವು
ತಾಳಲಾರದೆ
ದೇಹದಲ್ಲಿ ನಡುಕ ಕಾಡಿದೆ
ನಡೆವ ನಡಿಗೆ ಏಕೊ ದಾರಿ ತಪ್ಪಿದೆ
ಏಕೆ ಹೀಗೆ ಜೀವ ಬೆದರಿದೆ
ಒಂದೂ ಕೂಡ ನನಗೆ ತಿಳಿಯದಾಗಿದೆ
ನನ್ನ ಬಿಟ್ಟು ನೀನು ದೂರ
ಏಕೆ ಓಡಿದೆ
ಪ್ರೀತಿ ನೀಡು ನೀನು
ನೀನೇ ನನ್ನ ಭೂಮಿ ಭಾನು
ಎಂದು ಹೃದಯ ನನ್ನವಳ ಕೇಳಿದೆ
ಬದುಕಲ್ಲಿ ನೀನು ಬಂದೆ
ನೂರೆಂಟು ಭರವಸೆಗಳ ತಂದೆ
ಬಾಳ ಬಂಡಿ ಸಾಗುತಿರಲು
ನೀನು ಇರದೇ ಗಾಡಿ ಉರುಳಿದೆ
ಪಯಣದಲಿ ನಾನು ಒಂಟಿ
ನೆನಪುಗಳ ನೋವೇ ಜಂಟಿ
ಸಾಗುತಿದೆ ಜೀವನ ಕುಂಟಿ
ಬಾರೆ ನನ್ನ ಚೆಲುವೆ
ಕನಸ್ಸುಗಳ ಒಲವೇ
ಮನಸ್ಸು ಮಿಡಿಯುತ್ತಿರುವ
ಪ್ರೀತಿ ಮಾಂತ್ರಿಕೆ
ನೀನು ನನ್ನ ಗೆದ್ದ ಶೀಲಾ ಬಾಲಿಕೆ
ನೀನೇ ನನ್ನ ಅಚ್ಚು ಮೆಚ್ಚು
ನೀನು ಕಾಣದೆ ಬಿಡದಿ ಹುಚ್ಚು
ಕಾಲಿ ಹಾಳೆಯು ನಾನು
ಬರೆಯು ಬಾರೆ ನೀನೆ ನನ್ನವನು
ನಾನು ನಿನ್ನಲಿ ಸೆರೆಯಾದೆ
ನಿನ್ನಗುಂಗಲಿ ನಶೆಯಾದೆ
ನನ್ನ ಗುಂಡಿಗೆ ನೀ ಬಲಿಯಾದೆ
ಉಸಿರೇ ಇಲ್ಲದ ಹೆಸರಾದೆ
ಘೋರಿಯೆ ಇಲ್ಲದ ಶವವಾದೆ
*******ರಚನೆ *******
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment