ಕೂಸುಮರಿ
ಎದೆಗೊತ್ತಿ ಕೊಂಡು ಮುದ್ದಾಡಿದ ಅಮ್ಮ
ತಲೆಮೇಲೆ ಎತ್ತಿಕೊಂಡು ತಿರುಗಾಡಿದ ಅಪ್ಪ
ಕೂಸುಮರಿ ಮಾಡಿ
ಕುಣಿದಾಡಿದ ಅಣ್ಣ
ನೆನಪುಗಳು ಇಲ್ಲಿ ಬದುಕು ಚೆಲ್ಲಾಪಿಲ್ಲಿ
ಬೆಳೆದು ನಿಂತಿರುವೆ ನಾನು
ಕನ್ನಡಿಯು ಏಳುತಿದೆ
ಕಣ್ಣೆದುರು ಕವನ
ನಾಚುತ್ತಿದೆ ಏಕೊ ನೋಡಿ
ಪ್ರತಿಬಿಂಬವ ನಯನ
ಬದುಕು ಬಿಡಿಸದ ಒಗಟು
ಮನವು ಮಾತಲಿ ಒರಟು
ಕಾಲವು ಕಣ್ಮರೆಯಾಗುತ್ತಿದೆ
ಆಡಲು ಬಿಟ್ಟು ನನ್ನ
ದೇಹವು ಬಾಗುತಿದೆ
ಕನಸ್ಸುಗಳ ರೆಕ್ಕೆ ಮುರಿದಂತೆ ಇನ್ನ
ಆಸೆಗಳ ಸುಳಿ ನುಂಗುತಿದೆ
ನನ್ನ ಜೀವವನ್ನ
ಜೀವನದ ಪಯಣದಿ
ಹೊರಟ ದಾರಿ ಹೋಕ ನಾನು
ಕಷ್ಟಗಳ ಸರಮಾಲೆಯಲಿ
ಕುತ ಮೂಖ ನಾನು
ಭಾವನೆಗೆ ಬೆಲೆ ಕಟ್ಟಿದೆ
ಸಂಬಂಧಗಳ ನೆಲೆ ಎಲ್ಲಿದೆ
ದಿನವೂ ಸಾಗುತಿದೆ ದೂರ
ಕ್ಷಣದ ಮೌನ ಬಲು ಬಾರ
ನೆನಪುಗಳು ಇಲ್ಲಿ ಖಾರ
ಹೃದಯ ಬಡಿಯುತಿದೆ ಜೋರ
ಬದುಕು ಬೇಕು ಬೇಡಗಳ ಸಾರ
ಬದುಕುಬೇಕು ನಾವು ಮರೆತು ನೋವಿನ ತೀರ
*********ರಚನೆ ********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment