6. ಕಾಲೇಜು ಜೀವನದಿ ನಾನು ಏನು ಕಲಿತೆ



ಇಂದಿನ ಯುಗದಲ್ಲಿ ಶಿಕ್ಷಣವುi ಯುವಕರಿಗೆ ಭವಿಷ್ಯ ನಿರ್ಮಾಣ ಮಾಡಿಕೊಳ್ಳಲು ವೇದಿಕೇಯಾಗಿ ಕೆಲಸ ಮಾಡುತ್ತಿದೆ. ಶಿಕ್ಷಣವು ಜ್ಞಾನ ಮತ್ತು ಕೌಶಲ್ಯಗಳನ್ನು ಕಲಿಸಿ ನಾವು ಉದ್ಯೋಗವಂತರಾಗಲೂ ಸಹಾಯ ಮಾಡುತ್ತಿದೆ. ಶಿಕ್ಷಣದಲ್ಲಿ ತಂತ್ರಜ್ಞಾನದ ಕಲಿಕೆ ಮತ್ತು ತಂತ್ರಜ್ಞಾನದ ಅಭಿವೃದ್ಧಿಯು ಭಾರತದ ಆರ್ಥಿಕ ಪ್ರಗತಿಗೆ ತುಂಬಾ ಸಹಾಯಕವಾಗುತ್ತಿದೆ.

ಈ ಆಧುನಿಕ ಜಗತ್ತಿನಲ್ಲಿ ಶಾಲೆ ಮತ್ತು ಕಾಲೇಜುಗಳ ಶಿಕ್ಷಣ ನಿರ್ವಹಣೆ ನಮ್ಮ ವೈಯಕ್ತಿಕ ಮತ್ತು ವೃತ್ತಿ ಜೀವನದ ಗೆಲುವು ಎಂದು ಭಾವಿಸಲಾಗಿದೆ. ಇಂದು ಬಹುಮುಖ್ಯ ಅವಶ್ಯಕತೆ ಇರುವುದು ಪುಸ್ತಕಗಳ ಬಾಯಿಪಾಠ ಅಥವಾ ಜ್ಞಾಪಕ ಮಾಡಿಕೊಂಡು ಹೇಳುವ ಡಾಕ್ಟರ್, ಇಂಜಿನಿಯರ, ಶಿಕ್ಷಕ ಮತ್ತು ಮ್ಯಾನೇಜರ್ ಗಳಲ್ಲ

ಪುಸ್ತಕವನ್ನು ಓದಿ ನಾವು ಪಡೆದ ಜ್ಞಾನವು ನಮ್ಮ ಜೀವನ ನಿರ್ವಹಣೆ ಮಾಡಲು ಹಾಗೂ ಬರುವ ಕಷ್ಟಗಳನ್ನು ಜೀವನದಲ್ಲಿ ಎದುರಿಸಲು ಸಹಾಯ ಮಾಡುವುದಿಲ್ಲ ಅದಕ್ಕೆ ಅವಶ್ಯಕತೆ ಇರುವುದು ಜೀವನ ಕೌಶಲ್ಯ ಮತ್ತು ಶೈಕ್ಷಣಿಕ ಕೌಶಲ್ಯ. ಇವುಗಳು ನಮಗೆ ಜ್ಞಾನ ಮತ್ತು ನಮ್ಮ ವರ್ತನೆಗಳನ್ನು ರೂಪಿಸಲು ಹಾಗೂ ವ್ಯಕ್ತಿಗಳ ನಡುವಿನ ಸಂಬಂಧಗಳನ್ನು ಸರಿದೂಗಿಸುತ್ತದೆ.

 ಜೀವನ ಕೌಶಲ್ಯಗಳು ಯಾವವೆಂದರೆ

 1.ವ್ಯಕ್ತಿ ಕೌಶಲ್ಯ

2. ಭಾವನಾತ್ಮಕ ಕೌಶಲ್ಯ

3. ಸಾಮಾಜಿಕ ಕೌಶಲ್ಯ

4. ಶೈಕ್ಷಣಿಕ ಕೌಶಲ್ಯ

5.ಬೌದ್ಧಿಕ ಕೌಶಲ್ಯ

6.ಸಂವಹನ ಕೌಶಲ್ಯ

7.ಮೋಟಾರ್ ಕೌಶಲ್ಯ

8.ಸೌಂದರ್ಯದ ಕೌಶಲ್ಯ

9.ತಾಂತ್ರಿಕ ಕೌಶಲ್ಯ

10.ನಿರ್ವಹಣಾ ಕೌಶಲ್ಯ

11. ಸಾಂಸ್ಕೃತಿಕ ಕೌಶಲ್ಯ 

ಇವುಗಳು ವಿದ್ಯಾರ್ಥಿ ಜೀವನದಲ್ಲಿ ಮುಖ್ಯವಾಗಿರುತ್ತದೆ.

 ಇಲ್ಲಿ ಎಲ್ಲಾ ವಿದ್ಯಾರ್ಥಿಗಳು ಗ್ರಾಮೀಣ ಮತ್ತು ನಗರ ಪ್ರದೇಶದಿಂದ ಬಂದಿರುತ್ತಾರೆ ಮತ್ತು ಸಾಮಾಜಿಕ ಹಾಗೂ ಲಿಂಗ ವ್ಯತ್ಯಾಸಗಳು ಇರುವುದರಿಂದ ವಿದ್ಯಾರ್ಥಿಗಳು ತಮ್ಮದೇ ಆದ ಕಷ್ಟಗಳು ಅವರನ್ನು ಕಾಡಿರುತ್ತವೆ ಮತ್ತು ವಿದ್ಯಾರ್ಥಿಗಳ ಜೀವನ ಕೌಶಲ್ಯ ಅದರೊಳಗೆ ಬೆರೆತಿರುತ್ತದೆ. ಇವುಗಳನ್ನು ದಾಟಿ ವಿದ್ಯಾರ್ಥಿಗಳು ತಮ್ಮ ಜೀವನದ ಕೌಶಲ್ಯವನ್ನು ವೃದ್ಧಿ ಮಾಡಿಕೊಳ್ಳಬೇಕಾಗುತ್ತದೆ. ಸಮೀಕ್ಷೆಗಳು ಹೇಳುವಂತೆ ಜೀವನ ಕೌಶಲ್ಯಗಳು  ಕೆಲವು ವಿದ್ಯಾರ್ಥಿಗಳಲ್ಲಿಮಾಧ್ಯಮ, ಕೆಲವರಲ್ಲಿ ಉತ್ತಮ ಹಾಗೂ ಮಹಿಳೆಯರು ಜೀವನ ಕೌಶಲ್ಯಗಳಲ್ಲಿ ಪುರುಷರಿಗಿಂತ ಮೇಲುಗೈಯಿ ಸಾದಿಸಿರುವುದು  ಕಂಡುಬರುತ್ತದೆ ಮತ್ತು ಶೈಕ್ಷಣಿಕ ವಿಷಯಗಳಾದ ಕಲಾ, ವಿಜ್ಞಾನ, ವೈದ್ಯರು,  ಇಂಜಿನಿಯರ್, ಶೈಕ್ಷಣಿಕ ಅಭ್ಯಾಸ ಕೋರ್ಸ್ರುಗಳಲ್ಲಿ ವೈದ್ಯರು,ಎಂಜಿನಿಯರ್ ವಿಜ್ಞಾನ ಶಿಕ್ಷಣ ಮಾಡಿದವರ ಜೀವನ ಕೌಶಲ್ಯಗಳು ಉತ್ತಮವಾಗಿರುತ್ತವೆ.

 ಶೈಕ್ಷಣಿಕ ಕೌಶಲ್ಯಗಳು  ಯಾವುವೆಂದರೆ

1. ವಿಮರ್ಶಾತ್ಮಕವಾಗಿ ಓದುವುದು

2.ತರ್ಕಬದ್ಧವಾಗಿ ಓದುವುದು

3. ಅಧ್ಯಯನದ ಅಭ್ಯಾಸಗಳು

4. ಉದ್ಯೋಗ ನಿಭಾಯಿಸುವುದು

5.ಯಶಸ್ಸು

6. ಸಂವಹನ

7. ಪ್ರಸ್ತುತಪಡಿಸುವುದು

8. ಸಮರ್ಥವಾಗಿ ಕೆಲಸ ಮಾಡುವುದು

9.ಬರವಣಿಗೆ ಕೌಶಲ್ಯ

10. ಕಷ್ಟಗಳು ನಿಭಾಯಿಸುವುದು

11. ತಂಡದಲ್ಲಿ ಕೆಲಸ ನಿರ್ವಹಣೆ

12.ಮಾತುಕತೆ

13. ಕಲಿಕೆ

14. ಜವಾಬ್ದಾರಿ

15. ಸಂಸ್ಥೆಗಳ ಕೆಲಸ

16. ಕೆಲಸದ ನೀತಿ

17. ಸ್ವತಹ ಪರಿಚಯ

18. ಸಮಯದ ಸದುಪಯೋಗ

 ಇವುಗಳಲ್ಲಿಯೂ ಪುರುಷರಿಗಿಂತ ಮಹಿಳೆಯರು ಮುಂದೆ ಸಾಗುತ್ತಿದ್ದಾರೆ.ಈಗಿನ ಕಾಲೇಜು ವಿದ್ಯಾರ್ಥಿಗಳು ನಿಜವಾಗಿಯೂ ತಮ್ಮ ಶೈಕ್ಷಣಿಕ ಜೀವನದಲ್ಲಿ ಶೈಕ್ಷಣಿಕ ಕೌಶಲ್ಯ ಮತ್ತು ಜೀವನ ಕೌಶಲ್ಯಗಳನ್ನು ಕಲಿತಿದ್ದೆ ಆದಲ್ಲಿ ದೇಶದ ಉತ್ತಮ ಪ್ರಜೆಯಾಗಿ ರೂಪುಗೊಳ್ಳುವುದರಲ್ಲಿ ಯಾವುದೇ ಎರಡು ಮಾತಿಲ್ಲ ನಮ್ಮ ಶೈಕ್ಷಣಿಕ ಸಂಸ್ಥೆಗಳಲ್ಲಿ ನಿಜವಾಗಿಯೂ ನಾವು ಶೈಕ್ಷಣಿಕ ಕೌಶಲ್ಯ ಮತ್ತು ಜೀವನ ಕೌಶಲ್ಯ ಇವುಗಳನ್ನು ಕಲಿಯುತ್ತಿರುವೆವೆ. ಮತ್ತು ನಮ್ಮ ಶಿಕ್ಷಣದಲ್ಲಿ ಶಿಕ್ಷಕರ, ತಂದೆ ತಾಯಿಯರ ಪಾತ್ರಗಳ ಅರಿವು ಮತ್ತು ನಮ್ಮ ಸರ್ವತೋಮುಖ ಅಭಿವೃದ್ಧಿಯಲ್ಲಿ ನಮಗೆ ಆಸಕ್ತಿ ಇದೆಯೆ. ನಾವುಗಳು ಶಾಲೆಗಳ ಅಂಕಗಳಿಗೆ ನಮ್ಮ ಅಭ್ಯಾಸ ಸೀಮಿತ ಮಾಡಿಕೊಂಡಿದ್ದೇವೆಯೇ ಹಾಗೂ ವಿದ್ಯಾರ್ಥಿ ಜೀವನದಲ್ಲಿ ನಾವು ನಮ್ಮ ಏಳಿಗೆಗೆ ಮಾರಕವಾದ  ಸಿಗರೇಟ್, ಡ್ರಗ್ಸ್,  ಕುಡಿತ ಮತ್ತು ಪ್ರೀತಿ ಪ್ರೇಮ, ನೀಲಿ ಸಿನಿಮಾ ವೀಕ್ಷಣೆ ಮುಂತಾದ ದುಶ್ಚಟಗಳಿಗೆ ಬಲಿಯಾಗಿದ್ದೇವೆಯೇ.

 ನಮ್ಮ ಶೈಕ್ಷಣಿಕ ಜೀವನದಲ್ಲಿ ನಾವು ಬಾಲ್ಯ ವ್ಯವಸ್ಥೆಯಿಂದ ಕಾಲೇಜು ಮುಗಿದು ವೃತ್ತಿ ಜೀವನಕ್ಕೆ ಕಾಲಿಡುವ ಒಳಗೆ ನಮ್ಮ  ಕೌಶಲ್ಯಗಳಾದ ಜೀವನ ಕೌಶಲ್ಯ,  ಶೈಕ್ಷಣಿಕ ಕೌಶಲ್ಯಗಳು ನಮ್ಮನ್ನು ಮುನ್ನಡೆಸುತ್ತೀವೆಯೇ ನಾವು ನಮ್ಮನ್ನು ಪ್ರಶ್ನೆ ಮಾಡಿಕೊಂಡಾಗ ನಮಗೆ ಉತ್ತರ ಸಿಗುವುದು ನಾನು ಕಾಲೇಜು ಜೀವನದಿ ಏನು ಕಲಿತೆ?????


 ಕಾಲೇಜು ಜೀವನದಿ ನಾನು ಏನು ಕಲಿತೆ

 ಮನಸೆಲ್ಲಾ ಸೆಳದಳಾ ಅ ವನಿತೆ

ಪುಸ್ತಕಗಳ ನಾ ಏಕೊ ಮರೆತೆ

ದುಷ್ಚಟಗಳ ಗೆಳೆಯರೊಂದಿಗೆ ನಾ ಬೆರೆತೆ

 ಸಮಯವ ದೂಕಿ ವ್ಯಸನದಿ ಕಲೆತೆ

 ಅಪ್ಪ-ಅಮ್ಮನ ಎದುರಿಗೆ ನಾ ಬಲಿತೆ

ಹೇಗೆ ಹೇಳಲಿ ಏನು ಹೇಳಲಿ ಕಾಲೇಜು ಜೀವನದಿ ನಾನು ಏನು ಕಲಿತೆ.


**********ಲೇಖಕರು *******

ಡಾ. ಚಂದ್ರಶೇಖರ. ಸಿ. ಹೆಚ್ 

Comments

Popular posts from this blog

ಭಾವಗೀತೆ -51

ಭಾವ ಗೀತೆ-1

ಭಾವ ಗೀತೆ- 20