ಜಾತಿಯ ನೀತಿ



ಜಾತಿಗಳ ಮದ್ಯೆ

ನೀತಿಗಳು ಜೋರು

ಭರಗಾಲದಾಗೆ

ಭೂಮಿಗೆ ಬೋರು 


ಹುಟ್ಟಿದ ಮಗುವಿಗೆ

ಜನಿವಾರವೆಲ್ಲಿ

ಬೆಳೆದ ಮಕ್ಕಳು

ಲಿಂಗವ ಕಿತ್ತೆಸದಿರಿಲ್ಲಿ


ಹರಿಯಂತೆ ಹರನಂತೆ

ಬ್ರಹ್ಮನು ದೇವರು

ಸೂರಿಲ್ಲದ ತೇರಿನಲ್ಲಿ

ಬದುಕುತಿರುವ ಬಡವರು


ಹೊಲೆಯ ಮಾದಿಗ

ಮನುಷ್ಯರಲ್ಲವೇ?

ಮೈಯಲ್ಲಿ ಹರಿವುದು

ರಕ್ತವಲ್ಲವೇ?


ಎಲ್ಲರೂ ತಿನ್ನುವುದು

ಹೊಟ್ಟೆಗೆ ಅನ್ನ

ಮರೆತಿಹರು  ಜನರು

ಮಾನವೀಯತೆಯನ್ನ


ಜಾತಿಗಳು ನೂರು

ಬಿಟ್ಟಿವೆ ಬೇರು

ಆಲದ ಮರದಂತೆ

ಭೀಳಿಲ ಸೂರು


ಜಾತಿಗಳ ಸೌದೆಯಲ್ಲಿ

ಹೊತ್ತಿದೆ ಬೆಂಕಿ

ಬೇಯುತಿದೆ ಮಾನವರ

ಬಾಳಲಿ  ಬೇಧದ ಕೊಂಕಿ 


ಹುಡುಕುತ ಹೊರಟರೆ

ನಾವು ಎಲ್ಲರೂ ಒಂದೇ

ಬಾಲವಿರುವ ಮಂಗನೆ

ನಮ್ಮಯ  ತಾಯಿ ತಂದೆ


*******ರಚನೆ *******

ಡಾ. ಚಂದ್ರಶೇಖರ. ಸಿ. ಹೆಚ್

Comments

Popular posts from this blog

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ

ಚುಟುಕು ಕವನ-35