ಸಾವು
ಸಾವಿನ ಮನೆಯಲಿ
ಮೌನದ ಸೂತಕ
ಹುಡುಕುತ ಹೊರಟರೆ
ನೋವಿನ ಜಾತಕ
ಹೆಣದ ಮೈತುಂಬಾ
ಹೂವಿನ ರಾಶಿ ರಾಶಿ
ದೇವರು ಕರೆದಂತೆ
ಸ್ವರ್ಗಕೆ ಕೈ ಬೀಸಿ ಬೀಸಿ
ಮನೆಯ ತುಂಬೆಲ್ಲಾ
ಗೋಳಿನ ಛಾಯೆ
ಮನದ ತುಂಬಾ
ಮಸಣದ ಮಾಯೆ
ಕಣ್ಣ ಹನಿಯೊಂದು ಹೇಳಿದೆ ಕಥೆ
ನೋವುಂಡ ಭಾವನೆಗಳ ವ್ಯಥೆ
ಹೃದಯ ಕೂಗಿದೆ ಒಮ್ಮೆ ಹಾಗೆ
ತಾಳಲಾಗದೆ ನೋವಿನ ಬೇಗೆ
ಯಾರು ಕಾಣದ ಲೋಕಕೆ ನಡಿಗೆ
ಬಿಚ್ಚಿಟ್ಟು ತೊಟ್ಟ ಊಡುಗೆ
ನಾನು ನನ್ನವರ ಬಿಟ್ಟು
ದೇಹವಾಯಿತು ಕರಕಲು ಸುಟ್ಟು
ಹಚ್ಚಿಟ್ಟ ಹಣತೆ ತೊಳೆದಿತೆ ಕತ್ತಲೆ
ಸುಟ್ಟಿತೆ ನೋವ ಮೂಡಿದ ಬೆಳಕಲೇ
ದೀಪದ ಎಣ್ಣೆ ಅದ್ದಿದಾ ಬತ್ತಿ
ಉರಿಯಿತು ಬೆಳಕನ್ನು ಬಿತ್ತಿ
ಮುಗಿಯಿತು ಜೀವನದ ಜಾತ್ರೆ
ಹೊರಟಿತು ಜೀವ ಯಾತ್ರೆ
ಕಣ್ಣೀರ ಹನಿಗೆ ಸಿಕ್ಕಿತೆ ಮುಕ್ತಿ
ಕೊಡಲಿ ಬಾಳಲ್ಲಿ ಬದುಕುವ ಶಕ್ತಿ
*********ರಚನೆ ********
ಡಾ. ಚಂದ್ರಶೇಖರ. ಸಿ. ಹೆಚ್
Nicely written chandru.
ReplyDelete