ದೇಶ ನಮ್ಮದು
ದೇಶ ನಮ್ಮದು ದೇಶ ನಮ್ಮದು
ಆಡುವ ಭಾಷೆಗಳು ನೂರು ನಮ್ಮದು
ಹರಿವ ನದಿಗಳು ತವರು ನೆಲ ನಮ್ಮದು
ಜಾತಿಗಳ ಜೊತೆಯಲಿ ಬಾಳುವ ದೇಶ ನಮ್ಮದು
ಧರ್ಮಗಳು ಯಾವುದೇ ಇರಲಿ
ಸಹಬಾಳ್ವೆಯ ದೇಶ ನಮ್ಮದು
ಮೇಲು ಕೀಳು ಮರೆತು ನಡೆವ
ದೇಶ ನಮ್ಮದು
ಹಸಿರು ಪರ್ವತಗಳ ಗೂಡು ನಮ್ಮದು
ವನ್ಯ ಪ್ರಾಣಿಗಳ ಬಿಡು ನಮ್ಮದು
ವಿವಿಧತೆಯಲಿ ಏಕತೆ ಸಾರುವ
ನಾಡು ನಮ್ಮದು
ಬ್ರಿಟಿಷರು ನಮ್ಮನ್ನು ಆಳಿದರು
ದೃತಿ ಗೆಡದೆ ಸ್ವತಂತ್ರ ಪಡೆದ
ನಾಡು ನಮ್ಮದು
ಇತಿಹಾಸದಿ ಮರುಗಿದರು
ಬೇರುಗ ನೀಡೋ ಶಿಲ್ಪಾ ಕಲೆಯ
ತವರು ನಮ್ಮದು
ತಪವ ಮಾಡಿ ವರವ ಪಡೆದ
ಋಷಿಗಳ ಬಿಡು ನಮ್ಮದು
ಧ್ಯಾನದಿಂದ ಜಗದ ಮನಸ್ಸು ಗೆದ್ದ
ವಿವೇಕಾನಂದ ಹುಟ್ಟಿದ ದೇಶ ನಮ್ಮದು
ಶಾಂತಿ ಮಂತ್ರ ಜಪಿಸಿದ. ಮಹಾತ್ಮ ಗಾಂಧಿ
ಹುಟ್ಟಿದ ನೆಲ ನಮ್ಮದು
ಹುಡುಗೇ ತೋಡುಗೆ ಸೊಬಗು
ವೈವಿದ್ಯಮಯ ನೆಲ ನಮ್ಮದು
ದೇಶ ದೇಶಗಳು ಬಡಿದಾಡು ತಿರಲು
ಶಾಂತಸಾರುವ ದೇಶ ನಮ್ಮದು
ಪ್ರಜೆಗಳಿಂದ ಪ್ರಜೆಗಳಿಗಾಗಿ
ಪ್ರಜೆಗಳಿಗೋಸ್ಕರ ಕೂಡಿದ
ಪ್ರಜಾಪ್ರಭುತ್ವ ಬಿಡು ನಮ್ಮದು
ದೈವ ನೂರು ಬೇಡುವ ಭಕ್ತರು
ನೂರು ದೈವ ಸಂಬೂತ ದೇಶ ನಮ್ಮದು
ಜನಸಂಖ್ಯೆಯಲಿ ನೂರು ಕೋಟಿ ಇದ್ದರು
ಬೆಳೆಯುತ್ತಿರುವ ದೇಶ ನಮ್ಮದು
ನಮ್ಮದು ನಮ್ಮದು ಈ ದೇಶ ನಮ್ಮದು.
**********ರಚನೆ **********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment