ದೀಪಾವಳಿ

 



ಹಣತೆಯೊಂದು ಬಾಳ ಬೆಳಗಿ

ಕಷ್ಟದ ಕತ್ತಲೆಯೊಂದು ಬದುಕಲಿ ಕರಗಿ

ಜೀವನದಿ ದುಃಖದ ಎಣ್ಣೆ 

ಸುಖವೆಂಬ ಬತ್ತಿ  ದೀಪದಂತೆ ಉರಿದು 

ಮನದಿ ಬೆಳಕು ಬೆಳಗಲಿ 


ಬದುಕ ಯಾತ್ರೆಯಲ್ಲಿ ಆಸೆ ನೂರು

ಕನಸ್ಸುಗಳ ಮಾತ್ರೆಗಳ ಕಾರು ಬಾರು

ಆಸೆ ಕನಸ್ಸುಗಳು ಬಾಳಲಿ ನನಸ್ಸು

ಉಕ್ಕಲಿ ಉತ್ಸಾಹ ಮೂಡಲಿ ಉಲ್ಲಾಸ


ನೋವುಗಳ ಚಿಂತೆ ದೂರವಾಗಲಿ

ಕಷ್ಟಗಳು ದೀಪದಂತೆ ಉರಿದು ಹೋಗಲಿ

ಖುಷಿ ಎಂಬ ಬೆಳುಕು ಚೆಲ್ಲಲಿ

ಮನದ ಮೌಢ್ಯತೆ ಮರೆತು ಹೋಗಲಿ


ಬಾಳ ದಾರಿ ಎಡರು ತೊಡರು

ಸಾಗಬೇಕು ನಾವು ಸವೆಸಿ ಪೊಗರು

ಮನದಿಂದ ಮನಕೆ ದೀಪ ಹಚ್ಚಿ

ಎಲ್ಲಾ ಕನಸ್ಸು ನನಸ್ಸಾಗಿ ಬೆಳಗಲಿ ಬಾಳಲಿ


ದೀಪಾವಳಿ ಹಬ್ಬದ ಶುಭಾಶಯಗಳು 


*********ರಚನೆ *********

ಡಾ. ಚಂದ್ರಶೇಖರ. ಸಿ. ಹೆಚ್

Comments

Popular posts from this blog

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ

ಚುಟುಕು ಕವನ-35