ಮಳೆ ಬಂದಿತ್ತು
ಅಗಸದಲ್ಲಿ ಕರಿಯ ಮೋಡ
ಸಿಡಿಲು ಹಾಗೆ ಸಿಡಿಯಿತು ನೋಡ
ಮಿಂಚು ಬಂದು ಮನೆಯಲ್ಲಿ
ಕರೆಂಟ್ ಹೋಗಿತ್ತು
ಕುಲ್ಡನ ಮಳೆಯೂ ರಭಸದಿ
ಸುರಿದು ಬಿಟ್ಟಿತ್ತು
ನಮ್ಮ ಊರಲ್ಲಿ ಮಳೆಯೂ
ಜೋರು ಬಂದಿತ್ತು
ಅಮ್ಮ ಉರಿದ ಕಡಲೆಕಾಯಿ
ಏಕೊ ನೆನಪಿಗೆ ಬಂದಿತ್ತು
ತಿನ್ನಲು ಮನವು ಬಯಸಿತ್ತು
ಅಮ್ಮ ಮಾಡಿದ ಮುದ್ದೆ ಉಂಡು
ರಾತ್ರಿ ಮಲಗಿ ಬೆಳಗ್ಗೆ ಏಳಲು
ಕಾಫಿ ಮಾಡಿದ ಅಮ್ಮ ನಮ್ಮ ಕರೆದಿತ್ತು
ಕಾಫಿ ಲೋಟಕೆ ಮಂಡಕ್ಕಿ ಹಾಕಿ
ತಿಂದು ಮನವು ತೇಗಿತ್ತು
ನೋಡಲು ನೀರಿನ ಶಬ್ದ ಕೇಳಿತ್ತು
ನಮ್ಮ ಊರಿನ ಕಟ್ಟೆ ತುಂಬಿತ್ತು
ಹರಿವ ನೀರಲ್ಲಿ ನಾನು ಮಾಡಿದ
ಹಾಳೆ ದೋಣಿ ಮುಳಿಗಿತ್ತು
ನೀರಲ್ಲಿ ಆಡಿ ಗೊಚ್ಚೆಲಿ ಕುಣಿದು
ನನ್ನ ಅಂಗಿ ನೆನೆದಿತ್ತು
ಮನೆಯಲ್ಲಿ ಹೋಗಿ ಒಲೆಯಲಿ
ಕೆಂಡ ಕಾದಿತ್ತು
ಅಮ್ಮ ಸುಟ್ಟ ಅಲಸಿನ ಬೀಜ
ಬಾಯಲಿ ನೀರು ತಂದಿತ್ತು
ಅಮ್ಮ ಮಾಡಿದ ತಿಂಡಿ ತಿಂದು
ನಮ್ಮ ಪಯಣ ಶಾಲೆಗೆ ಹೊರಟ್ಟಿತ್ತು
ನಮ್ಮ ಮೇಷ್ಟ್ರೇಗೆ ಗಿಡವನು
ನಡಿಸುವ ಆಸೆ ಬಂದಿತ್ತು
ಗಿಡವನ್ನು ನೆಟ್ಟು ಶಾಲೆಯಲ್ಲಿ
ಶಾರದಾ ಪೂಜೆ ನಡೆದಿತ್ತು
ಮಂಡಕ್ಕಿ ಖಾರ ತೆಂಗಿನಕಾಯಿ
ಚೂರು ತಿಂದು ಮನವು ಕುಣಿದಿತ್ತು
ಸಂಜೆ ಮನೆಗೆ ಬಂದು ಹೋಮ್ ವರ್ಕ್
ಮಾಡದೆ ಉಳಿದಿತ್ತು
ಅಮ್ಮ ಕೂಟ್ಟ ಬೆತ್ತದ ಏಟಿಗೆ
ಬಾಸುಂಡೆ ಬಂದಿತ್ತು
ಅಪ್ಪ ತಂದ ಅಂಗಡಿ ಜಾಮೂನು
ತಿಂದ ನಮಗೆ ನೋವು ಮಾಯವಾಗಿತ್ತು
ಹೊಲಕ್ಕೆ ಹೊರಟ ನಮಗೆ
ಸೀಬೆಯ ಮರವು ಕಂಡಿತ್ತು
ಯಾರಿಗೂ ತಿಳಿಯದ ಹಾಗೆ ಸೀಬೆ
ಕದ್ದ ತಿಂದು ಮನವು ಕುಣಿದಿತ್ತು
ನಮ್ಮ ಮನೆಯ ಪಕ್ಕದಿ
ನೇರಳೆ ಮರವಿತ್ತು
ಎಷ್ಟು ತಿಂದರು ಇನ್ನು ತಿನ್ನುವ
ಆಸೆ ಚಿಗುರಿತ್ತು
ಅಮ್ಮ ಹಾಕಿದ ಪಪ್ಪಾಯ
ಮರವು ಹಣ್ಣು ಬಿಟ್ಟಿತ್ತು
ತಿಂದ ನನಗೆ ಉಷ್ಣಕೆ ಮುಗಲಿ
ರಕ್ತ ಸುರಿದಿತ್ತು
ಸ್ವಲ್ಪ ದಿನದ ನಂತರ ಗುಡ್ಡದಿ
ಗಾಳಿ ಬಂದಿತ್ತು
ನಾನು ಮಾಡಿದ ಗಾಳಿಪಟವು
ಆಕಾಶಕ್ಕೆ ಏರಿತ್ತು
ಧಾರವು ಹರಿದ ಗಾಳಿ ಪಟವು
ಮುಗಿಲಿಗೆ ಚಿಮ್ಮಿತ್ತು
ಸೂತ್ರವೇ ಇಲ್ಲದ ಗಾಳಿಪಟ
ನನ್ನ ನೋಡಿ ನಕ್ಕಿತ್ತು
ನಮ್ಮ ಊರ ಏರೆಯ ಭೂಮಿಲಿ
ಈರುಳ್ಳಿ ಬೆಳೆದಿತ್ತು
ಅಮ್ಮ ತಂದು ಸುಡವ ಕೆಂಡದಿ
ಈರುಳ್ಳಿ ಸುಟ್ಟಿತ್ತು
ತಿಂದ ನನಗೆ ಏಕೊ ಬಾಯಲ್ಲಿ
ಜೊಲ್ಲು ರಸವೂ ಸುರಿದಿತ್ತು
ಕಾಲವು ಕಳೆದು ಮಕರ
ಸಂಕ್ರಾಂತಿ ಬಂದಿತ್ತು
ಅಮ್ಮ ಬೇಯಿಸಿ ಕೊಟ್ಟ ಅವರೇಕಾಯಿ
ನನ್ನ ಕರೆದಿತ್ತು
ಹಬ್ಬಕೆ ಮಾಡಿದ ಎಳ್ಳು ಬೆಲ್ಲವು
ಬೇಕು ಎಂದಿತ್ತು
ಅ ಮೇಲೆ ನಮ್ಮ ಮನೆ ಎಮ್ಮೆ
ಕಣದಿ ಮೇದಿತ್ತು
ಗೆಳೆಯರು ನಾವು ಮಾಡಿದ
ಹುಣುಸೆ ಹಣ್ಣಿನ ತೂಕ್ಕು ಕರೆದಿತ್ತು
ಕಣದಿ ಹಾಕಿದ ಕೊತ್ತಂಬರಿ
ಸೊಪ್ಪು ಸುರಿದಿತ್ತು
ಗೆಳೆಯರು ಸೇರಿ ಕಟ್ಟಿದ ಗುಡಿಸಲು
ಮನೆ ಬಾ ಎಂದಿತ್ತು
ನನ್ನ ಎಮ್ಮೆ ಪಕ್ಕದ ಹೊಲದಿ
ಹುಲ್ಲು ತಿಂದಿತ್ತು
ಹೊಲದ ಅಣ್ಣ ಗದರಿದ ಕೂಡಲೇ
ಬೆದರಿದ ನನಗೆ ಹಾಗೆ ಜ್ವರವು ಬಂದಿತ್ತು
ಗೆಳೆಯ ನೆನೆದ ಬಾಲ್ಯವು
ನೆನಪಿಗೆ ಬಂದಿತ್ತು
ವಯಸ್ಸು ಈಗ ತಿರುಗಿ
ನೋಡಲು ನಲವತ್ತಾಗಿತ್ತು
ಮತ್ತೆ ಬಾಲ್ಯವೇ ಎಷ್ಟು ಚೆಂದ
ಎಂದು ಮನಸ್ಸು ಹೇಳಿತ್ತು
***********ರಚನೆ ********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment