Posts

Showing posts from August, 2025

ಮಕ್ಕಳ ಗೀತೆ -44

Image
  🌹ಮುದ್ದಿನ ಹಸುವೇ 🌹 ನಮ್ಮ ಮನೆಯ  ಮುದ್ದಿನ ಹಸುವೇ  ನಾ ಹಗ್ಗ ಕಟ್ಟಲು  ನೀ ಜಗ್ಗಿ ಬಿಡುವೆ  ದೊಡ್ಡಿಯ ತುಂಬ  ಮೇವು ನಿನಗೆ  ಕೆಚ್ಚಲು ತುಂಬಾ  ಹಾಲು ನಮಗೆ  ಸಗಣಿಯ ನೀ ಇಟ್ಟಿರುವೆ  ಬೆರಣಿಯ ನಾ ತಟ್ಟಿರುವೆ  ಬೆರಣಿಯ ನಾ ಸುಟ್ಟು ಮೇಲೆ  ನೀ ವಿಭೂತಿಯಾಗಿರುವೆ  ತೊಟ್ಟಿಲೀ ಗಂಜಲ ನೀ ಬಿಟ್ಟಿರುವೆ  ಗಂಜಲ ಜೀವಾಮೃತ ನಾ ಮಾಡಿರುವೆ  ಜೀವಾಮೃತ ಕುಡಿದ ಮರಗಳು  ಹಚ್ಚಹಸಿರಲ್ಲಿ ಬೆಳೆದಿಹೇವೆ  ಬದಿಯ ಹುಲ್ಲು ತಿಂದಿರುವೆ  ಕೆಚ್ಚಲಲ್ಲಿ ಹಾಲು ತುಂಬಿರುವೆ  ಹಾಲನ್ನು ಕರುವಿಗೆ ಕೊಟ್ಟು  ಅಂಬಾ ಎನ್ನುತ್ತ ಕೂಗಿರುವೆ  ನಮ್ಮ ಮನೆಯ  ಮುದ್ದಿನ ಹಸುವೇ  ನಾ ಹಗ್ಗ ಕಟ್ಟಲು  ನೀ ಜಗ್ಗಿ ಬಿಡುವೆ  ********ರಚನೆ**********   ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ