ನಿಧಿ- ಚುಟುಕು ಕವನ ಸಂಕಲನ

 


ನಿಧಿ  

ಚುಟುಕು ಕವನ ಸಂಕಲನ 

ಲೇಖಕರ ನುಡಿ

ನನ್ನ ಸಾಹಿತ್ಯವು ನಾಲ್ಕು ಸಾಲುಗಳಿಂದ ಹುಟ್ಟಿ ಬೆಳೆದು ಈಗ ಹಲವಾರು ಪುಸ್ತಕಗಳು ಹೊರಬಂದ ನಂತರ. ನಾನು ನಾಲ್ಕು ಸಾಲುಗಳ ಚುಟುಕು ಕವನ ಬರೆಯಲು ಶುರು ಮಾಡಿ, ಸಾಕಷ್ಟು ಕವನಗಳನ್ನು ರಚಿಸಿ ಪುಸ್ತಕವಾಗಿ ಹೊರಹೊಮ್ಮಲು ಸಿದ್ಧವಾಗಿರುವುದು ನನಗೆ ತುಂಬಾ ಸಂತೋಷ ತಂದಿದೆ. 

ನಾಲ್ಕು ಸಾಲುಗಳ ಚುಟುಕು ಬರೆದೆ 

ಓದಿ ಹೇಳುವೆನು ಬನ್ನಿ ಎಂದು ಕರೆದೆ 

ಹೃದಯದ ಪದಗಳ ಕೂಡಿಸಿ ತೆರೆದೆ 

ಕಣ್ಣ ಹನಿಯ ತಿಳಿಸಿದ ಚುಟುಕುಗಳ ಪರದೆ 

ಮನಸ್ಸಿಗೆ ಬಂದ ಪದಗಳ ಜೋಡಿಸಿ ಕಳೆದೆ 

ಈ ಚುಟುಕುಗಳು ನನ್ನ ಮನಸ್ಸಿಗೆ ಬಂದು ಪದಗಳ ರೂಪ ತಾಳಿ ಕವನ ಸಂಕಲನವಾಗಿರುವುದು, ಒಂದು ಕಡೆಯಾದರೆ. ಈ ಕವನಗಳಿಗೆ ಸಾಹಿತ್ಯ ವೇದಿಕೆಗಳು ತಯಾರಾಗಿ ಕವನಗಳು ಪೈಪೋಟಿ ಮಾಡುವಾಗ ನಾನು ಬರೆದ ಕವನಗಳನ್ನು ಮುನ್ನೆಲೆಗೆ ತರುವ ಶ್ರಮ ಒಂದೆಡೆಯಾಗಿದೆ. ನನ್ನ ಮಗಳು ನಿಧಿಗಾಗಿ ಈ ಕವನ ಸಂಕಲನಕ್ಕೆ ನಿಧಿ ಎಂದು ಹೆಸರಿಟ್ಟು ಈ ಚುಟುಕು ಕವನ ಸಂಕಲನ ಹೊರತರುವ ಪ್ರಯತ್ನ ಮಾಡುತ್ತಿದ್ದೇನೆ. 

ನನ್ನ ಬಾಳಲಿ ಬಂದ ನಿಧಿ 

ಬದುಕು ಬೆರಗುಗೊಳಿಸಿದ ವಿಧಿ 

ನಿಧಿ ಎಂಬುದು ಸುಂದರ ಸವಿ ನದಿ 

ಜೀವನ ಸಾಗಲಿ ನೀ ನನ್ನ ಪ್ರತಿನಿಧಿ 

ನನ್ನ ಜೀವನದಲ್ಲಿ ಬಂದ ನಿಧಿ ಮತ್ತು ದೀಪ್ತಿ ಇಬ್ಬರು ಎರಡು ಕಣ್ಣಂತೆ ಆಗಿದ್ದಾರೆ. ಸಾಕಷ್ಟು ಬೇರೆ ಬೇರೆ ಉದ್ಯೋಗಗಳನ್ನು ಮಾಡಿ, ಕೆಲಸಗಳನ್ನು ಸಂಪೂರ್ಣವಾಗಿ ನಿಭಾಯಿಸಿದಾಗಲು ಕೆಲಸಕ್ಕೆ ರಾಜೀನಾಮೆ ಕೊಡುವ ಸಂದರ್ಭಗಳು ನನ್ನನ್ನು ಹಿಂಡಿ ಇಪ್ಪೆ ಮಾಡಿದ್ದವು. ನಾನೇ ಬದುಕುವುದು ಕಷ್ಟ ಮದುವೆ ಇನ್ನೇಕೆ, ಮಕ್ಕಳು ಬೇಡ ಎಂದು ಯೋಚಿಸಿದಾಗ ನನ್ನ ಬಾಳಲ್ಲಿ ಮಿಂಚಂತೆ ಬಂದವರು ಇವರು, ಇಬ್ಬರಿಗೂ ವಿದ್ಯಾಭ್ಯಾಸ ಕೊಡಿಸುವುದು ಹೇಗೆ ಎಂದು ನಾನು ಯೋಚಿಸ್ತಾ ಅತಿಥಿ ಉಪನ್ಯಾಸದ ಜೊತೆ ಹೊಲದಲ್ಲಿ ಕೆಲಸ ಮಾಡುವಾಗ ಮತ್ತು ನನಗೆ ಸಕ್ಕರೆ ಕಾಯಿಲೆ ವಕ್ಕರಿಸಿದಾಗಲು ನನ್ನ ಜೀವನ ಮುಂದೆ ಸಾಗುತ್ತಿರುವುದು ಸಂತಸದ ವಿಷಯ ಎಂದುಕೊಳ್ಳಬೇಕು 

ಒಬ್ಬ ಬರಹಗಾರನಾಗಿ ನನ್ನ ಪುಸ್ತಕಗಳಿಗೆ ಕನ್ನಡದ ಪ್ರಕಾಶನವನ್ನು ಹುಡುಕುತ್ತಿರುವಾಗ, ಇತ್ತೀಚಿಗೆ ಪುಸ್ತಕ ಪ್ರಕಟಿಸುವುದು ಕಷ್ಟ ಅದರಲ್ಲೂ ಕವನ ಸಂಕಲನ ವೆಂದರೆ ಓದುಗರು ಕಡಿಮೆಯಾಗಿದ್ದಾರೆ ಎಂದು ತಿಳಿದಾಗ ಮನಸ್ಸಿಗೆ ನೋವು ಉಂಟಾಗಿ ಬರಹಕ್ಕೆ ಬೆಲೆ ಇಲ್ಲವೇ ಎಂದು ಯೋಚಿಸುತ್ತಿರುವೆ.

ಬದುಕಿನ ಬವಣೆಯಲ್ಲಿ ಸಾಕಷ್ಟು ಮೋಸ ಮಾಡುವವರನ್ನು ನೋಡಿ, ಪ್ರೀತಿ, ಅಕ್ಕರೆ ಇದ್ದವರ ಒಡನಾಡಿಯಾಗಿ ,ಎಲ್ಲರಿಗೂ ಒಳ್ಳೆಯದನ್ನೇ ಮಾಡಿದರು, ಕುತಂತ್ರದಲ್ಲಿ ಸಿಲುಕುವಾಗ ಒಮ್ಮೊಮ್ಮೆ ಬೇಜಾರಾಗುತ್ತದೆ. ನನ್ನ ಜೀವನವನ್ನು ಕಾಯ್ದು ಕಾಪಾಡುತ್ತಿರುವ ದೇವರಿಗೆ ನನ್ನಯ ಪ್ರಣಾಮಗಳು. 

ನಾನಿರುವೆ ನಿನಗಾಗಿ 

ಜೀವನ ನೋವಿನ ಮಾಗಿ 

ಹೆದರಬೇಡ ಯಾರಿಗೂ 

ಮೋಸವು ಕೊನೆಯಾಗಿ 

ಬಾಳುವೆ ನೀ ಸುಖವಾಗಿ 

ನನ್ನ ಕಷ್ಟಕಾಲದಲ್ಲಿ ನನ್ನ ಬೆನ್ನೆಲುಬಾಗಿ ನಿಂತವರು , ಎಲ್ಲಾ ಗುರುಹಿರಿಯರಿಗೂ ನನ್ನ ವಂದನೆಗಳು. ಈ ಚುಟುಕು ಕವನ ಸಂಕಲನದ ಓದುಗರಿಗೆ, ನನ್ನನ್ನು ಸಾಹಿತ್ಯ ಕ್ಷೇತ್ರದಲ್ಲಿ ಪ್ರೋತ್ಸಾಹಿಸಿದವರಿಗೆ, ನನಗೆ ಪ್ರೀತಿ ಕೊಟ್ಟವರಿಗೆ ತುಂಬು ಹೃದಯದಿಂದ ಹರಸಿದವರಿಗೆ ನನ್ನ ಪ್ರೀತಿಯ ಧನ್ಯವಾದಗಳು. 


**********ಲೇಖಕರು***** 

ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

Comments

Popular posts from this blog

ಶಿಶು ಗೀತೆ -9

ಸಂತೋಷವಾಗಿರಲು ಪ್ರಯತ್ನಿಸೋಣ

ಚುಟುಕು ಕವನ-35