ಸಾಹಿತ್ಯ ದೀಪ್ತಿ -ಮಕ್ಕಳ ಗೀತೆ ಸಂಕಲನ




ಸಾಹಿತ್ಯ ದೀಪ್ತಿ 

ಮಕ್ಕಳ ಗೀತೆ ಸಂಕಲನ 

ಲೇಖಕರ ನುಡಿ 

ನನ್ನ ನಾಲ್ಕು ಕವನ ಸಂಕಲನ, ವ್ಯಕ್ತಿತ್ವ ವಿಕಸನ, ವಚನ ಸಂಕಲನದ ಪುಸ್ತಕಗಳನ್ನು ಬೆಳಕಿಗೆ ತಂದ ಮೇಲೆ, ನನ್ನ ಆಸಕ್ತಿಯು ಮಕ್ಕಳ ಗೀತೆಗಳ ಕಡೆ ಸೆಳೆಯಿತು. ಸಣ್ಣ ಮಕ್ಕಳುಗಳು ದೇವರಿಗೆ ಸಮ ಎಂದು ಹೇಳುತ್ತಾರೆ. ಮಕ್ಕಳ ಮನಸ್ಸು ಮುಗ್ಧ ಮನಸ್ಸು, ಪ್ರಪಂಚವನ್ನು ಅರಿಯದ ಮನಸ್ಸು, ಮತ್ತು ಮೋಸ ವಂಚನೆಗಳನ್ನು ತಿಳಿಯದ ಮನಸ್ಸು ಆ ಮಕ್ಕಳನ್ನು ನೋಡುವುದೇ ಚೆಂದ.

ನನಗೂ ಒಂದು ಮದುವೆಯಾಗಿ ಸಾಕಷ್ಟು  ನೋವುಗಳ ನಡುವೆ ಒಂದು ಹೆಣ್ಣು ಮಗು ಜನ್ಮ ತಾಳಿತು. ಕೆಲವರು ಗಂಡು ಮಗುವಾಗಿದ್ದರೆ ಚಂದ ಎಂದರು. ನನ್ನ ಅಮ್ಮ ಕೂಡ ಗಂಡು ಮಗುವಾಗಿ ಆಸೆ ಪಟ್ಟರು. ಎಲ್ಲವೂ ನಾವು ಅಂದುಕೊಂಡಂತೆ ನಡೆಯುವುದಿಲ್ಲ ನಾವು ಬಯಸುವುದು ಒಂದು, ಆದರೆ ಆಗುವುದು ಇನ್ನೊಂದು. ನನ್ನ ಮಗಳು ನನ್ನ ಸಾಕಷ್ಟು ನೋವಿನ ತದನಂತರ ಜನ್ಮ ತಾಳಿ ಬಂದವಳು ಅವಳನ್ನು ನಾನು ದೈವದ ಕರುಣೆ ಎಂದು ತಿಳಿದಿದ್ದೇನೆ. ಮಗಳು ಅಮ್ಮನ ಬಳಿ ಮಲಗಿನಿಂದ ಹಿಡಿದು ತೆವಳಿ, ಅಂಬೆಗಾಲಿಟ್ಟು , ನಡೆಯುವವರೆಗೆ ಮಗುವನ್ನು ನೋಡಿ, ಜೀವನವೇ ಸಾಕು ಎಂದು ಅನಿಸಿದವನಿಗೆ ಎಲ್ಲಾ ನೋವು ಮರೆತು ಮಗುವಿನೊಡನೆ ಮಗುವಂತೆ ಆಗಿಬಿಟ್ಟಾಗ ಈ ಪ್ರಪಂಚ ತುಂಬಾ ಸಂತೋಷ ಎನಿಸುತ್ತದೆ. 

ಈ ಜೀವನದ ಜಂಜಾಟದಲ್ಲಿ ಎಲ್ಲಾ ಜನರುಗಳ ಹಾಗೂ ಈ ವಿಲಾಸಿ ಬದುಕನ್ನು ಮತ್ತು ನಾನು ಬೆಳೆದು ಬಂದ ಜೀವನವನ್ನು, ದುಡಿಮೆಯಲ್ಲಿ ತೊಡಗಿದಾಗ ನಮ್ಮನ್ನು ಹರಸಿದವರು ಎಷ್ಟೋ ಜನ, ನಮ್ಮನ್ನು ತುಳಿಯುವ ಅಸೂಯೆ ,ದ್ವೇಷದ ಮನಸುಗಳು ಎಲ್ಲವನ್ನು ನೋಡಿದಾಗ. ಈ ಬದುಕು ಮತ್ತು ಜನರುಗಳ ಒಡನಾಟ ನಾನು ಅಂದುಕೊಂಡಂತೆ ಇಲ್ಲ , ಎಲ್ಲರೂ ನಮ್ಮವರು ಎಂದುಕೊಂಡಿದ್ದೆ , ಆದರೆ ನಮ್ಮವರೆಲ್ಲಿ ಅನಿಸಲು ಶುರುವಾಗುತ್ತದೆ. ಹಾಗೆಂದ ತಕ್ಷಣ ಎಲ್ಲರೂ ಆ ರೀತಿ ಇಲ್ಲ, ಕೆಲ ಮನಸ್ಥಿತಿಗಳು ಚೆನ್ನಾಗಿ ಇಲ್ಲ ಅನಿಸುತ್ತದೆ. ಒಮ್ಮೊಮ್ಮೆ ಯಾರು ಕೆಟ್ಟವರು, ಯಾರು ಒಳ್ಳೆಯವರು ತಿಳಿಯುವುದೇ ಕಷ್ಟ ಇಂಥ ಕ್ಷಣದಲ್ಲಿ ಕೆಲವು ಮಕ್ಕಳ ಗೀತೆಗಳನ್ನು ಓದಿ ನನ್ನ ಮಗಳನ್ನು ನೋಡಿ ನನಗನಿಸಿದ ವಿಷಯಗಳಿಗೆ ಪದಗಳ ರೂಪ ಕೊಟ್ಟು ಬರೆದ ಸಾಲುಗಳ ಗೀತೆಗಳೇ ಮಕ್ಕಳ ಗೀತೆ ಸಂಕಲನ. 

ನನಗೆ ತಿಳಿದಾಗೆ ಮಗಳ ತುಂಟಾಟ , ನಗು , ಅಳು, ಹೆದರಿಕೆ ಮತ್ತು ಬೆದರಿಕೆ ಎಲ್ಲವನ್ನು ನೋಡಿ. ಒಮ್ಮೊಮ್ಮೆ ಗದರಿದಾಗ ಅವಳನ್ನು ನೋಡಿ ಅಯ್ಯೋ ಅನಿಸುತ್ತದೆ. ಅವಳ ತುಂಟಾಟದ ಚೇಷ್ಟೆಯನ್ನು ನೋಡಿ ನಾಲ್ಕು ಒದೆ ಬಿಡೋಣ ಅನಿಸುತ್ತದೆ. ಅವಳ ಮುಗ್ಧತನ ನನ್ನನ್ನು ಕಾಡಿಬಿಡುತ್ತದೆ. ಸಾಕಷ್ಟು ಕೆಲಸದ ಒತ್ತಡಗಳ ನಡುವೆ ಅವಳ ಜೊತೆ ಕಾಲ ಕಳೆದ ಕ್ಷಣಗಳು ಸಂತಸ ತರುತ್ತದೆ. 

ನಾನು ಸಾಹಿತ್ಯ ಕ್ಷೇತ್ರದಲ್ಲಿ ಸಾಕಷ್ಟು ಆಯಾಮಗಳಲ್ಲಿ ಯೋಚನೆ ಮಾಡಿ, ಸಂಬಂಧ ಪಟ್ಟ ಪುಸ್ತಕಗಳನ್ನು ಓದಿ ಬರೆಯಲು ಶುರು ಮಾಡಿದಾಗ, ಕೆಲವು ಪದಗಳ ಸಾಲುಗಳು ಬರವಣಿಗೆ ರೂಪ ತಾಳಿ ಹುಟ್ಟಿದ ಗೀತೆಗಳ ಸಂಗ್ರಹವೇ ಸಾಹಿತ್ಯ ದೀಪ್ತಿ. ಈ ಗೀತೆಗಳು ನನ್ನ ಬದುಕಿನ ಹೊಸ ಆಯಾಮ ಹಾಗೂ ನನ್ನ ಮಗಳು ದೀಪ್ತಿ ನನ್ನ ಬಾಳಲ್ಲಿ ಬಂದ ಹೊಸ ಬೆಳಕಿನ ದೀಪ. ನನ್ನ ಬದುಕಿನ ಸಂತಸ ನೋವಲ್ಲು ಖುಷಿ ತಂದವಳು ಎಂದು ಕೊಳ್ಳುತ್ತೇನೆ. 

ನನ್ನ ಬಾಳಿನ ಉತ್ಸಾಹದ ದೀಪ್ತಿ 

ಹೊಸ ಬೆಳಕಿನ ಜ್ಞಾನದ ಪ್ರಾಪ್ತಿ 

ಎದೆಯೊಳಗೆ ಅವಿತು ಕೂತ ಮಗು 

ಹೊರಬಂದ ಜೀವ ಸೆಲೆಯ ನಗು 

ಸುಗಮವಾಗಿರಲಿ ನೀ ನಡೆವ ದಾರಿ 

ದೇವರ ದಯೆಯಲ್ಲಿ ಬಾಳು ನೀನು ಪ್ರತಿ ಬಾರಿ 

ನಿನ್ನ ಬದುಕು ಸಾಗಲಿ ಸಂತಸವ ಸಾರಿ 


ಮಕ್ಕಳ ಗೀತೆಯನ್ನು ಬರೆಯಲು. ಸ್ಪೂರ್ತಿಯಾದ ಪುಸ್ತಕಗಳಿಗೆ ಮತ್ತು ನನ್ನ ಮನೆಗೆ ಹಾಗೂ ಮನಕೆ ಬಂದ ನನ್ನ ಮಗಳು ದೀಪ್ತಿಗೆ ಮತ್ತು ತಾಯಿ ಪ್ರತಿಭಾ ಹಾಗೂ ನನ್ನ ಅಮ್ಮನಿಗೆ ಧನ್ಯವಾದಗಳು ತಿಳಿಸುತ್ತಾ. ಈ ನನ್ನ ಪುಟ್ಟ ಮಕ್ಕಳ ಗೀತೆಗಳ ಪುಸ್ತಕದ ಪ್ರಯತ್ನ ಹೆಚ್ಚು ಜನಮನ ತಲುಪಲಿ ಎಂದು ಬೇಡುತ್ತಾ.ಈ ಪುಸ್ತಕದ ಓದುಗರಿಗೆ ಹಾಗೂ ಅಭಿನಂದಿಸಿದವರಿಗೆ ಹಾರೈಸಿದವರಿಗೆ ವಂದಿಸುತ್ತಿದ್ದೇನೆ.


*****ಇಂತಿ ನಿಮ್ಮ ಪ್ರೀತಿಯ***


ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

Comments

Popular posts from this blog

ಶಿಶು ಗೀತೆ -9

ಸಂತೋಷವಾಗಿರಲು ಪ್ರಯತ್ನಿಸೋಣ

ಚುಟುಕು ಕವನ-35