ಮಕ್ಕಳ ಗೀತೆ -47
🌹ಊರು ಮಾರಮ್ಮ 🌹
ಮಾರಮ್ಮ ಬಂದವಳೇ
ಊರು ಮಾರಮ್ಮ ಬಂದವಳೇ
ಕಾಸಿನ ಅಗಲ ಕುಂಕುಮವಿಟ್ಟು
ಹಸಿರು ಸೀರೆ ತೊಟ್ಟು ನಿಂತವಳೇ
ಈ ಬಾರೋ ಸಾಹುಕಾರ
ನಿನ್ನ ಮನೆಯಲ್ಲಿ ಶುಭ ಶಕುನವಿದೆ
ಎಂದೆನುತ ಚಾಟಿಯ ಸುತ್ತಿ ಮೈ ಮೇಲೆ
ಒಡೆದು ಕೊಂಡವಳೆ
ಹಾಕಿರಿ ಅಣ್ಣ ಅಕ್ಕ ಕಾಣಿಕೆಯ
ನಿಮ್ಮ ಊರಲ್ಲಿ ಪರಶಿವನ
ದೈವದ ಅನುಗ್ರಹವಿದೆ
ದೈವದ ಬಲವು ತೋರಿದೆ ಒಲವು
ಅಕ್ಕ ತಂಗಿ ಬನ್ರವ್ವ ಮಾರಮ್ಮ ಬಂದವಳೇ
ಕೈಯಿಂದ ದುಡ್ಡಾಕಿ ಇಲ್ಲ ದವಸಾ ಧಾನ್ಯ
ಮಾರಮ್ಮನಿಗೆ ನೀಡಿರವ್ವ
ನಿಮ್ಮ ಬಾಳು ಬೆಳಗಲಿ ಅಣ್ಣ ಅಕ್ಕ ತಂಗಿ ತಮ್ಮ
ಬನ್ರವ್ವ ಮಾರಮ್ಮ ಬಂದವಳೇ
**********ರಚನೆ**********
ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ
Comments
Post a Comment