ಮಕ್ಕಳಗೀತೆ-46
🌹ಹಾಲಕ್ಕಿ ನುಡಿದೈತಿ 🌹
ಬುಡುಬುಡಿಕಿ ಬಂದಿವ್ನಿ
ರಾತ್ರಿಯ ವೇಳೆ ಜಾವ ಕಟ್ಟಿ
ಸುಡುಗಾಡಿನಲ್ಲಿ ಹಾಲಕ್ಕಿ ನುಡಿದೈತೆ
ಕೇಳ್ರವ್ವ ಕೇಳಿ ಹಾಲಕ್ಕಿ ನುಡಿದೈತೆ ಹಾಲಕ್ಕಿ ನೋಡಿದೈತೆ
ಈ ಮನೆಯ ಯಜಮಾನನಿಗೆ
ಶನಿ ವಕ್ಕರಿಸಿ ಕೊಂಡೈತಿ
ಮನೆ ತುಂಬಾ ಅಶಾಂತಿ ತುಂಬೈತಿ
ಅಸೂಯೆಯ ಮನಸುಗಳು ಈ ಮನೆಯ ಯಜಮಾನನ ಕಾಡೈತೆ
ಕೇಳ್ರವ್ವ ಕೇಳಿ ಹಾಲಕ್ಕಿ ನುಡಿದೈತಿ
ಪಲ್ಲಿಯೂ ಕೂಡ ಅಪಶಕುನ ಎಂದೈತಿ
ಈ ಮನೆಯಲ್ಲಿ ಶಾಂತಿ ನೆಲೆಸಬೇಕೆಂದರೆ
ಮನೆದೇವ್ರು ನೆನೆಯಮ್ಮ
ಮನೆಯ ದೇವರ ಪೂಜಮ್ಮ
ಈ ಮನೆಗೆ ಆ ದೇವರು ಶಾಂತಿಯನ್ನು ನೀಡುತ್ತಾನೆ
ಬುಡುಬುಡಿಕಿ ಬಂದಿವ್ನಿ
ರಾತ್ರಿಯ ವೇಳೆ ಜಾವ ಕಟ್ಟಿ
ಸುಡುಗಾಡಿನಲ್ಲಿ ಹಾಲಕ್ಕಿ ನುಡಿದೈತೆ
ಕೇಳ್ರವ್ವ ಕೇಳಿ ಹಾಲಕ್ಕಿ ನುಡಿದೈತೆ ಹಾಲಕ್ಕಿ ನೋಡಿದೈತೆ
**********ರಚನೆ*********
ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ
Comments
Post a Comment