ಮಕ್ಕಳ ಗೀತೆ -49
ಬೆಳಕು ದೀಪ
ನೀನು ತಾನೇ ಸಣ್ಣ ದೀಪ
ನೋಡಿ ಅಯ್ಯೋ ಪಾಪ
ಒಂಟಿ ಕಣ್ಣಲ್ಲಿ ಅಳುವೆ
ಜಗವ ಬೆಳಗುತಿರುವೆ
ನಿನ್ನ ಕಂಡು ಭಯ ಕತ್ತಲೆಗೆ
ಬೆಳಕು ಕೊಟ್ಟು ನೀ ಸುಟ್ಟಿರುವೆ
ಸತ್ಯಶಕ್ತಿ ನಿನ್ನಯ ರೂಪ
ದಿವ್ಯತೆಗೆ ನೀನೆ ಸ್ವರೂಪ
ಕತ್ತಲೆ ಎಂಬ ಮುಳ್ಳು ಕಳೆದು
ಬೆಳಕು ಎಂಬ ನದಿ ಹರಿದು
ಕಪಟ ಮೋಸ ಮಾಯವಾಯಿತು
ಸತ್ಯಕ್ಕೆ ಬೆಳಕು ದಾರಿಯಾಯಿತು
ಧರ್ಮಕ್ಕಾಗಿ ನಿನ್ನ ಜನನ
ಅಧರ್ಮವು ನಿನ್ನಿಂದ ಮರಣ
ಭವ್ಯ ನಾಡು ಬೆಳಗು ನೀನು
ಅನಂತ ಚೇತನವಾಗು ನೀನು
**********ರಚನೆ*********
ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ
ಮರೆಯದೇ ತೆರೆದು ನೋಡಿರುವೆವು, ದೀಪದ ದನಿ ಕೇಳಿಸಿತು ಸೊಗಸಾದ ರಚನೆ, ಶುಭವಾಗಲಿ ಪಯಣ💐
ReplyDelete