ಮಕ್ಕಳ ಗೀತೆ -45
🌹ಕೆಟ್ಟ ಅಭ್ಯಾಸಗಳು ಒಳ್ಳೆಯದಲ್ಲ 🌹
ಅಪ್ಪನ ಜೇಬಲ್ಲಿ ದುಡ್ಡು ಕದ್ದು
ಓಡಿದ ಗುಂಡನ್ನು ಅಂಗಡಿಗೆ
ಅಂಗಡಿ ಅಣ್ಣನ ಬಳಿ ಕೇಳಿದ
ಪಾನ್ ಪರಾಗ್ ಸಿಗುವುದು ಎಷ್ಟು ರೂಗೆ
ದುಡ್ಡನ್ನು ಕೊಟ್ಟು ಪಾನ್ ಪರಾಗ್ ಕೊಂಡು
ನಡೆದನು ಗುಂಡನು ಶಾಲೆಯೆಡೇ
ಅವಸರದಿ ಮರೆತು ಚಿಲ್ಲರೆ ಬಿಟ್ಟು
ಹೊರಟನು ಅಂಗಡಿಯಿಂದ ದೂರ ನಡೆ
ಶಾಲೆಯಲ್ಲಿ ಪೋಲಿ ಹುಡುಗರು ಒಂದೆಡೆ
ಗುಂಡನ ಪಾನ್ ಪರಾಗ್ ತಿಂದರೂ ಶಾಲೆಯ ಸೂರಿ ನಡೆ
ದಾರಿಯ ಬದಿ ಗುಂಡ ನೋಡಿದ ಬೀಡಿ ತುಂಡು
ತೆಗೆದು ಬೀಡಿ ಹಚ್ಚಿದ ಗುಂಡ ಬಲು ಮೊಂಡು
ಗುಂಡಾ ಬಂದು ಶಾಲೆಯಲ್ಲಿ ಕೂತ ಮೂಲೆಯಲ್ಲಿ
ಗುರುಗಳು ಕರೆದು ಪುಸ್ತಕ ಕೊಟ್ಟರು ಕೈಯಲ್ಲಿ
ಗುಂಡಾ ಬಾಯಿ ಬಿಡಲು ವಾಸನೆ ಬಾಯಿ ತುಂಬಾ
ಗುರುಗಳು ಚಾಟಿ ಏಟು ಬಿಟ್ಟರು ಮೈತುಂಬ
ವಿಷಯ ತಿಳಿದು ಅಮ್ಮನ ಶಾಲೆಗೆ ಬಂದಿಹಳು
ಗುಂಡನ ಕೊರಳ ಪಟ್ಟಿ ಹಿಡಿದು ಮನೆಗೆ ಎಳೆದಿಹಳು
ಮನೆಗೆ ಬಂದ ಅಪ್ಪನ ಜೇಬಲ್ಲಿ ನೋಡಲು ದುಡ್ಡಿಲ್ಲ
ಗುಂಡನ್ನು ತಿಂದ ಪಾನ್ ಪರಾಗ್ ಎಂಬುದು ಅಪ್ಪಗೆ ತಿಳಿತಲ್ಲ
ಗುಂಡ ನೊಂದನು ತಿಂದು ಒದೆಯನ್ನು
ನೋವಲಿ ಬೆಂದು ಬೇಡಿದ ಅಮ್ಮನನ್ನು
ಹಣವನ್ನು ನಾನು ಕದಿಯಲಾರೆ ಇನ್ನೂ ಮುಂದೆ
ಒಳ್ಳೆಯ ಬುದ್ದಿ ಕೊಡು ಎಂದು ಬೇಡಿದ ದೇವರನು.
*********ರಚನೆ*********
ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ
Comments
Post a Comment