ಮೋಡದ ಮಂಜು- ಕವನ ಸಂಕಲನ
ಮೋಡದ ಮಂಜು
ಕವನ ಸಂಕಲನ
ಲೇಖಕರ ನುಡಿ
ನನ್ನ ಬರವಣಿಗೆಯ ಹಾದಿಯಲ್ಲಿ ಆರನೇ ಕವನ ಸಂಕಲನದ ಪುಸ್ತಕ ಮೋಡದ ಮಂಜು, ಬಾನಲ್ಲಿ ಮೋಡದ ಹವಾಮಾನವಾಗಿ ಮಳೆಯು ಭೂಮಿಗೆ ಬಿದ್ದಂತೆ ಕವನಗಳು ಮೂಡಿಬಂದಿವೆ
ನೀರಿನ ಹನಿ ಆವಿಯಾಗಿ
ಮೋಡವ ಕರೆದು ಕೂಗಿ
ಮೋಡದಿ ಸಿಡಿಲು ಸಿಡಿದು
ಮಿಂಚೊಂದು ಭೂಮಿತಾಗಿ
ಮಳೆ ಹನಿ ಕಣ್ಣೀರಾಗಿ ಭೂಮಿ ತಾಗಿದೆ
ಕಣ್ಣಿಗೆ ಕಾಣದ ಭಾವನೆಗಳಿಗೆ ಬಣ್ಣ ಕೊಟ್ಟು ಅವುಗಳು ಪದಗಳ ರೂಪ ತಾಳಿ ಹೃದಯ ಮಿಡಿದ ಸಾಲುಗಳಿಗೆ ಮನಸ್ಸು ಕುಣಿದಿದೆ. ಭಾರತೀಯ ಕಾವ್ಯಮೀಮಾಂಸೆ ಪ್ರಕಾರ ಕವಿತೆ ಎಂದರೆ ಭಾವನೆಗಳನ್ನು ತರಂಗಿತಗೊಳಿಸಿ ನಮಗೆ ರಸಾನುಭೂತಿಯನ್ನು ಒದಗಿಸುವ ಛಂದೋಬದ್ದ ಅಥವಾ ಲಯಬದ್ಧ ಶಾಬ್ದಿಕ ರಚನೆಯೇ ಕವಿತೆ.
ಕಾವ್ಯದ ಸ್ವರೂಪ ಲಕ್ಷಣಗಳು ಕಾಲಘಟ್ಟದಲ್ಲಿ ಬದಲಾಗುತ್ತಾ ಬಂದಿವೆ ಪ್ರಾಚೀನ, ಪ್ರಗತಿಪರ, ನವ್ಯ ಎಂದು ಈ ಕಾಲಮಾನದ ಕಾವ್ಯ ಅಥವಾ ಕವನಗಳನ್ನು ಕವಿಯು ರಚಿಸುವಾಗ ಲಯಬದ್ಧವಾಗಿದೆ ಮತ್ತು ಛಂದಸ್ಸು ಮುಕ್ತವಾಗಿದೆ ಎಂದು ತಿಳಿಯಬಹುದು.
ನಾನು ಕವಿಯಾಗಿ ಈ ಕಾಲಘಟ್ಟಕ್ಕೆ ಸಂಬಂಧಪಟ್ಟ ಕವನಗಳನ್ನು ರಚಿಸಲು ಉತ್ಸಾಹ ತೋರಿದ್ದೇನೆ ಕವನಗಳು ಸಾಲುಗಳಲ್ಲಿ ಪ್ರಾಸಭದ್ಧ ಪದಗಳನ್ನು ಕೊನೆಯಲ್ಲಿ ಉಪಯೋಗಿಸುವುದು ಬಿಡುವುದು ಕವಿಗೆ ಬಿಟ್ಟದ್ದು.
ಇತ್ತೀಚಿನ ಕವನಗಳು ಪ್ರಾಸಕ್ಕೆ ಒತ್ತುಕೊಡದೆ ಬರೆದಿರುವುದನ್ನು ನಾವು ಗಮನಿಸಬಹುದು.
ಕವನ ಬರೆದೆ ಉಪಯೋಗಿಸಿ ಪ್ರಾಸ
ಪ್ರಾಸ ಇರದೇ ಇದ್ದಲ್ಲಿ ಕೇಳುವುದು ತ್ರಾಸ
ಕವನ ಬರೆಯಬೇಕು ಇದ್ದಂತೆ ಉಸಿರಿನ ಶ್ವಾಸ
ಚಿಗುರುಗಳು ಚುಮ್ಮಿ ಬರುವುದು ವಸಂತ ಮಾಸ
ಬರೆದ ಸಾಲುಗಳು ಅರ್ಥಪೂರ್ಣವಾಗಿ ಕೇಳಲು ಹಿತವಾಗಿ ಭಾವನೆಗಳು ತುಂಬಿ ಅರ್ಥಗರ್ಭಿತವಾಗಿದ್ದರೆ ಕವನಗಳು ಸಾರ್ಥಕ ರೂಪವನ್ನು ಪಡೆಯುತ್ತವೆ ಎಂದು ತಿಳಿಯಬಹುದು. ನನ್ನ ಕವನಗಳಲ್ಲಿ ಭಾರತೀಯ ಕಾವ್ಯಮೀಮಾಂಸೆ ಲಕ್ಷಣಗಳನ್ನು ಸರಿಯಾಗಿ ಉಪಯೋಗಿಸಿದ್ದೇನೋ ಇಲ್ಲವೋ ತಿಳಿಯದು. ನನ್ನ ಭಾವನೆಗಳಿಗೆ ಪದಗಳ ರೂಪ ಕೊಟ್ಟು ಕವನವಾಗಿಸಿದ್ದೇನೆ ಎಂದು ನೀವು ಅರಿಯಬಹುದು.
ಪದಗಳಿಗೆ ರೂಪ ಕೊಟ್ಟೆ
ಕವನಗಳನ್ನು ಬರೆದುಬಿಟ್ಟೆ
ನೂರುಕವನ ತೋರಿಸಿಬಿಟ್ಟೆ
ನ್ಯಾಯ ನೀತಿ ಹೇಳಿಬಿಟ್ಟೆ
ಮೋಸ ಅನ್ಯಾಯ ಸತ್ಯಧಿ ಸುಟ್ಟೆ
ಜೇಡರ ಬಲೆಯಲ್ಲಿ ಸಿಕ್ಕಿಬಿಟ್ಟೆ
ಬರೆದ ಬರಹ ತುಂಬಿಸುವುದೇ ನನ್ನ ಹೊಟ್ಟೆ
ನನ್ನ ಬರವಣಿಗೆಯ ಪದಗಳು ಕವನಗಳಾಗಿ ಕವನಗಳು ಪುಸ್ತಕವಾಗಿ ಜನರ ಮುಂದೆ ತಂದು ತೆರೆದಿಟ್ಟಾಗ ಒಂದೆಡೆ ಸಂತೋಷ ಹಾಗೂ ಭಾವನೆಗಳ ನೋವು ನನ್ನಲ್ಲಿ ಕಣ್ಣೀರು ಬಂದಂತಾಗುತ್ತದೆ. ಹೀಗೆ ನನ್ನ ನೋವು, ಸಂತೋಷ, ಗೆಲುವು, ಸೋಲು, ದುಃಖ ಎಲ್ಲವನ್ನು ನಾನು ಕವನವಾಗಿಸಿ ನಿರಾಳನಾಗುತ್ತೇನೆ. ಆದರೂ ಮಾನಸಿಕವಾಗಿ ನೆಮ್ಮದಿ ಹುಡುಕುತ್ತಾ ಹೊಸತನಕ್ಕೆ ಅಲೆದಾಡುವ ಅಲೆಮಾರಿಯಾಗಿದ್ದೇನೆ.
ಹೊಸತು ಹುಟ್ಟಿತೆ ನನ್ನಲ್ಲಿ
ಕನಸು ಕಾಣತ ಕಣ್ಣಲ್ಲಿ
ಪ್ರೀತಿ ಮೊಳಕೆಯೊಡೆದಿತೆ ಹೃದಯದಲ್ಲಿ
ಕನಸು ನನಸಾಗೀತೆ ಮನದಲಿ
ಕಾವ್ಯವಾಯಿತೇ ಭಾವ ತುಂಬಿದ ಪದಗಳಲ್ಲಿ
ಈಗ ನನ್ನ ಬರಹ ಸುಮಾರು ಪುಸ್ತಕಗಳಾಗಿ ಹೊರಬಂದು ಓದುಗರನ್ನು ತಲುಪಿರುವುದು ತುಂಬಾ ಖುಷಿಯ ವಿಚಾರ ನನ್ನ ಪುಸ್ತಕಗಳು ಇನ್ನೂ ಹೆಚ್ಚು ಜನ ಮನ ತಲುಪಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದೇನೆ.
*****ಇಂತಿ ನಿಮ್ಮ ಪ್ರೀತಿಯ****
ಡಾ. ಚಂದ್ರಶೇಖರ್, ಚನ್ನಾಪುರ ಹಾಲಪ್ಪ
Comments
Post a Comment