ಮಕ್ಕಳ ಗೀತೆ -48
ನಿನ್ನವರಾರು ಇಲ್ಲಿ
ಒಲವಿನ ಗಿಣಿಯೇ ಹೇಳು ಕಣಿಯ
ನಿನ್ನವರಾರು ಇಲ್ಲಿ
ಬದುಕಲ್ಲಿ ಬೆರೆತು ಸೂರ್ಯಕಾಂತಿಯ
ತಿನ್ನುತ ಕೂತೆ ಅಲ್ಲಿ
ಚಿಲಿಪಿಲಿ ಹಕ್ಕಿಯೇ ಹಾರುವ ಹಕ್ಕಿಯೇ
ನಿನ್ನವರಾರು ಇಲ್ಲಿ
ಮರದ ಕೊಂಬೆಯ ಮೇಲೆ ಕೂತು
ಹುಡುಕಿದೆ ನನ್ನವರನ್ನು ಇಲ್ಲಿ
ಕರಿಯ ಕಾಗೆಯೆ ಕೂಗುವ ಕಾಗೆ ಯೇ
ನಿನ್ನವರಾರು ಇಲ್ಲಿ
ಕರೆಂಟ್ ಕಂಬದಿ ಕೂತು ಕೂಗುತ
ಕಂಡೆ ನನ್ನವರ ಇಲ್ಲಿ
ನಾಗರಹಾವೆ ಬಸು ಬುಸು ಹಾವೇ
ನಿನ್ನವರಾರು ಇಲ್ಲಿ
ಸಿಕ್ಕರೆ ಒಡೆವರು ಅಕ್ಕರೆಯಲ್ಲಿ ಪೂಜಿಸುವರು
ಹೇಗೆ ಹೇಳಲಿ ನನ್ನವರಾರು ಇಲ್ಲಿ
ಹಾರುವ ಹದ್ದೆ ಮೇಲೆ ಏರುವ ಹದ್ದೆ
ನಿನ್ನವರಾರು ಇಲ್ಲಿ
ಮೇಲಿಂದ ಬಂದು ಮೀನನ್ನು ತಿಂದು
ಕೂಗಿಹೆ ನನ್ನವರನು ಇಲ್ಲಿ
ಕಪ್ಪನ ಕರಡಿಯೆ ಬೆಪ್ಪನೆ ಕರಡಿಯೆ
ನಿನ್ನವರಾರು ಇಲ್ಲಿ
ಮನುಷ್ಯನ ಬುರುಡೆ ಬಗೆದಿಹೆ
ಸಾವಲಿ ಕಾಣೆ ನನ್ನವರ ಇಲ್ಲಿ
*********ರಚನೆ***********
ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ
Comments
Post a Comment