Posts

Showing posts from February, 2021

☘️🌷ಚೆಲುವು ☘️🌷

 ಈ ನಿನ್ನ ಚೆಲುವು  ಇಡಿಸಿತು ನನಗೆ ಒಲವು  ಒಲವಿಂದ ನಾ ಬಂದೆ  ಛಲದಲ್ಲಿ ನೀ ನಿಂದೆ  ನಸುನಕ್ಕು ಬರುತಿರಲು  ನನ್ನನ್ನು ನೀ ಕಂಡು  ನೀ ದೂರ  ನಿಂತೆ  ನಿನ ನೋಟ ಬಲು ಸೊಗಸು  ನಾ ಕಂಡೆ ಬರಿ ಕನಸು  ನಿನ್ನಂದೆ  ನಾ ಬರಲು  ಕಾರ್ಮೋಡ ಸರಿದು  ಮಿಂಚೊನ್ದು ಬಳಿ ಬಂದು  ಈ ಧರೆಗೆ ಮಳೆ ಹನಿಯು ಬಿದ್ದಂತೆ  ಮರಗಿಡವು ಹಸಿರಾಗಿ  ನೀ ನನ್ನ ಊಸಿರಾಗಿ  ಬಳಿ ಬಂದು ನಿಂತೆ  ನಿನ್ನನ್ನು ನಾ ಕಂಡು ಸೋತೆ  *********ರಚನೆ******** ಡಾ. ಚಂದ್ರಶೇಖರ. ಸಿ. ಹೆಚ್ 

👳ಶಿಕ್ಷಕ👳

  ಗುರುವಿಲ್ಲದ ಮನಸ್ಸು  ಗುರಿಯಿಲ್ಲದ ಜೀವನ  ಶಿಕ್ಷಣವಿಲ್ಲದ ಬದುಕು  ಸೂರಿಲ್ಲದ ಶಾಲೆ  ಒಲವಿಲ್ಲದ ಪ್ರೀತಿ  ನಡತೆಯಿಲ್ಲದ   ನುಡಿಯು  ಪದಗಳೀಲ್ಲದ  ಹಾಳೆ  ಶಾಯಿ ಇಲ್ಲದ ಲೇಖನಿ  ಕುರಡಾದ ಒಳ ಕಣ್ಣು  ವಿದ್ಯೆ ಇಲ್ಲದ ತಲೆಯು  ಪಸಲು ಇಲ್ಲದ ಬೆಳೆಯು  ಹಣವಿಲ್ಲದ ಮನುಷ್ಯ  ಸಮಾಜದ ಒಳಿತಿಗೆ  ಪ್ರೇರಣೆಯಾಗ ಬಲ್ಲದೆ? ? ? ?? ???  **********ರಚನೆ ******* ಡಾ. ಚಂದ್ರಶೇಖರ. ಸಿ. ಹೆಚ್ 

❤❤ಹೃದಯದ ಗಾಯ ❤❤

 ಹರೆಯದ ಹೃದಯಕೆ                   ಗಾಯವು ಹಾಗಿದೆ  ಮರೆಯದ ಮನಸ್ಸು                   ಮಾಯವು ಹಾಗಿದೆ  ನಿನ್ನಯ ಕನಸಲಿ               ಮನಸ್ಸು ಮುಳುಗಿದೆ  ಪ್ರೀತಿಯ ನೆಪದಲ್ಲಿ                ನೀ ಬಳಿ ಬಂದೆ  ನನ್ನಯ ಜೀವನ                   ಇರಿದು ಕೊಂದೆ  ಪ್ರೀತಿಯ ನೋವು                   ತಾಕೀತು ಮನಕೆ  ಹೃದಯಕೆ ಗಾಯವು                   ಹಾಯಿತು ಕೊನೆಗೆ  ಅರಿಯದ ಮನಸ್ಸಿಗೆ                  ಏನೋ ಚಿಂತೆ  ಸಾವನ್ನು  ಕೂಡ                  ಗೆದ್ದು ಬಂದಂತೆ  ನಿನ್ನನು ಕಂಡು                  ಸೊಲೇನು ನಾನು  ಸೋತರು ಕೂಡ                  ಗೆಲ್ಲುವೆ  ನಾನು  ಮನದ ಯಾತನೆ                  ಮೂಗಿಯಿತು ಕೊನೆಗೆ  ಈ ಸಾಲುಗಳನು ನಾ                   ಬರೆದೇನು ನಿನಗೆ  ************ರಚನೆ ********* ಡಾ. ಚಂದ್ರಶೇಖರ. ಸಿ. ಹೆಚ್ 

⭐️⭐️ಅಸೆ ಮೂಡಿದೆ ⭐️⭐️

 ಬದುಕುವ ಆಸೆ ಮನದಿ ಮೂಡಿದೆ  ನಿನ್ನನು ನೋಡುವ ಅಸೆ ಹಾಗಿದೆ  ನಿನ್ನನು ಕಂಡು ಅರಳಿತು ಮನಸ್ಸು  ಮೂಡಿತು ನನಗೆ ಪ್ರೀತಿಯ ಕನಸ್ಸು  ನೀನು ಬಂದು ಸೆರೆಲು ಬಳಿಗೆ  ನನ್ನನೆ ನಾನು ಕೊಡುವೆ ನಿನೆಗೆ  ಪ್ರೀತಿಯ ಬದುಕು ಕಟ್ಟು ನೀನು  ಜೊತೆಯಾಗಿ ನಿಲ್ಲುವೆ ನಾನು  ಜೀವನ ಪಯಣದಿ ಸಾಗುವ ದೂರ  ಕಷ್ಟಗಳ ಸವೆಸಿ ಹೋರಾಡೋಣ ಹೊತ್ತು ಬಾರ  ನನ್ನ ಸಂಗಡ ಇರಲು ನೀನು  ಆನೆಯ ಶಕ್ತಿ ಬಂದಂತೆ ಇನ್ನು  ನನ್ನಯ ಪ್ರೀತಿಗೆ ನೀನೆ ರಾಣಿ  ನಿನ್ನಯ ಒಲವಿಗೆ ನಾನೇ ರಾಜ  ಸಾಗುವ ನಾವು ದೂರ  ಹೊತ್ತು ನೋವಿನ ಬಾರ  ನಿನ್ನಯ ಪ್ರೀತಿಗೆ ನಾ ಸರದಾರ  ********ರಚನೆ ********* ಡಾ. ಚಂದ್ರಶೇಖರ. ಸಿ. ಹೆಚ್ 

🙏🙏ಸಣ್ಣ ಕವನಗಳು-10🙏🙏

 🌹ಗುಲಾಬಿ  🌹 ಬದುಕೆಂಬ ಬರಿ ದಾರಿಯಲ್ಲಿ  ಅರಳಿತು ಗುಲಾಬಿ  ಮುಳ್ಳೊಂದು ದಾರಿಯಲ್ಲಿ  ಬದುಕನ್ನು ಕಟ್ಟಿತು ಸವಿಯಾಗಿ  👸🥀ಹೃದಯ 👸🥀 ಬರೆಯುವೆ ನಾನು ಮರೆಯದ ಕವಿತೆ  ಕೊಡುವೆಯ ನೀನು ಹೃದಯವ ವನಿತೆ  ತೋರುವೆಯೇನು ನಿನ್ನಯ ಖುಷಿಯ  ಹೇಳುವೆ ನಾನು ಪ್ರೀತಿಯ ಕಥೆಯ  ನೀ ನೋಡಲು ನನ್ನ ಮಿಂಚಿತು ಹೃದಯ  ನಾ ಕೇಳಲೇ ನಿನ್ನ ಪ್ರೀತಿಯ  ಸಹಿಯ  ಇಂತಿ ನಿನ್ನ ಪ್ರೀತಿಯ ಹೃದಯ  ********ರಚನೆ ******* ಡಾ. ಚಂದ್ರಶೇಖರ. ಸಿ. ಹೆಚ್      

🙎🏼‍♀️ಓಹೋ ಗೆಳತಿ 🙎🏼‍♀️

ನಲುಮೆಯ ಗೆಳತಿ                ಹೃದಯಕ್ಕೆ ಒಡತಿ  ಮಾತಲ್ಲಿ ಗೆದ್ದ                 ಮನಸ್ಸನು ಕದ್ದ  ಸೊಲ್ಲಿಂದ ಎದ್ದ          ಹದಿಹರೆಯದ ಯುವತಿ  ಓಹೋ ನನ್ನ ಗೆಳತಿ................  ಚಿಂತೆಯಲ್ಲಿ ನೀನಿಲ್ಲ            ಗೆಲುವೇ ನೀನದೆಲ್ಲ  ಬಹುಮಾನ ಬಯಸಿಲ್ಲ            ಜೀವನವು ಸೊಗಸೆಲ್ಲ  ಓಹೋ ನನ್ನ ಗೆಳತಿ................ ಆಸೆಗಳು ನೂರು               ಸೋರುತಿಹ ಸೂರು  ಮಳೆ ಬಂದ ನೀರು               ಕನಸುಗಳು ಚೂರು  ಜೋತಾಡ ಜೋಪಡಿಗೆ                ದೇವರ ಅ ಗುಡಿಗೆ  ಕೈ ಮುಗಿದು ಬೇಡು   ದೇವರೇ ಖುಷಿಯನ್ನು ನೀಡು  ಓಹೋ ನನ್ನ ಗೆಳತಿ................    ಏನಿದು ಜೀವನ         ಬಡತನವೇ ಅವಮಾನ     ಸೋತಿದೆ ನಯನ                 ಸೆಳೆಯಲು ಗಮನ  ದೃತಿಗೆಡೆದೆ ಬಾಳಲ್ಲಿ        ಬೇಯುತಿರುವೆ ನೋವಲ್ಲಿ  ಹೋರಾಡಿ ಬದುಕುವೆಯ                ಬಡತನವ ಗೆಲ್ಲುವೆಯ  ನಿಟ್ಟುಸಿರು ಬಿಟ್ಟು                     ಕಷ್ಟಗಳ ಸುಟ್ಟು  ಉಸಿರನ್ನು ಪಣಕ್ಕಿಟ್ಟು      ಗೆಲ್ಲು ಜೀವನದ ಗುಟ್ಟು ಓಹೋ ನನ್ನ ಗೆಳತಿ................ *********ರಚನೆ ******** ಡಾ. ಚಂದ್ರಶೇಖರ. ಸಿ. ಹೆಚ್

🎖️🎖️ಬಂಗಾರ 🥇🥇

ಬೆಂಗಾಡು ಹೃದಯಕ್ಕೆ                 ಬಂಗಾರವ ತಂದೆ  ಸದ್ದಿಲ್ಲದೇ ಮನಸ್ಸಲ್ಲಿ           ಹೊಸ ಕನಸಾಗಿ ನಿಂದೆ   ಹೆಜ್ಜೆಯ ಸದ್ದಿಗೆ                ಗೆಜ್ಜೆಯು ಕುಣಿದಿದೆ      ನೋಟವು ಯಾಕೋ               ಮೈಮನ ಸೆಳೆದಿದೆ  ಕುಣಿಯುವ ಅಸೆ                  ನನ್ನನು ಕರೆದಿದೆ  ನಾಟ್ಯಾಕೆ ಏನೋ                  ಬೆರಗು ಬಂದಿದೆ  ತಂಗಾಳಿಯಲ್ಲಿ ತೇಲಿ                  ನನ್ನನ್ನು ಸೋಕಿದೆ  ನಿನ ಮೇಲೆ ನನಗೆ                  ಪ್ರೀತಿಯು ಹಾಗಿದೆ  ಸನಿಹಕ್ಕೆ ನೀ ಬಂದೆ                 ಹಿತವನ್ನು ಕರೆತಂದೆ  ಬೇಸಿಗೆಯಲ್ಲೂ ಕೂಡ        ಚಳಿಯೊಂದು ಬಳಿ ಬಂದು  ತಾಕಿರಲು  ನೀನು         ಸೋಥೋದೆ ನಾನು  ಪ್ರೀತಿಯ ಜೇನು               ಸವಿದಂತೆ  ಇನ್ನು  ಹೊಸ ಬಾಳು                   ಹರುಷಕ್ಕೆ ಬಂತು  ಮುತ್ತಿನ ವಜ್ರವು                    ಸಡಗರವ  ತಂತು  *******ರಚನೆ ******* ಡಾ. ಚಂದ್ರಶೇಖರ. ಸಿ. ಹೆಚ್

🌋🌋ನೀನು ಬಲ್ಲೆಯಾ 🌋🌋

ಪ್ರೀತಿ ಸುಮ್ಮನೆ ಮಾತು ನನ್ನನೆ  ಕೇಳಿದಂತಿದೆ ಈ ಹೃದಯ  ಹಾಡು ಒಂಥರಾ ನಿನ್ನ ಕೂಗಿದೆ  ತುಂಟ ನಗುವ ಬೀರಿದೆ ಪ್ರಣಯ  ನೀನು ಬಲ್ಲೆಯಾ ನನ್ನ ನಲ್ಲೆಯ  ಚೆಲುವೆ ಸಂಪಿಗೆ ಮುಡಿದ ಮಲ್ಲಿಗೆ ಯಾಕೋ ಸುಮ್ಮನೆ ಮನಸು ಹೇಳಿದೆ  ಬರುವೆ ಒಮ್ಮೆ ನೀ ಸನಿಹ  ತುಂಟ ಕೆನ್ನೆಯು ಕೆಂಪಾಗಿದೆ  ಮುತ್ತು ನೀಡೆಯ ವಿರಹ  ನಿನ್ನ ನೋಡುತ  ವಯಸ್ಸು ಕೇಳಿದೆ  ಸುಡುತ ಮಿಡಿದಿದೆ ಕನಸು   ಮಾತು ಬಾರದೆ ಮುಖವಾಗಿದೆ  ಒಮ್ಮೆ ಎಳೆಯ ನಿನ್ನ ಸೊಗಸು  ಕಣ್ಣ  ನೋಟಕೆ ನಾನು ಬೆದರಿದೆ  ಪ್ರೀತಿ ಮೋಹಕೆ ಹೃದಯ  ಒದರಿದೆ  ನೀನು ಬಲ್ಲೆಯಾ ನನ್ನ ನಲ್ಲೆಯ  ಚೆಲುವೆ ಸಂಪಿಗೆ  ಮುಡಿದ  ಮಲ್ಲಿಗೆ  ಒಲಿದ ಹೂವಿಗೆ ಮನವು ತುಡಿದಿದೆ  ನಾಚಿ ಮೆಲ್ಲಗೆ ಚೆಲುವ ಬಯಸಿದೆ  ಬಣ್ಣದ ಸೊಬಗಲಿ ಹೃದಯ ಬಡಿದಿದೆ  ಗಲಿಬಿಲಿ ನೋಡಿ  ಮನಸ್ಸು ಕರಗಿದೆ    ನೀನು ಬಲ್ಲೆಯಾ ನನ್ನ ನಲ್ಲೆಯ  ಚೆಲುವೆ ಸಂಪಿಗೆ ಮುಡಿದ ಮಲ್ಲಿಗೆ ***********ರಚನೆ ********* ಡಾ. ಚಂದ್ರಶೇಖರ. ಸಿ. ಹೆಚ್

💮☁️ಬರವೇ ☁️💮

 ಬಂಗಾರದ ದೇವರಿಗೆ  ಸಿಂಗಾರವ ಮಾಡದಿರೆ  ಚೆಲುವಿಗೇನು ಬರವೇ  ಪ್ರೀತಿಯ ತಂಬೂರಿಗೆ  ತಂತಿಯ ಮೀಟಿದೊಡೆ  ನಾದಕೇನು ಬರವೇ  ಶೃಂಗಾರದ ಚೆಲುವೆಗೆ  ಸಿಂಗಾರದ ಹೂವಿಲ್ಲದೊಡೆ  ನಾಟ್ಯಕೇನು ಬರವೇ  ಒಲವಿನ ನವಿಲಿಗೆ  ತೆಳುವಿನ ಗರಿಗೆ  ಬಣ್ಣಕೆನು ಬರವೇ  ನೀಲಿಯ ಆಕಾಶಕೆ  ಮಿಂಚಿನ ಕಾಂತಿಗೆ  ಚುಕ್ಕಿಗಳಿಗೇನು ಬರವೇ  ಕೆಂಪಾದ ಸೂರ್ಯನ  ತಂಪಾದ ಚಂದ್ರನಿಗೆ  ಬೆಳಕಿಗೇನು ಬರವೇ  ಗುಡುಗುವ ಮೋಡಕೆ  ಕಾಮನಬಿಲ್ಲು ಮೂಡಿದೊಡೆ  ಸುರಿವ ಮಳೆಗೇನು ಬರವೇ  *******ರಚನೆ ******* ಡಾ. ಚಂದ್ರಶೇಖರ. ಸಿ. ಹೆಚ್