☘️🌷ಚೆಲುವು ☘️🌷
ಈ ನಿನ್ನ ಚೆಲುವು
ಇಡಿಸಿತು ನನಗೆ ಒಲವು
ಒಲವಿಂದ ನಾ ಬಂದೆ
ಛಲದಲ್ಲಿ ನೀ ನಿಂದೆ
ನಸುನಕ್ಕು ಬರುತಿರಲು
ನನ್ನನ್ನು ನೀ ಕಂಡು
ನೀ ದೂರ ನಿಂತೆ
ನಿನ ನೋಟ ಬಲು ಸೊಗಸು
ನಾ ಕಂಡೆ ಬರಿ ಕನಸು
ನಿನ್ನಂದೆ ನಾ ಬರಲು
ಕಾರ್ಮೋಡ ಸರಿದು
ಮಿಂಚೊನ್ದು ಬಳಿ ಬಂದು
ಈ ಧರೆಗೆ ಮಳೆ ಹನಿಯು ಬಿದ್ದಂತೆ
ಮರಗಿಡವು ಹಸಿರಾಗಿ
ನೀ ನನ್ನ ಊಸಿರಾಗಿ
ಬಳಿ ಬಂದು ನಿಂತೆ
ನಿನ್ನನ್ನು ನಾ ಕಂಡು ಸೋತೆ
*********ರಚನೆ********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment