💮☁️ಬರವೇ ☁️💮
ಬಂಗಾರದ ದೇವರಿಗೆ
ಸಿಂಗಾರವ ಮಾಡದಿರೆ
ಚೆಲುವಿಗೇನು ಬರವೇ
ಪ್ರೀತಿಯ ತಂಬೂರಿಗೆ
ತಂತಿಯ ಮೀಟಿದೊಡೆ
ನಾದಕೇನು ಬರವೇ
ಶೃಂಗಾರದ ಚೆಲುವೆಗೆ
ಸಿಂಗಾರದ ಹೂವಿಲ್ಲದೊಡೆ
ನಾಟ್ಯಕೇನು ಬರವೇ
ಒಲವಿನ ನವಿಲಿಗೆ
ತೆಳುವಿನ ಗರಿಗೆ
ಬಣ್ಣಕೆನು ಬರವೇ
ನೀಲಿಯ ಆಕಾಶಕೆ
ಮಿಂಚಿನ ಕಾಂತಿಗೆ
ಚುಕ್ಕಿಗಳಿಗೇನು ಬರವೇ
ಕೆಂಪಾದ ಸೂರ್ಯನ
ತಂಪಾದ ಚಂದ್ರನಿಗೆ
ಬೆಳಕಿಗೇನು ಬರವೇ
ಗುಡುಗುವ ಮೋಡಕೆ
ಕಾಮನಬಿಲ್ಲು ಮೂಡಿದೊಡೆ
ಸುರಿವ ಮಳೆಗೇನು ಬರವೇ
*******ರಚನೆ *******
ಡಾ. ಚಂದ್ರಶೇಖರ. ಸಿ. ಹೆಚ್
Nice sir 😍
ReplyDeleteNice
ReplyDelete