🌋🌋ನೀನು ಬಲ್ಲೆಯಾ 🌋🌋
ಪ್ರೀತಿ ಸುಮ್ಮನೆ ಮಾತು ನನ್ನನೆ
ಕೇಳಿದಂತಿದೆ ಈ ಹೃದಯ
ಹಾಡು ಒಂಥರಾ ನಿನ್ನ ಕೂಗಿದೆ
ತುಂಟ ನಗುವ ಬೀರಿದೆ ಪ್ರಣಯ
ನೀನು ಬಲ್ಲೆಯಾ ನನ್ನ ನಲ್ಲೆಯ
ಚೆಲುವೆ ಸಂಪಿಗೆ ಮುಡಿದ ಮಲ್ಲಿಗೆ
ಯಾಕೋ ಸುಮ್ಮನೆ ಮನಸು ಹೇಳಿದೆ
ಬರುವೆ ಒಮ್ಮೆ ನೀ ಸನಿಹ
ತುಂಟ ಕೆನ್ನೆಯು ಕೆಂಪಾಗಿದೆ
ಮುತ್ತು ನೀಡೆಯ ವಿರಹ
ನಿನ್ನ ನೋಡುತ ವಯಸ್ಸು ಕೇಳಿದೆ
ಸುಡುತ ಮಿಡಿದಿದೆ ಕನಸು
ಮಾತು ಬಾರದೆ ಮುಖವಾಗಿದೆ
ಒಮ್ಮೆ ಎಳೆಯ ನಿನ್ನ ಸೊಗಸು
ಕಣ್ಣ ನೋಟಕೆ ನಾನು ಬೆದರಿದೆ
ಪ್ರೀತಿ ಮೋಹಕೆ ಹೃದಯ ಒದರಿದೆ
ನೀನು ಬಲ್ಲೆಯಾ ನನ್ನ ನಲ್ಲೆಯ
ಚೆಲುವೆ ಸಂಪಿಗೆ ಮುಡಿದ ಮಲ್ಲಿಗೆ
ಒಲಿದ ಹೂವಿಗೆ ಮನವು ತುಡಿದಿದೆ
ನಾಚಿ ಮೆಲ್ಲಗೆ ಚೆಲುವ ಬಯಸಿದೆ
ಬಣ್ಣದ ಸೊಬಗಲಿ ಹೃದಯ ಬಡಿದಿದೆ
ಗಲಿಬಿಲಿ ನೋಡಿ ಮನಸ್ಸು ಕರಗಿದೆ
ನೀನು ಬಲ್ಲೆಯಾ ನನ್ನ ನಲ್ಲೆಯ
ಚೆಲುವೆ ಸಂಪಿಗೆ ಮುಡಿದ ಮಲ್ಲಿಗೆ
***********ರಚನೆ *********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment