🙎🏼‍♀️ಓಹೋ ಗೆಳತಿ 🙎🏼‍♀️


ನಲುಮೆಯ ಗೆಳತಿ 

              ಹೃದಯಕ್ಕೆ ಒಡತಿ 

ಮಾತಲ್ಲಿ ಗೆದ್ದ 

               ಮನಸ್ಸನು ಕದ್ದ 

ಸೊಲ್ಲಿಂದ ಎದ್ದ 

        ಹದಿಹರೆಯದ ಯುವತಿ 


ಓಹೋ ನನ್ನ ಗೆಳತಿ................ 


ಚಿಂತೆಯಲ್ಲಿ ನೀನಿಲ್ಲ 

          ಗೆಲುವೇ ನೀನದೆಲ್ಲ 

ಬಹುಮಾನ ಬಯಸಿಲ್ಲ 

          ಜೀವನವು ಸೊಗಸೆಲ್ಲ 


ಓಹೋ ನನ್ನ ಗೆಳತಿ................


ಆಸೆಗಳು ನೂರು 

             ಸೋರುತಿಹ ಸೂರು 

ಮಳೆ ಬಂದ ನೀರು 

             ಕನಸುಗಳು ಚೂರು 


ಜೋತಾಡ ಜೋಪಡಿಗೆ 

              ದೇವರ ಅ ಗುಡಿಗೆ 

ಕೈ ಮುಗಿದು ಬೇಡು 

 ದೇವರೇ ಖುಷಿಯನ್ನು ನೀಡು 


ಓಹೋ ನನ್ನ ಗೆಳತಿ................


   ಏನಿದು ಜೀವನ 

       ಬಡತನವೇ ಅವಮಾನ 

   ಸೋತಿದೆ ನಯನ 

               ಸೆಳೆಯಲು ಗಮನ 


ದೃತಿಗೆಡೆದೆ ಬಾಳಲ್ಲಿ 

      ಬೇಯುತಿರುವೆ ನೋವಲ್ಲಿ 

ಹೋರಾಡಿ ಬದುಕುವೆಯ  

             ಬಡತನವ ಗೆಲ್ಲುವೆಯ 



ನಿಟ್ಟುಸಿರು ಬಿಟ್ಟು 

                   ಕಷ್ಟಗಳ ಸುಟ್ಟು 

ಉಸಿರನ್ನು ಪಣಕ್ಕಿಟ್ಟು 

    ಗೆಲ್ಲು ಜೀವನದ ಗುಟ್ಟು


ಓಹೋ ನನ್ನ ಗೆಳತಿ................


*********ರಚನೆ ********

ಡಾ. ಚಂದ್ರಶೇಖರ. ಸಿ. ಹೆಚ್

Comments

Popular posts from this blog

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ

ಚುಟುಕು ಕವನ-35