ಮನುಷ್ಯನ ಜೀವನ ಏಕೆ ಹುಟ್ಟಿದೆ ಮತ್ತು ಜೀವನದ ಗುರಿ ಏನು????
ನಾನು ಈ ಪ್ರಪಂಚದಲ್ಲಿ ಏಕೆ ಹುಟ್ಟಿದ್ದೇನೆ ಎಂದು ನಾವು ನಮ್ಮನ್ನು ಪ್ರಶ್ನಿಸಿಕೊಂಡಾಗ ಸಾಕಷ್ಟು ರೀತಿಯ ಕಾರಣಗಳು ಸಿಗಬಹುದು. ಒಬ್ಬ ಬಾಲಕನನ್ನು ಕೇಳಿದರೆ ನಾನು ಆಟ ಆಡುತ್ತಾ ಓದಿ ವಿದ್ಯಾವಂತನಾಗಲು ಹುಟ್ಟಿದ್ದೇನೆ ಎಂದು ಹೇಳಬಹುದು ಹಾಗೆಯೆ ಹದಿಹರೆಯದ ಯುವಕನನ್ನು ಕೇಳಿದರೆ ನಾನು ಚೆನ್ನಾಗಿ ಓದಿ ದುಡಿದು ಪ್ರಪಂಚದಲ್ಲಿಯ ಎಲ್ಲಾ ಸುಖಗಳನ್ನು ಅನುಭವಿಸಲು ಎಂದು ಉತ್ತರಿಸಬಹುದು. ಒಬ್ಬ ಹಿರಿಯ ವಯಸ್ಸಿನ ಪ್ರಜೆಯನ್ನು ಕೇಳಿದರೆ ನಾನು ದುಡಿದು ಸಾಕಷ್ಟು ಆಸ್ತಿಯನ್ನು ಸಂಪಾದಿಸಿ ನನ್ನ ಸಂಸಾರದಲ್ಲಿರುವ ಮಕ್ಕಳು ಮೊಮ್ಮಕ್ಕಳು ಬಂಧು ಬಳಗ ಎಲ್ಲರನ್ನು ಚೆನ್ನಾಗಿ ನೋಡಿಕೊಳ್ಳಲು ಎಂದು ಹೇಳಬಹುದು ಮತ್ತು ಒಬ್ಬ ಸಾಧುಸಂತರನ್ನು ಕೇಳಿದರೆ ಈ ಪ್ರಪಂಚವು ನಶ್ವರ ನಾವು ಸಂಸಾರ ಎಂಬ ಜಂಜಾಟದಲ್ಲಿ ಸಿಲುಕಿ ಸುಖಗಳನ್ನು ಪಡೆಯಲು ಹೋಗಿ ದುಃಖಗಳನ್ನು ತಂದುಕೊಳ್ಳುತ್ತೇವೆ. ಅವುಗಳು ನಮ್ಮನ್ನು ದೈಹಿಕವಾಗಿ ಹಾಗೂ ಮಾನಸಿಕವಾಗಿ ನಮ್ಮ ನೆಮ್ಮದಿಯ ಹಾಳು ಮಾಡುತ್ತವೆ ಆದ್ದರಿಂದ ನಾವು ಅವುಗಳನ್ನು ತ್ಯಜಿಸಿ ಭಗವಂತನ ನಾಮಸ್ಮರಣೆ ಧ್ಯಾನದಿಂದ ನಮಗೆ ಮುಕ್ತಿ ಸಿಗುತ್ತದೆ ಎಂದು ಹೇಳಲು ಬಹುದು. ಇನ್ನು ಚಿಂತಕರು ಹೆಚ್ಚಾಗಿ ನಾವು ದೇವರ ಲೋಕದಲ್ಲಿ ಹುಟ್ಟಿ ಮಾಡಿದ ಪಾಪಗಳಿಂದ ದೇವರು ಶಾಪ ಕೊಟ್ಟು ನಮ್ಮನ್ನು ಮನುಷ್ಯ ಜೀವಿಯಾಗಿ ಬದುಕಲು ಭೂಮಿಯಲ್ಲಿ ಬಿಟ್ಟಿದ್ದಾನೆ ಎಂದು ತಿಳಿಯಬಹುದು. ಭೂಮಿಯ ಮೇಲೆ ಹುಟ್ಟಿ ಬೆಳೆದ ಪಂಡಿತರುಗಳು ಈ ಪ್ರಪಂಚದಲ್ಲಿ ಸಾಕಷ್ಟು ಕಾರಣಗಳಿ...