ನೋಡಿರಣ್ಣಸಗುನಿ ಬಸವೇಶನ

 



ನೋಡಿರಣ್ಣ ನೋಡಿರೋ ಸಗುನಿ ಬಸವೇಶನ

ಲಿಂಗವಾಗಿ ಮೂಡಿದ ಓಂ ನಮಃ ಶಿವನ


ನೋಡಿರಣ್ಣ ನೋಡಿರೋ ಸಗುನಿ ಬಸವೇಶನ

ಮುಂಜಾನೆ ಬೆಳಗಿನಲ್ಲಿ ಕಣ್ಣತೆರೆದ ಪರಶಿವನ 


ಮನಸ್ಸಿನಲ್ಲಿ ಮಗುವಂತೆ ದಯೆಯಲ್ಲಿ ಹಸುವಂತೆ


ನೋಡಿರಣ್ಣ ನೋಡಿರೋ ಸಗುನಿ ಬಸವೇಶನ

ಕಷ್ಟಗಳ ನಿಗೋ ಸಗುನಿ ಬಸವೇಶನ


ನೂರೆಂಟು ಶಿವನ ಹೆಸರು

ಶಿವನು ತಾನೇ ನಮ್ಮ ಉಸಿರು


ಕಾಶಿಯಲ್ಲಿ ಕಂಡ  ವಿಶ್ವನಾಥನು ಶಿವನೇ

ಕೂಗಿದಾಗ ಬರುವ ಮಂಜುನಾಥನು ಶಿವನೇ

ಎಲ್ಲಾ ಬಂದ ಪಾಪ ನಿಗೋ ಹರನು ಶಿವನೆ

ಕೈಲಾಸವಾಸಿ ಮಹಾದೇವನು ಶಿವನೇ


ನೋಡಿರಣ್ಣ ನೋಡಿರೋ ಸಗುನಿ ಬಸವೇಶನ

ಲಿಂಗವಾಗಿ ಮೂಡಿದ ಓಂ ನಮಃ ಶಿವನ


ಮರಣವನ್ನು ಜಯಿಸಿದ ಮೃತ್ಯುಂಜಯ ಶಿವ

ಭಕ್ತರ ನೋವ ನಿಗೋ ರುದ್ರತಾಂಡವ ಶಿವ  

ನಂಬುವವಗೆ ಮಂಗಳಕರ ಸದಾಶಿವನು ಶಿವನೇ

ಸಂತೋಷ ಸಮೃದ್ಧಿ ನೀಡೋ ಶಂಕರನು ಶಿವನೇ


ನೋಡಿರಣ್ಣ ನೋಡಿರೋ ಸಗುನಿ 

ಬಸವೇಶನ

ಲಿಂಗವಾಗಿ ಮೂಡಿದ ಓಂ ನಮಃ ಶಿವನ


ಹಿಂಸೆಯನ್ನು  ಸುಟ್ಟು ಬಿಡುವ ವೀರಭದ್ರನು ಶಿವನೇ

ಮಮತೆಯ ದೈವ ಮಲ್ಲಿಕಾರ್ಜುನನು ಶಿವನೇ

ವಿಭೂತಿಯನ್ನು ಬಳಿದ ಭೋಲೇನಾಥಾನು ಶಿವನೇ


ನೋಡಿರಣ್ಣ ನೋಡಿರೋ ಸಗುನಿ ಬಸವೇಶನ

ಲಿಂಗವಾಗಿ ಮೂಡಿದ ಓಂ ನಮಃ ಶಿವನ


ಮೂರು ಕಣ್ಣು ಇರುವ ಮುಕ್ಕೋಟಿ ಒಡೆಯ

ಕಷ್ಟದಿ ಕೂಗಿದರೆ ಬಳಿ ಬರುವ ನಮ್ಮ ಗೆಳೆಯ


ನೋಡಿರಣ್ಣ ನೋಡಿರೋ ಸಗುನಿ ಬಸವೇಶನ

ಕೈಯಲ್ಲಿ ತ್ರಿಶೂಲ ಇಡಿದು ಡಮರುಗವ ಬಡಿದು

ನೆತ್ತಿಯಲ್ಲಿ ಗಂಗೆ ಹೊತ್ತ ಪರಶಿವನ



ನೋಡಿರಣ್ಣ ನೋಡಿರೋ ಸಗುನಿ ಬಸವೇಶನ

ಲಿಂಗವಾಗಿ ಮೂಡಿದ ಓಂ ನಮಃ ಶಿವನ


************ರಚನೆ***********

ಡಾ. ಚಂದ್ರಶೇಖರ ಸಿ. ಹೆಚ್

Comments

Popular posts from this blog

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ

ಚುಟುಕು ಕವನ-35