ಮರೆತೇನು ನಾ
ಪ್ರೀತಿಯ ಮಧುರ
ಮಾತು ಮೂಕಾಯಿತೇಕೋ
ಕಂಡ ಕನಸ್ಸುಗಳೆಲ್ಲಾ
ಕಾಣದೆ ಚೂರಾಯಿತೇಕೋ
ಉಸಿರು ತಾಕುವ ಮುನ್ನ
ಉಸಿರೇ ನೆಣ ಯಿತೇಕೋ
ಎದೆಯ ಬಡಿತವು
ಸಿಡಿಯದೆ ಸಿಡಿಲಾಯಿತೇಕೋ
ಮರೆಯಾದ ನೆನಪುಗಳು
ಮರಳಿ ಬರುತ್ತಿವೆ
ಸುಡುತ ನನ್ನ
ಮನವ ತಾಕಿವೆ
ಬಿಸಿಲಲ್ಲಿ ಬಂದ ಮಿಂಚು
ಮಾಡಿತೆಕೋ ಸಂಚು
ಮೋಡದಿ ಮರೆಯಾದ ಸೂರ್ಯ
ಮರೆತ ಏಕೋ ಶೌರ್ಯ
ಬೆಳಕಿಗೆ ಕಾಮನಬಿಲ್ಲು ಕರಗಿತೇ
ಭಾನು ಕಣ್ಣ ಹನಿ ಸುರಿಸಿತೆ
ಒಂಟಿಯಾನದಲ್ಲಿ ಮೌನಿ ನಾನು
ಕಡಲಲ್ಲಿ ಮುಳುಗಿದ ದೋಣಿ ನಾನು
ಅಲೆಗಳ ಸೆಳೆತಕೆ ಸಿಕ್ಕು
ಸೋತೇನು ನಾ
ನಲುಗುತಾ ಮನೆಯ
ಮರೆತೇನು ನಾ
**********ರಚನೆ ********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment