ಮನುಷ್ಯನ ಜೀವನ ಏಕೆ ಹುಟ್ಟಿದೆ ಮತ್ತು ಜೀವನದ ಗುರಿ ಏನು????

 


ನಾನು ಈ ಪ್ರಪಂಚದಲ್ಲಿ ಏಕೆ ಹುಟ್ಟಿದ್ದೇನೆ ಎಂದು ನಾವು ನಮ್ಮನ್ನು ಪ್ರಶ್ನಿಸಿಕೊಂಡಾಗ ಸಾಕಷ್ಟು ರೀತಿಯ ಕಾರಣಗಳು ಸಿಗಬಹುದು. ಒಬ್ಬ ಬಾಲಕನನ್ನು ಕೇಳಿದರೆ ನಾನು ಆಟ ಆಡುತ್ತಾ ಓದಿ ವಿದ್ಯಾವಂತನಾಗಲು ಹುಟ್ಟಿದ್ದೇನೆ ಎಂದು ಹೇಳಬಹುದು ಹಾಗೆಯೆ ಹದಿಹರೆಯದ ಯುವಕನನ್ನು ಕೇಳಿದರೆ ನಾನು ಚೆನ್ನಾಗಿ ಓದಿ ದುಡಿದು ಪ್ರಪಂಚದಲ್ಲಿಯ ಎಲ್ಲಾ ಸುಖಗಳನ್ನು ಅನುಭವಿಸಲು ಎಂದು ಉತ್ತರಿಸಬಹುದು. ಒಬ್ಬ ಹಿರಿಯ ವಯಸ್ಸಿನ ಪ್ರಜೆಯನ್ನು ಕೇಳಿದರೆ ನಾನು ದುಡಿದು ಸಾಕಷ್ಟು ಆಸ್ತಿಯನ್ನು ಸಂಪಾದಿಸಿ ನನ್ನ ಸಂಸಾರದಲ್ಲಿರುವ ಮಕ್ಕಳು ಮೊಮ್ಮಕ್ಕಳು ಬಂಧು ಬಳಗ ಎಲ್ಲರನ್ನು ಚೆನ್ನಾಗಿ ನೋಡಿಕೊಳ್ಳಲು ಎಂದು ಹೇಳಬಹುದು ಮತ್ತು ಒಬ್ಬ ಸಾಧುಸಂತರನ್ನು ಕೇಳಿದರೆ ಈ ಪ್ರಪಂಚವು ನಶ್ವರ ನಾವು ಸಂಸಾರ ಎಂಬ ಜಂಜಾಟದಲ್ಲಿ ಸಿಲುಕಿ ಸುಖಗಳನ್ನು ಪಡೆಯಲು ಹೋಗಿ ದುಃಖಗಳನ್ನು ತಂದುಕೊಳ್ಳುತ್ತೇವೆ. ಅವುಗಳು ನಮ್ಮನ್ನು ದೈಹಿಕವಾಗಿ ಹಾಗೂ ಮಾನಸಿಕವಾಗಿ ನಮ್ಮ ನೆಮ್ಮದಿಯ ಹಾಳು ಮಾಡುತ್ತವೆ ಆದ್ದರಿಂದ ನಾವು ಅವುಗಳನ್ನು ತ್ಯಜಿಸಿ ಭಗವಂತನ ನಾಮಸ್ಮರಣೆ ಧ್ಯಾನದಿಂದ ನಮಗೆ ಮುಕ್ತಿ ಸಿಗುತ್ತದೆ ಎಂದು ಹೇಳಲು ಬಹುದು. ಇನ್ನು ಚಿಂತಕರು ಹೆಚ್ಚಾಗಿ ನಾವು ದೇವರ ಲೋಕದಲ್ಲಿ ಹುಟ್ಟಿ ಮಾಡಿದ ಪಾಪಗಳಿಂದ ದೇವರು ಶಾಪ ಕೊಟ್ಟು ನಮ್ಮನ್ನು ಮನುಷ್ಯ ಜೀವಿಯಾಗಿ ಬದುಕಲು ಭೂಮಿಯಲ್ಲಿ ಬಿಟ್ಟಿದ್ದಾನೆ ಎಂದು ತಿಳಿಯಬಹುದು. ಭೂಮಿಯ ಮೇಲೆ ಹುಟ್ಟಿ ಬೆಳೆದ ಪಂಡಿತರುಗಳು ಈ ಪ್ರಪಂಚದಲ್ಲಿ ಸಾಕಷ್ಟು ಕಾರಣಗಳಿಂದ ಮಾನವ ಜನ್ಮ ಬೇರೆ ಜೀವಸಂಕುಲಗಳಿಂದ ಭಿನ್ನ ಹಾಗಾಗಿ ಮಾನವನ ಜನ್ಮ ಶ್ರೇಷ್ಠ ಎಂದು ಹೇಳಬಹುದು. ಇವೆಲ್ಲ ಅವರವರ ವೈಯುಕ್ತಿಕ ಅನಿಸಿಕೆಗಳು ಆಗಿರುತ್ತವೆ ನಾವು ಈ ಪ್ರಪಂಚದಲ್ಲಿ ಏಕೆ ಹುಟ್ಟಿದ್ದೇವೆ ಎಂದು ಕಾರಣ ತಿಳಿಯುವುದು ಅಷ್ಟು ಸುಲಭವಲ್ಲ.


ಹುಟ್ಟಿಸಿದ ದೇವರಿಗೆ ಗೊತ್ತು ಕಾರಣ

ನಾವು ಏಕೆ ಹುಟ್ಟಿದ್ದೇವೆ ಎಂದು

ಹುಟ್ಟಿದ ದಿನದಿಂದ ಬದುಕುತ್ತಿದ್ದೇವೆ

ಸುಖದುಃಖದ ಜಂಜಾಟದ ಬೆಂದು

ಅಂತಿಮ ಘಟ್ಟದಲ್ಲಿ ಯಮ ಬರುವನಂತೆ

ಸಾವು ಕೊಟ್ಟು ಚಟ್ಟದಲ್ಲಿ ಎಳೆಯಲೆಂದು

ಮಾಡಿದ ಪಾಪ ಪುಣ್ಯದ ಲೆಕ್ಕಾಚಾರ

ಮತ್ತೆ ಹುಟ್ಟಿಸುವುದಂತೆ ಭೂಮಿಗೆ ಕರೆತಂದು


 ನಾವು ಹುಟ್ಟಿದ ಕಾರಣವೇ ತಿಳಿಯದೆ ನನ್ನ ಜೀವನದ ಗುರಿಯೇನು ಎಂದು ತಿಳಿಯುವುದು ಕಷ್ಟ ಸಾಧ್ಯ.

ಪ್ರಪಂಚದಲ್ಲಿ ಹುಟ್ಟಿದ ಮೇಲೆ ನಾನು ಎಲ್ಲರಂತೆ ಬದುಕುತ್ತಿದ್ದೇನೆ ಮನುಷ್ಯನಿಗೆ ಇರುವ ಸಹಜ ಗುಣಗಳು ನನ್ನಲ್ಲಿ ಇವೆ ಬಾಲ್ಯದ ಬೆಳೆದು, ಓದಿ ಆಟವಾಡಿ ಹದಿಹರೆಯಕ್ಕೆ ಬಂದು ದೈಹಿಕ ಬದಲಾವಣೆಯಾಗಿ ದೇಹದ ಬಯಕೆಗಳು ಕಾಡಿ ಅವುಗಳನ್ನು ಈಡೇರಿಸಲು ಮನಸ್ಸು ಮಾಡಿ ಉದ್ಯೋಗ ಪಡೆದು ಸಂಸಾರದ ಜಂಜಾಟದಲ್ಲಿ ಸಿಲುಕಿ ಮಕ್ಕಳನ್ನು ಪಡೆದು ನನ್ನ ತಂದೆ ತಾಯಿ ಹೆಂಡತಿ ಮಕ್ಕಳು ಬಂಧು ಬಳಗದ ಯೋಗಕ್ಷೇಮಕ್ಕೆ ಬೇಕಾದ ಆಸ್ತಿಗಳನ್ನು ಮಾಡಿ ಆಸೆಗಳನ್ನು ಪಟ್ಟು ಆಸೆಗಳು ದುಃಖಕ್ಕೆ ನಮ್ಮ ನ್ನು ದೂಡಿ ಈ ಪ್ರಪಂಚದ ಬಗ್ಗೆ ವೈರಾಗ್ಯ ಮೂಡಿ ಸಾವನ್ನು ಸಂಭ್ರಮಿಸಲು ಸಿದ್ಧವಾಗುವ ನನ್ನ ಈ ಬದುಕು ನನ್ನ ಜೀವನದ ಗುರಿಯೆ


ಒಳಿತು ಮಾಡಿದರೆ ನೆನೆಯುವುದು ನಿನ್ನ

 ಕೆಡುಕು ಮಾಡಿದರೆ ಶಪಿಸುವರು ನಿನ್ನ

ಬದುಕಿದ್ದ ಕಾಲ ಸುಖ ದುಃಖದ ಸುಟ್ಟೆ

ಆಸೆಗಳನ್ನು ಹೊತ್ತು ನೀ ಬದುಕಲ್ಲಿ ಕೆಟ್ಟೆ

ಸಾವಿಗೆ ಅಂಜಿದರೆ  ನಿನ್ನ ಬಿಡಲುಂಟೆ????

ಈಗ ನಾವು ದೈಹಿಕ ಹಾಗೂ ಮಾನಸಿಕವಾಗಿ ನಮ್ಮ ಜೀವನದ ಬದುಕನ್ನು ಸುಖ ದುಃಖದ ಕಳೆದು ಮಾಡಿದ ಪಾಪ ಪುಣ್ಯವನ್ನು ಅರಿಯದೆ ನಮ್ಮ ಜೀವನದಿ ಬಿಟ್ಟು ಹೋಗುವಾಗ ನನ್ನ ಜೀವನದಿ ಗುರಿಯನ್ನು ಕೇಳಿದರೆ ಏನು ಹೇಳಲಿ????


ಗುರಿ ಇಲ್ಲದ ಅಲೆಮಾರಿನ ನಾ

ಗುರುತೇ ಸಿಗದ ಕಳೆ ಬರಹ ನಾ

ಒಳ್ಳೆಯ ಗುರುತು ನೆನೆಯುವುದು ನನ್ನ

ಜೀವ ಸಾವುಗಳ ನಡುವೆ ಇರುವ ಗುರಿ ಏನು ಎಂದು ಹೇಗೆ ಹೇಳಲಿ ನಾ???


ಬೇಡಿದರೆ ಸಿಗುವುದಿಲ್ಲ

ದುಡಿದರು ಉಳಿಯುವುದಿಲ್ಲ

ಊಟ ಬಟ್ಟೆಗೆ ಮೋಸವಿಲ್ಲ

ಕಣ್ಣ ನೋಟದೆ ಆಧುನಿಕತೆ ತೆರೆಯಿತಲ್ಲ

ಕಲ್ಲು ಮಣ್ಣುಗಳ ಬೇಡಿದನಲ್ಲ

ದೇವರೇ ಕಾಪಾಡು ಎಂದು ಕೂಗಿದ ನಲ್ಲ

ಜೀವನದ ಗುರಿ ತಿಳಿವ ಒಳಗೆ

ದೇವರು ಬಿಟ್ಟ ಬಾಣ ನನ್ನ ಚುಚ್ಚಿತಲ್ಲ

ಮತ್ತೆ ಹುಟ್ಟುವೇನೆ ಮಾನವನಾಗಿ ಯಾರಬಲ್ಲ?????


********ಲೇಖಕರು********

 ಡಾ.ಚಂದ್ರಶೇಖರ್ ಸಿ ಎಚ್

Comments

Popular posts from this blog

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ

ಚುಟುಕು ಕವನ-35