ಸಾವಿರ ದೇವರುಗಳಲ್ಲಿ ನನ್ನವನಾರು
ನಮ್ಮ ಹಿಂದೂ ದೇಶದಲ್ಲಿ ಸಾವಿರಾರು ದೇವರು ಹಾಗೂ ದೇವತೆಯನ್ನು ಪೂಜಿಸುತ್ತಾರೆ ದೇವರು ಮತ್ತು ದೇವತೆಯರು ನ್ಯಾಯ ಪ್ರೀತಿ ಸೌಂದರ್ಯ ಆಶೀರ್ವಾದ ಮಾಡುವ ಗುಣವಿರುವ ಸೃಷ್ಟಿಕರ್ತರು.
ದೇವರುಗಳ ಪ್ರತಿಕ್ರಿಯೆ ನಮ್ಮ ಈ ಎರಡು ಪ್ರಾರ್ಥನೆಯಿಂದ ಕೂಡಿರುತ್ತದೆ
1 ಬ್ರಹ್ಮಾಂಡ ಕಾನೂನು- ಪ್ರಪಂಚದ ಒಳಿತು
2. ಕರ್ಮದ ಕಾನೂನು- ವೈಯಕ್ತಿಕ ಒಳಿತು
ಭಕ್ತರ ಬೇಡಿಕೆ ಮತ್ತು ಅಭಿರುಚಿಗೆ ಆರಾಧನೆಗೆ ತಕ್ಕಂತೆ ದೇವರು ಪ್ರತಿಕ್ರಿಸುತ್ತಾನೆ, ಪ್ರಕೃತಿಯು ಸತ್- ಚಿತ್ -ಆನಂದ ಎಂಬ ವಾಕ್ಯವು ಇರುವಿಕೆ - ಪ್ರಜ್ಞೆ-ಸಂತೋಷವನ್ನು ಒಳಗೊಂಡಿರುತ್ತದೆ.
ಹಿಂದುಗಳಲ್ಲಿ ಬಹು ದೇವತವಾದ ಆಚರಣೆಯಲ್ಲಿದೆ ಇದರಲ್ಲಿ ಮೂರು ಮುಖ್ಯವಾದ ದೇವರುಗಳು ಇವೆ. ನಾವು ಇವುಗಳನ್ನು ತ್ರಿಮೂರ್ತಿಗಳು ಎಂದು ಕರೆಯುತ್ತೇವೆ.
1. ಬ್ರಹ್ಮ -ಅರಳಿದ ತಾವರೆಯಲ್ಲಿ ಕೂತಿರುವವ
2. ವಿಷ್ಣು -ಪ್ರಪಂಚವನ್ನು ರಕ್ಷಿಸುವವ
3. ಶಿವ -ಬ್ರಹ್ಮಾಂಡವ ವಿಸರ್ಜಿಸುವವ.
ಈ ಮೂರು ದೇವತೆಗಳು ನಮ್ಮ ಲೋಕವನ್ನು ಕಾಯುವವರು ಅಂದರೆ ಲೋಕಪಾಲಕರು ಹಾಗೂ ದಿಕ್ಕುಗಳನ್ನು ಕಾಯುವವರು ಅಂದರೆ ದಿಕ್ಪಾಲಕರು.
2. ವೈದಿಕ ದೇವರುಗಳು
ನಮ್ಮ ಋಗ್ವೇದದಲ್ಲಿ ನಮೂದಿಸಿರುವಂತೆ 33 ದೇವರುಗಳು ಇವೆ ವಾಸು -8 ರುದ್ರ- 11 ಆದಿತ್ಯ -12 ಹಾಗೂ ಇಂದ್ರ ಮತ್ತು ಪ್ರಜಾಪತಿ.
ಈ ದೇವರುಗಳು ತಮ್ಮ ಕಾರ್ಯವನ್ನು ಪೃಥ್ವಿ,- ಭೂಮಿ, ಧ್ಯೇಯ- ಸ್ವರ್ಗ, ಆಕಾಶ- ಅಂತರಿಕ್ಷ ದಲ್ಲಿ, ನಿರ್ವಹಿಸುತ್ತಾರೆ.
2. ಆದಿತ್ಯ 12,- ದೇವರುಗಳು
ಮಿತ್ರ- ಗೆಳೆಯ, ವರುಣ- ಜಾಗಬಂಧಿಸುವವ, ಆರ್ಯಮಾನ- ವೈರಿಗಳನ್ನು ನಾಶ ಮಾಡುವ ,ದಕ್ಷ- ನುರಿತವ, ಭಾಗ- ಕೊಡುವ, ಹಂಸ -ಉದಾರವಾದಿ , ತ್ವಸ್ತರ- ಆಕಾರ ಕಾರ, ಸವಿತ್ರ -ಜೀವ ತುಂಬುವ , ಪ್ರಸನ್ನ -ಪೋಷಕ ಸಕ್ರಿ - ಪ್ರಭು , ವಿವಸ್ವತ- ಕಾಂತಿಯುತ , ತಿಷ್ಣು -ವ್ಯಾಪಿಸು.
ನಮ್ಮ 12 ತಿಂಗಳುಗಳು ಸೂರ್ಯನ ಅಂಶಗಳಲ್ಲಿ 12 ಆದಿತ್ಯರನ್ನು ನಾವು ಕಾಣಬಹುದು.
3. ರುದ್ರ 12 ದೇವರುಗಳು
ರುದ್ರ -ಕೂಗು ಹಾಗೂ ಗರ್ಜನೆ ಮಾಡುವ ದೇವರು 8 ರುದ್ರ ದೇವರುಗಳು ಇವೆ. ಯಾವ ವೆಂದರೆ,- ಭಾವ , ಸರ್ವ , ಇಸ್ಮ ,ಪಶುಪತಿ ,ಮಲ್ಲ, ಉಗ್ರ ,ಮಹದೇವ.
4.ವಾಸು 8 ದೇವತೆಗಳು
ದಾರ -ಭೂಮಿ , ಅನಲ- ಬೆಂಕಿ , ಅಷ- ನೀರು , ಅನಿಲ - ಗಾಳಿ , ಧ್ರುವ - ಧ್ರುವತಾರೆ , ಸೋಮ - ಚಂದ್ರ , ಪ್ರಭಾಸ್- ಮುಂಜಾನೆ ಪ್ರತ್ಯುಂತ -ಬೆಳಕು.
ನಮ್ಮ ಪುರಾಣಗಳಲ್ಲಿ 10 ದೇವತೆಗಳಿವೆ ಅವು ಯಾವುವೆಂದರೆ ವಾಸು- ವಾಸ ಸ್ಥಳ , ಸತ್ಯ -ನಿಜ, ಕೃತು - ತಿನ್ನುವ , ದಕ್ಷ - ಕೌಶಲ್ಯ , ಕಾಲ- ವೇಳೆ , ಕಾಮ- ಆಸೆ , ದೃತಿ - ಸಹನೆ , ಕುರು -ಕುರುಗಳ ಪೂರ್ವಜ , ಪುರುರವ - ವಾತಾವರಣದಲ್ಲಿ ವ್ಯಾಪಿಸುವವ , ಮಾದ್ರವಾ - ದುಃಖ ಮತ್ತು ಸಂತೋಷ .ಈ ಎಲ್ಲಾ ದೇವರುಗಳು ಅಂತ್ಯಕ್ರಿಯೆ ಕೊಡುಗೆಗಳನ್ನು ಇಷ್ಟಪಡುತ್ತಾರೆ. ಇವರುಗಳನ್ನು ಯಮ ನಿಗ್ರಹಿಸುತ್ತಾನೆ. ಇವನನ್ನು ಸಾವಿನ ದೇವರು ಎನ್ನುತ್ತಾರೆ, ಚಿತ್ರಗುಪ್ತ ಯಮನಿಗೆ ಕರ್ಮದ ವಿಚಾರ ತಿಳಿಸುತ್ತಾನೆ. ಈ ಪ್ರಪಂಚದಲ್ಲಿರುವ ಇರುವ ಎಲ್ಲಾ ದೇವರು ತ್ರಿಮೂರ್ತಿಗಳಾದ ಬ್ರಹ್ಮ ವಿಷ್ಣು ಮಹೇಶ್ವರರ ಅವತಾರ
4. ಶಕ್ತಿ ದೇವತೆಗಳು
ಶಕ್ತಿ ದೇವತೆಗಳು ಯಾವುವೆಂದರೆ
1. ಸರಸ್ವತಿ -ಬ್ರಹ್ಮನ ಸಂಗಾತಿ ವಿದ್ಯಾದೇವತೆ
2. ಲಕ್ಷ್ಮಿ -ವಿಷ್ಣುವಿನ ಸಂಗಾತಿ ಅದೃಷ್ಟದೇವತೆ
3. ಪಾರ್ವತಿ -ಶಿವನ ಸಂಗಾತಿ ದೇವತೆಗಳ ಅವತಾರ
4. ದುರ್ಗಾ -ಶಕ್ತಿ ದೇವತೆ ಶಕ್ತಿ ಅಗ್ರಹ್ಯ
5. ಕಾಳಿ- ಆಧುನಿಕ ಮನಸ್ಸಿನ ನಿಗೂಢ ದೇವತೆ
6. ಲಲಿತಾ -ತ್ರಿಪುರ ಸುಂದರಿ
ಇನ್ನೂ ಹಲವಾರು ಚಿಕ್ಕ ದೇವತೆಗಳನ್ನು ನಮ್ಮ ದೇಶದಲ್ಲಿ ಕಾಣಬಹುದು.
1. ಗಣಪತಿ - ಶಿವನ ಪುತ್ರ
2. ಹರಿಹರ ಪುತ್ರ - ಅಯ್ಯಪ್ಪ
3. ನವಗ್ರಹಗಳು- 9 ಗ್ರಹಗಳು
ರವಿ ಸೋಮ ಅಥವಾ ಚಂದ್ರ ಮಂಗಳ ಅಂಗಾರಕ ಬುದ್ಧ ಶುಕ್ರ ಗುರು ಶನಿ ರಾಹು ಕೇತು ಗ್ರಹಗಳಲ್ಲ ಇವು ಧೂಮಕೇತುಗಳ ಉಲ್ಕೆಗಳು
5. ಅಷ್ಟ ದಿಕ್ಪಾಲಕರು
ನಮ್ಮ ಜಗತ್ತಿನ ಎಂಟು ಮೂಲೆಗಳನ್ನು ಆಳುತ್ತಿರುವ ದೇವರುಗಳು ಇಂದ್ರ ಯಮ ವಾಯುವ್ಯ ಕುಬೇರ ಇವು ಪೂರ್ವ ಪಶ್ಚಿಮ ದಕ್ಷಿಣ ಮತ್ತು ಉತ್ತರ ದಿಕ್ಕುಗಳನ್ನು ಆಳುತ್ತಿರುವ ದೇವರುಗಳು.
ಹೀಗೆ ನಮ್ಮ ವೇದಗಳಲ್ಲಿ ಹಾಗೂ ನಮ್ಮ ಪುರಾಣಗಳಲ್ಲಿ ಕಂಡುಬರುವ ಪ್ರಮುಖ ದೇವಾನುದೇವತೆಗಳು ಹೀಗೆ ಹುಡುಕುತ್ತಾ ಹೊರಟರೆ ಸಾವಿರಾರು ದೇವರುಗಳನ್ನು ನಮ್ಮ ದೇಶದಲ್ಲಿ ಪೂಜಿಸುವುದನ್ನು ನಾವು ಕಾಣಬಹುದು.
ನಾವು ನುಡಿಯುವ ಸತ್ಯವೇ ಮತ್ತು ಪ್ರೀತಿಯ ಗುಣವೇ ನಮ್ಮ ದೇವರು. ಪ್ರತಿಯೊಬ್ಬ ಮನುಷ್ಯನಿಂದ ಹಿಡಿದು ಸಕಲ ಜೀವಿಗಳಲ್ಲಿ ಚರಾಚರ ವಸ್ತುಗಳಲ್ಲಿ ದೇವರು ಅಡಗಿದ್ದಾನೆ ಶಕ್ತಿಯ ರೂಪದಲ್ಲಿ.
ನಾವುಗಳು ಹಿಂದೂ ಧರ್ಮದಲ್ಲಿ ಹುಟ್ಟಿ ಬೆಳೆದು ಬಹು ದೇವತೆಗಳನ್ನು ಪೂಜಿಸಿ ಪ್ರಪಂಚದ ಸೃಷ್ಟಿಗೆ ಕಾರಣರಾದ ಎಲ್ಲಾ ದೇವರುಗಳು ಹಾಗೂ ದೇವತೆಗಳು ಮತ್ತು ನಮ್ಮ ನಂಬಿಕೆಗಳು ನಾವು ಸಾಗಿ ಬಂದ ಕಾಲದಲ್ಲಿ ನಡೆದ ಘಟನೆಗಳು ಅದು ಮಹಾಭಾರತ ರಾಮಾಯಣ ಮುಂತಾದ ಇತಿಹಾಸದ ಅಸಾಮಾನ್ಯರುಗಳು ಪ್ರಕೃತಿ ಜಗತ್ತು ಇವೆಲ್ಲವುಗಳಿಗೆ ಸಂಬಂಧಿಸಿದಂತೆ ಮನುಷ್ಯರು ಹುಟ್ಟುವ ಮಕ್ಕಳಿಗೆ ನಾಮದಾರಣೆ ಮಾಡಿರುತ್ತಾರೆ.
ನಾವು ಮಾಡುವ ಪ್ರತಿಯೊಂದು ಕೆಲಸದಲ್ಲಿ ಕೆಟ್ಟದ್ದು ಒಳ್ಳೆಯದು ಇರುತ್ತದೆ ಆ ಕೆಲಸವನ್ನು ದೇವರು ನಮ್ಮಿಂದ ಮಾಡಿಸಿರುತ್ತಾನೆ. ದೇವರು ನಮಗೆ ಎಲ್ಲವನ್ನೂ ತಿಳಿಸುತ್ತಾನೆ ಆದರೆ ನಾವು ಪಾಲಿಸದೆ ಕೆಟ್ಟದ್ದನ್ನೇ ಮಾಡುತ್ತಿರುತ್ತವೆ ಮಾಡಿದ ಪಾಪವನ್ನು ಕಂಡು ಪ್ರಾಯಶ್ಚಿತಕ್ಕೆ ದೇವರನ್ನು ಬೇಡುತ್ತವೆ ನಮ್ಮ ಹೆಸರು ನಮ್ಮನ್ನು ರಕ್ಷಿಸುತ್ತಿರುವ ದೇವಾನು ದೇವತೆಗಳು ದಯೆ ತೋರಿದ ಈ ಜೀವವೇ ಮನುಷ್ಯ.
ನಾವು ತಪ್ಪು ಅಥವಾ ಒಳ್ಳೆಯ ಕೆಲಸ ಮಾಡುವಾಗ ನಮ್ಮ ಮನಸ್ಸಿಗೆ ಬರುವ ದೇವರುಗಳು ನಾವು ದಿನವೂ ಪೂಜಿಸುವ ದೇವರುಗಳು ನಿಜವಾಗಿಯೂ ನಮ್ಮ ತಪ್ಪುಗಳನ್ನು ಮನ್ನಿಸಿ ನಮ್ಮನ್ನು ಕಷ್ಟದಿಂದ ಸಂತೋಷದಡಗೆ ಸಾಗಿಸುವ ದೇವರುಗಳಾಗಿರುತ್ತವೆ.
ಸಾವಿರ ದೇವರು ನನ್ನವನಾರು
ಪ್ರಪಂಚ ಆಳುವವರು ಬ್ರಹ್ಮ ವಿಷ್ಣು ಮಹೇಶ್ವರರು
ಬ್ರಹ್ಮನು ಪ್ರಪಂಚದ ಸೃಷ್ಟಿಸುವ
ವಿಷ್ಣು ಪ್ರಪಂಚವ ರಕ್ಷಿಸುವ
ಮೂರು ಕಣ್ಣು ಶಿವ ಬ್ರಹ್ಮಾಂಡವ ವಿಸರ್ಜಿಸುವ
ದೇವರುಗಳ ನಾಮ ಅವತಾರ ಹಲವು
ದೇವತೆಗಳು ನಮ್ಮ ಶಕ್ತಿಯ ಗೆಲುವು
ಮನಸ್ಸಿನಲ್ಲಿ ಬೇಡಿದ ವರವ ನೀಡುವ ದೇವರೇ ನನ್ನವನು.
ಮಾನವನ ಬದುಕಿನಲ್ಲಿ ಆಸೆಗಳನ್ನು ಇಡುವವನು ದೇವರೇ .ಸರಿ ತಪ್ಪುಗಳನ್ನು ಶಿಕ್ಷಿಸುವವನು ದೇವರೇ, ನಮ್ಮ ಮನಸ್ಸಿನಲ್ಲಿ ನಾವು ಮಾಡುವ ತಪ್ಪು ಗಳನ್ನು ತಿಳಿಸುವವನು ದೇವರೇ, ಎಲ್ಲಾ ಕಾರ್ಯಗಳನ್ನು ದೈವಶಕ್ತಿಯಂತೆ, ರಾಕ್ಷಸ ಶಕ್ತಿ ಇರುತ್ತದೆ. ತಪ್ಪು ರಾಕ್ಷಸ ಪ್ರವೃತ್ತಿಯಂತೆ ಸತ್ಯ ದೈವತ್ವವನ್ನು ತಿಳಿಸುತ್ತದೆ. ನಮ್ಮ ಜೀವನ ಭಗವಂತನ ಲೀಲೆ ನಾವಿಲ್ಲಿ ಅವನು ಆಡಿಸಿ ದಂತೆ ಆಡುವ ಗೊಂಬೆಗಳು.
********ಲೇಖಕರು*******
ಡಾ.ಚಂದ್ರಶೇಖರ ಸಿ. ಹೆಚ್
Comments
Post a Comment