ವೆಂಕಟರಮಣನೇ ಗೋವಿಂದ
ಹಾಡುವೆವು ನಾವು ನಿನ್ನ ನಾಮವ ಗೋವಿಂದ
ಬೇಡುವೆವು ನಾವು ಅನುದಿನವೂ ಆನಂದ
ನೀಡಿದರೆ ಚೆಂದ ಓ ಮುದ್ದು ಮುಕುಂದ
ನಾವೆಲ್ಲರೂ ಕೂಡ ನಿನ್ನ ಪ್ರೀತಿಯ ಕಂದ
ವೈಕುಂಠ ವಾಸಿ, ವೆಂಕಟರಮಣನೆ ಗೋವಿಂದ
ತಿರುಪತಿಯ ವಾಸಿ ತಿಮ್ಮಪ್ಪನೆ ಗೋವಿಂದ
ಭಕ್ತಿಯ ಪೂಜೆಯು ನಿನಗಾಗಿ ಗೋವಿಂದ
ಕಣ್ಣು ತೆರೆದು ನೋಡು ಓ ನಮ್ಮ ಗೋವಿಂದ
ಕೈಯಲ್ಲಿ ಶಂಖ ಚಕ್ರ ಹಿಡಿದು ಕಾಯುತ್ತಿರುವ ಗೋವಿಂದ
ಭಕ್ತರ ಕಷ್ಟ ನೀಗದಿದ್ರೆ ಏನ್ ಚಂದ
ನಿನ್ನ ನಾಮವನ್ನು ಬಜಿಸುತ್ತಿರಲು ಏನೋ ಆನಂದ
ಏಳುಕುಂಡಲವಾಡ ವೆಂಕಟರಮಣನೆ ಗೋವಿಂದ
ವಿಷ್ಣುವಿನ ಅವತಾರ ವೆಂಕಟೇಶನೆ ಗೋವಿಂದ
ಶ್ರೀದೇವಿ ಭೂದೇವಿ ಮಲ್ಲಯಪ್ಪ ಸ್ವಾಮಿ ಗೋವಿಂದ
ಭೋಗ ಶ್ರೀನಿವಾಸ ಉಗ್ರ ಶ್ರೀನಿವಾಸ ಕೊಲವು ಶ್ರೀನಿವಾಸ ಗೋವಿಂದ
ರಾಮ ಲಕ್ಷ್ಮಣ ಸೀತೆ ನೋಡುತ್ತಿಹರು ಗೋವಿಂದ
ಶ್ರೀಕೃಷ್ಣ ರುಕ್ಮಿಣಿ ಹೇಳುತಿಹರು ನೀನೇ ಅಂದ ಗೋವಿಂದ
ಹಾಡುವೆವು ನಾವು ನಿನ್ನ ನಾಮವ ಗೋವಿಂದ
ಬೇಡುವೆವು ನಾವು ಅನುದಿನವೂ ಆನಂದ
ನೀಡಿದರೆ ಚೆಂದ ಓ ಮುದ್ದು ಮುಕುಂದ
ನಾವೆಲ್ಲರೂ ಕೂಡ ನಿನ್ನ ಪ್ರೀತಿಯ ಕಂದ
ಶ್ರಿಮದ ರಮ ರಮಣ ಗೋವಿಂದ ಗೋವಿಂದ
*************ರಚನೆ**********
ಡಾ. ಚಂದ್ರಶೇಖರ ಸಿ. ಹೆಚ್
Comments
Post a Comment