ದೇಹ ಆಕಾರ
ನಮ್ಮ ದೇಹ ಒಂದು ಆಕಾರ
ದೇಹದ ತುಂಬಾ ಮೂಳೆ ಮಾಂಸಗಳೇ ಪೂರ
ಕಣ್ಣೊಂದು ನೋಡುತ್ತಿದೆ ಪ್ರಕೃತಿಯ ಪ್ರಚಾರ
ಗಾಳಿಯು ಒಂದು ಎಳೆಯುತ್ತಿದೆ ಶ್ವಾಸದ ತೇರ
ನರನಾಡಿಗಳಲ್ಲಿ ರಕ್ತದ ಸಂಚಾರ
ದೇಹ ಸಂಭ್ರಮಿಸುತ್ತಿದೆ ಜೀವಕೋಶದ ವ್ಯವಹಾರ
ತಲೆಯ ತುಂಬಾ ಓಡುತ್ತಿದೆ ತರ್ಲೆ ವಿಚಾರ
ಮನಸ್ಸು ಕುಣಿಯುತ್ತಿದೆ ಮಂಗ ಅತ್ತಿದಂತೆ ಮರ
ನಮ್ಮ ಹೃದಯದಿ ಬಡಿದಂತೆ ಸದ್ದು
ಆಕಾಶದೆ ಸಿಡಿಲು ಸಿಡಿದು ಭೂಮಿಗೆ ಮಳೆ ಬಿದ್ದು
ದೇಹವಾದಂತೆ ತಣ್ಣಗೆ ಖುಷಿಯ ಒದ್ದು
ಸೃಷ್ಟಿಸಿದ ಸೃಷ್ಟಿಕರ್ತನು ಎಷ್ಟು ಮುದ್ದು
ಮನಸ್ಸು ಏಕೋ ಕುಣಿದು ಮಾತನಾಡಿದೆ
ಕಾಲು ಚಕ್ರದಂತೆ ಊರೂರು ಸುತ್ತಿದೆ
ಕೈ ಒಂದು ದೇಹಕ್ಕೆ ಊಟ ತುಂಬಿದೆ
ಸೃಷ್ಟಿಸಿದ ಹುಟ್ಟು ಸಾವಿಂದ ಸುಟ್ಟು ಮಸಣ ಸೇರಿದೆ
ಬ್ರಹ್ಮ ಬರೆದ ಗುಟ್ಟು ನೆತ್ತಿಯಲ್ಲಿಟ್ಟು
ಮಾನವನ ಮನೆಯ ಬಾಗಿಲು ತಟ್ಟಿದೆ
ಸುಖ ದುಃಖಗಳ ವಿಚಾರ ದೇಹ ಮುಟ್ಟಿದೆ
ವಿಧಿಯೊಂದು ಕಾಯದೆ ನಮ್ಮ ಕರೆದಿದೆ
*************ರಚನೆ**********
ಡಾ.ಚಂದ್ರಶೇಖರ್. ಸಿ. ಹೆಚ್
Comments
Post a Comment