ಎಲೆ ಮಾನವ




ಹಾರುವ ಹಕ್ಕಿ ನಾನು

ಮಿಂಚುವ ಚುಕ್ಕಿ ನೀನು

ನಿನ್ನನು ಸೇರಲು ನನಗಾದಿತೆ


ತೇಲುವ ಮೋಡ ನೀನು

ಸಿಡಿಯುವ ಸಿಡಿಲು ನಾನು

ಸದ್ದಿಗೆ ಮಳೆ ಹನಿ ಸುರಿದಿತೆ


ಸೂರ್ಯನ ಕವಿದ ಮೋಡ

ಮಳೆ ಹನಿ ಸುರಿಸಿತು ನೋಡ

ಕಾಮನಬಿಲ್ಲು ಒಮ್ಮೆ ಮೂಡಿತೆ


ನಡೆಯುವ ದಾರಿಯಲಿ

ಇಬ್ಬನಿ ಹನಿಯೊಂದು

ಬಳ್ಳಿಯ ತಂಪಾಗಿ ಇಟ್ಟಿತೆ


ಸೂರ್ಯನ ಬೆಳಕು ತಾಗಿ

ಮುಂಜಾನೆ ಉದಯವಾಗಿ

ದಿನವು ನವ ಹರುಷ ತಂದಿತೆ


ಬೇಡುವ ದೇವರಿಗೆ

ನೆತ್ತರು ಚೆಲ್ಲಿದರೆ

ಪಾಪಕೆ ಕೊನೆ ಸಿಕ್ಕೀತೆ


ಸಿಟ್ಟಲಿ ಹತ್ತಿದ ಬೆಂಕಿ

ಸುದುತಿದೆ ನಿನ್ನ ಮನವ

ತಡೆಯಲು ನಿನ್ನಿಂದ ಹಾದಿತೆ


ಕಾಯುವ ದೈವ ನೀನು

ಪೂಜುವ ಭಕ್ತ ನಾನು

ನಿನ್ನನು ಬೈದರೆ ಬದುಕು ಉಳಿದೀತೆ


ಸತ್ತ ಕಳೆಬರಹದ ಮುಂದೆ

ಸುತ್ತಿ ಅತ್ತರೆ ನೀನು

ಹೋದ ಜೀವ ಮರಳಿ ಬಂದೀತೆ


ಓಡುತಿರುವ ಕಾಲದಲಿ

 ಹಸಿದು ಬೆಡುವವಗೆ ನಿಡದಿರೆ

ಯಾರಿಗಾದೆಯೂ ಎಲೆ ಮಾನವ ಎಂದು

ಕಾಲ ಹೇಳದೆ ಬಿಟ್ಟೀತೇ



**************ರಚನೆ********

ಡಾ.ಚಂದ್ರಶೇಖರ ಸಿ. ಹೆಚ್

Comments

Popular posts from this blog

ಭಾವಗೀತೆ -51

ಭಾವ ಗೀತೆ-1

ಭಾವ ಗೀತೆ- 20