ನನ್ನ ಉಸಿರು ನೀನು

 



ನನ್ನ ಉಸಿರಲ್ಲಿ

ಉಸಿರಾದೆ ನೀನು

ನಿನ್ನ ಹೃದಯದಿ

ಬಡಿದು ಹಸಿರಾದೆ ನಾನು


ನೀ ಬೇಡುವ ನಯನ

ನಾ ಕಾಡುವ ಕಿರಣ

ಈ ನಗುವ ಒಲವೇ

ಭಾವನೆಗಳಯಾನ


ಆ ಬಳ್ಳಿಯ ಎಲೆಗೆ

ಅಪ್ಪೋ ಇಬ್ಬನಿ ಹನಿಯು

ಸೂರ್ಯನ ಕಿರಣಕೆ ತಿರುಗೋ

ಆ ಹೂವೆ ನೆಲೆಯೂ


ನೀ ಮನದಲಿ ಬಂದು

ಕಾಡುವೆ ದಿನವೂ



ನಾ ನೋಡದೆ ನಿನ್ನಾ

ಹೇಗೆ ತೆರಳಲಿ ಇನ್ನಾ

ನೀ ಅರಳುವ ಹೂವು

ನಾ ಬೇಡುವ ದುಂಬಿ


ನಾ ಹೇಗೆ ಮರೆಯಲಿ ನಿನ್ನಾ

ಹೂವೆ ಹೇಳು


ಹಾ ತಂಗಾಳಿಗೆ

ತೇಲುವ ಅಲೆಗಳೇ

ದಡವ ಸೇರಿದಂತೆ

ನಗುವ ಕಡಲೆ


ಕಣ್ಣ ಹನಿಯ ಬಿಂದು

ಕರಗಲು ಬಿಡೆನು ಎಂದು

ಆಸೆಗಳು ಕಾಡಿತಲ್ಲ

 ಕಣ್ಣ ಅಂಚಲೆ


ನೀ ಸಂಗೀತವಾದೆ

ಹೃದಯದಿ ಬಡಿದು

ನೀ ಮರಳಿ ಕಾಡುವೆ

ನನ್ನ ಉಸಿರ ತೆರೆದು


ನಾ ಪಡೆಯಲೇಬೇಕು

ಆ ಕನಸ್ಸುಗಳನ್ನ

ನಾ ಕೇಳಲೇಬೇಕು

ಹಿತ ನುಡಿಗಳನ್ನ


ಪ್ರೇಮಾಗಿಯ ಹೃದಯದಲ್ಲಿ

ನಿನದೆ ನೆನೆಪು

ಕುಡಿ ನೋಟದ ಚೆಲುವಿನಲ್ಲಿ

ಕಾಡುವ ಹೊಳಪು


ನಿನ್ನ ಒಮ್ಮೊಮ್ಮೆ

ನೋಡುವ ಆಸೆ

ನೋಡಿದ ನನಗೆ

ಕರೆವಾಸೆ ಮನದ ಮನೆಗೆ


ನೀ ಕಾಡುವ ಹೂವು

ನಾ ಬೇಡುವ ದುಂಬಿ

ನಾ ಹೇಗೆ ಮರೆಯಲಿ

ನಿನ್ನ ಹೂವೆ ಹೇಳು


ಕಣ್ಣ ಹನಿಯ ಬಿಂದು

ಕರಗಲು ಬಿಡೆನು ಎಂದು

ಆಸೆಗಳು ಕಾಡಿತಲ್ಲ

ಕಣ್ಣ ಅಂಚಲೆ


ನನ್ನ ನೀ ಸೇರು

ಹೃದಯದಿ ಬಂದು

ತಿರುಗಿ ಹೋಗಬೇಡ

ಮತ್ತೆ ಎಂದು


ನೀ ಕಾಡುವ ಹೂವು

ನಾ ಬೇಡುವ ದುಂಬಿ

ನಾ ಹೇಗೆ ಮರೆಯಲಿ

ನಿನ್ನ ಹೂವೆ ಎಳು


*************ರಚನೆ ****

ಡಾ. ಚಂದ್ರಶೇಖರ. ಸಿ. ಹೆಚ್

Comments

Popular posts from this blog

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ

ಚುಟುಕು ಕವನ-35